Advertisement

Rakshita Bharathkumar: ಮಹಿಳಾ ಸಂಘಟನೆಗೆ ಶಕ್ತಿ ನೀಡಿದ ರಕ್ಷಿತಾ

03:03 PM Nov 01, 2023 | Team Udayavani |

ಸಾಮಾನ್ಯ ಕಾರ್ಯಕರ್ತರಾಗಿ ರಾಜಕೀಯ ಎಂಟ್ರಿ ಕೊಟ್ಟ ಈ ಮಹಿಳೆ ಇಂದು ಜಿಲ್ಲೆಯ ಯುಥ್‌ ಐಕಾನ್‌ ಆಗಿ ಹೊರ ಹೊಮ್ಮಿದ್ದಾರೆ. ಮಹಿಳೆಯರು ರಾಜಕೀಯದಲ್ಲೂ ಗಟ್ಟಿಯಾಗಿ ನೆಲೆ ಕಂಡುಕೊಳ್ಳಬಹುದೆಂದು ತೋರ್ಪಡಿಸಿದ್ದಾರೆ. ತಮ್ಮ ಜನಮುಖೀ-ಸಮಾಜಮುಖೀ ಕಾರ್ಯಗಳ ಮೂಲಕ ಇಡೀ ರಾಜ್ಯ ನಾಯಕರ ಗಮನ ಸೆಳೆದಿದ್ದಾರೆ. ಸಂಘಟನೆಯನ್ನೇ ಶಕ್ತಿಯನ್ನಾಗಿ ರೂಪಿಸಿಕೊಂಡಿದ್ದಾರೆ.

Advertisement

ಹೌದು. ಅವರೇ ಶ್ರೀಮತಿ ರಕ್ಷಿತಾ ಭರತಕುಮಾರ ಈಟಿ. ಅಧಿಕಾರಕ್ಕಿಂತ ಸಮಾಜ ಸೇವೆಯೇ ಮುಖ್ಯ ಎನ್ನುವ ದಿಟ್ಟ ನಾಯಕಿ. ಜನರ ಅಧಿಕಾರ ಜನರ ಕೈಯಲ್ಲಿರಬೇಕು. ಪ್ರಜಾಪ್ರಭುತ್ವ ಸಾಕಾರಗೊಳಿಸಬೇಕು. ಹಣವಂತರು, ಅಧಿಕಾರಸ್ಥ ಕುಟುಂಬಸ್ಥರು, ರಾಜಕಾರಣ ಕುಟುಂಬದ ಹೆಣ್ಣು ಮಕ್ಕಳು ಮಾತ್ರ ಮಹಿಳಾ ರಾಜಕಾರಣಿಯಾಗಬೇಕು ಎಂಬುದಕ್ಕಿಂತ ಸಾಮಾನ್ಯ ಕುಟುಂಬದ ಮಹಿಳೆ ಕೂಡಾ ರಾಜಕೀಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಬೇಕೆಂಬ ಹಂಬಲ ಇವರದು.

10 ವರ್ಷಗಳಿಂದ ನಿರಂತರ ಸಂಘಟನೆ
ಬಾಗಲಕೋಟೆ ಕೇಂದ್ರವಾಗಿಸಿಕೊಂಡಿರುವ ರಕ್ಷಿತಾ ಭರತಕುಮಾರ ಈಟಿ ಜಿಲ್ಲೆಯ ಪ್ರತಿಯೊಬ್ಬರು ಕಾರ್ಯಕರ್ತರು, ಶ್ರೀಸಾಮಾನ್ಯರಿಗೂ ಚಿರಪರಿಚಿತ. ಕಾಂಗ್ರೆಸ್‌ ಅಧಿನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಂತಹ ಹಿರಿಯರಿಗೂ ಅವರ ಕಾರ್ಯವೈಖರಿ, ಪಕ್ಷ ಸಂಘಟನೆಯ ಶೈಲಿ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ಹಲವು ವರ್ಷಗಳಿಂದ ಜನಮಾನಸದಲ್ಲಿ ಉಳಿಯುವ ಕೆಲಸ ಮಾಡಿದ್ದಾರೆ.

ಪಕ್ಷ ಹಾಗೂ ಸಾರ್ವಜನಿಕರ ವಲಯದಲ್ಲಿ ರಕ್ಷಿತಾ ಈಟಿ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಆದ್ಯತೆ ನೀಡಬೇಕೆನ್ನುವ ಒತ್ತಾಯ ಕೇಳಿ ಬಂದಿದೆ. ಎಲ್ಲ ಸಮಾಜದೊಂದಿಗೆ ಉತ್ತಮ ಬಾಂಧವ್ಯ, ಒಡನಾಟ ಹೊಂದಿರುವ ರಕ್ಷಿತಾ ಅತ್ಯುತ್ತಮ ನಾಯಕಿ ಎಂದು ಗುರುತಿಸಿಕೊಂಡಿದ್ದಾರೆ.

Advertisement

ಸಮಾಜಮುಖೀ ಕಾರ್ಯಕ್ಕೆ ಈಟಿ ಫೌಂಡೇಶನ್‌
ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ತರಲು ಅಂದು ಸರ್ಕಾರ ವಿಧಿಸಿರುವ ಲಾಕ್‌ಡೌನ್‌ ಜನರ ಬದುಕು ತಲ್ಲಣಗೊಳಿಸಿದೆ. ಕಾರ್ಮಿಕರು, ಬಡವರು, ನಿರ್ಗತಿಕರು ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುವುದನ್ನು ಕಂಡ ಉದ್ಯಮಿ, ಬಸವೇಶ್ವರ ಬ್ಯಾಂಕ್‌ ನಿರ್ದೇಶಕ ಭರತಕುಮಾರ ಈಟಿ, ಮಹಿಳಾ ಕಾಂಗ್ರೆಸ್‌ ಘಟಕ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ ನೇತೃತ್ವದ ಬಾಗಲಕೋಟೆಯ ಎಂ.ಎಸ್‌.ಈಟಿ ಫೌಂಡೇಶನ್‌ ಜಿಲ್ಲೆಯಾದ್ಯಂತ ತನ್ನದೇ ಆದ ಸೇವೆ ಮಾಡಿದೆ.

ಬಡವರು, ಕಾರ್ಮಿಕರು, ವಲಸಿಗರು, ವಾರಿಯರ್ಗಳಿಗೆ ಲಾಕ್‌ಡೌನ್‌ ಸಂದರ್ಭದಲ್ಲಿ 60 ದಿನಗಳಿಂದ ನೆರವಿನ ಹಸ್ತ ಚಾಚಿತು.
ದಾಸೋಹ ಮತ್ತು ಸೇವಾ ಪರಂಪರೆ ಸಾಕ್ಷೀಕರಿಸಿತು. ಸರ್ಕಾರಿ ಕಚೇರಿಗಳಲ್ಲಿ ಈಟಿ ಫೌಂಡೇಶನ್‌ನಿಂದ ಸ್ಯಾನಿಟೈಜರ್‌ ಸಿಂಪರಿಸುವ ವಿನೂತನ ಮಾದರಿಯ ಆಧುನಿಕ ಯಂತ್ರ ಅಳವಡಿಸಲಾಯಿತು.

ಹಸಿದವರಿಗೆ ಆಹಾರ
ಹೊಟ್ಟೆಪಾಡಿಗಾಗಿ ಉತ್ತರ ಪ್ರದೇಶ, ಆಸ್ಸಾಂ, ಓರಿಸ್ಸಾ ರಾಜ್ಯದ ನೂರಾರು ಕಾರ್ಮಿಕರು ದುಡಿಮೆ ಮಾಡಲು ಬಾಗಲಕೋಟೆಯಲ್ಲಿ ನೆಲೆಸಿದ್ದರು.

ಲಾಕ್‌ಡೌನ್‌ ಪರಿಣಾಮ ಕೆಲಸ ಕಳೆದುಕೊಂಡು ಕೈಯಲ್ಲಿ ಕಾಸು ಇಲ್ಲದೆ ಮರಳಿ ತವರೂರು ಸೇರಲಾಗದೇ ಪರಿತಪಿಸುತ್ತಿದ್ದರು. ಇದನ್ನು ಮನಗಂಡ ಈಟಿ ಫೌಂಡೇಶನ್‌ ಮೂಲಕ ರಕ್ಷಿತಾ ಈಟಿ ಎರಡು ತಿಂಗಳಿಗೆ ಅಗತ್ಯವಿರುವ 25 ಕೆಜಿ ಅಕ್ಕಿ, 5 ಕೆ.ಜಿ ಅಡುಗೆ ಎಣ್ಣೆ, 10 ಕೆ.ಜಿ ಗೋಧಿಹಿಟ್ಟು, 5 ಕೆ.ಜಿ.ತೊಗರಿ ಬೆಳೆ, 10 ಕೆ.ಜಿ. ಸಕ್ಕರೆ, 2 ಕೆ.ಜಿ.ಚಹಾಪುಡಿ ಇತರೆ ಮಸಾಲೆ ಆಹಾರ ಪದಾರ್ಥಗಳನ್ನೊಳಗೊಂಡ ಕಿಟ್‌ ಸಿದ್ಧಪಡಿಸಿ 250ಕ್ಕೂ ಹೆಚ್ಚು ಉತ್ತರ ಭಾರತ ಕಾರ್ಮಿಕರಿಗೆ ವಿತರಿಸಿತು.

ಅಲ್ಲದೆ ಕೊರೊನಾ ಸೇನಾನಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಬಾಲಕೋಟೆಯ 50 ಜನ ಪತ್ರಿಕಾ ವಿತರಕರಿಗೆ, ನವನಗರದ 65 ಆಶಾ ಕಾರ್ಯಕರ್ತೆಯರಿಗೆ, 250 ಕ್ಕೂ ಹೆಚ್ಚು ಹೆಸ್ಕಾಂನ ಲೈನ್‌ಮೆನ್‌ಗಳಿಗೆ ಒಂದು ತಿಂಗಳಿಗೆ ಅವಶ್ಯವಿರುವ 5 ಕೆ.ಜಿ. ಗೋಧಿ, 2 ಕೆ.ಜಿ.ಸಕ್ಕರೆ, 1ಕೆ.ಜಿ ತೊಗರಿ ಬೆಳೆ ಒಳಗೊಂಡ ಆಹಾರದ ಕಿಟ್‌ ನೀಡಿ ಸಂಕಷ್ಟದಲ್ಲಿವರಿಗೆ ಆಸರೆಯಾಗಿದ್ದು ಇವರ ಮಾನವೀಯ ಕಾರ್ಯಕ್ಕೆ ಹಿಡಿದ ಕೈಗನ್ನಡಿ.

ರಂಜಾನ್‌ ಹಬ್ಬಕ್ಕೆ ಈದ್‌ ಕಿಟ್‌
ಕೊರೊನಾ ಎಂಬ ಮಾರಿ ಎಲ್ಲ ಸಮಾಜ, ವರ್ಗದವರನ್ನು ಹೈರಾಣ ಮಾಡಿತ್ತು. ಬಡ ಮುಸ್ಲಿಂ ಕುಟುಂಬಗಳಂತೂ ರಂಜಾನ್‌ ಹಬ್ಬ ಆಚರಣೆಗೆ ಹಿಂದೇಟು ಹಾಕುವಂತಾಗಿತ್ತು. ಆದ್ದರಿಂದ ಬಾಗಲಕೋಟೆ ನಗರದ 150ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳಿಗೆ ಶಾವಗಿ, ಗೋಡಂಬಿ, ಒಣ ದ್ರಾಕ್ಷಿ, ಬದಾಮ, ಉತ್ತತ್ತಿ ಸೇರಿದಂತೆ ಸಿಹಿ ಆಹಾರ ಸಿದ್ಧಪಡಿಸಲು ಬೇಕಾಗುವ ಅಗತ್ಯ ಆಹಾರ ನೀಡಿದ್ದರು.

ಅಲ್ಲದೇ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಸರ್ಕಾರ ಆದೇಶಿಸಿದಾಗ ಆರಂಭದಲ್ಲಿ ಸಾರ್ವಜನಿಕರಿಗೆ ಮಾಸ್ಕ್ಗಳ ಕೊರತೆ ಎದುರಾಗಿತ್ತು. ಈ ಸಂದರ್ಭದಲ್ಲಿ ಈಟಿ ಫೌಂಡೇಶನ್‌ ತಮ್ಮ ಮಹಿಳಾ ಸ್ವ ಸಹಾಯ ಸಂಘಗಳ ಆರ್ಥಿಕ ಬಲ ಹೆಚ್ಚಿಸಲು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲು 3500 ಮಾಸ್ಕ್ಗಳನ್ನು ಮಹಿಳಾ ಸಂಘಗಳಿಂದ ಖರೀದಿಸಿ ವಿತರಿಸಿದ್ದರು.

ಸಂಘಟನೆಯ ಛಾಪು
ಯಾವುದೇ ಕಳಂಕವಿಲ್ಲದೆ ಪಕ್ಷ ಸಂಘಟನೆ, ಕರ್ತವ್ಯ ಮಾಡಿರುವ ರಕ್ಷಿತಾ ಈಟಿ ಅವರು ಪಕ್ಷದ ವರಿಷ್ಠರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. 2007 ರಿಂದ 2009 ರವರೆಗೆ ಬಾಗಲಕೋಟೆಯ ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, 2009 ರಿಂದ 2010 ರವರೆಗೆ ಯುವ ಕಾಂಗ್ರೆಸ್‌ ಜಿಲ್ಲಾ ಕಾರ್ಯದರ್ಶಿಯಾಗಿ, 2010 ರಿಂದ 2015 ರವರೆಗೆ ಯುವ ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, 2015ರಿಂದ 2017 (ನವೆಂಬರ್‌)ವರೆಗೆ ಯುವ ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷೆಯಾಗಿ, 2017 ನವೆಂಬರ್‌ದಿಂದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸದ್ಯ ಕೆಪಿಸಿಸಿ ಸದಸ್ಯೆಯೂ ಆಗಿರುವ ಅವರು, ಮೇಕೆದಾಟು ಪಾದಯಾತ್ರೆಯಿಂದ ಕೆಪಿಸಿಸಿ ನಿಯಂತ್ರಣ ಕೊಠಡಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸೇವಾದಳ ಶಾಲೆಯಲ್ಲಿ ಸಲಹೆಗಾರ ಸಮಿತಿ ಸದಸ್ಯೆ, ಎಂ.ಎಸ್‌.ಈಟಿ ಫೌಂಡೇಶನ್‌ ಬಾಗಲಕೋಟೆ ಕಾರ್ಯದರ್ಶಿ, ಇನ್ನರ್‌ವೀಲ್‌ ಕ್ಲಬ್ ಬಾಗಲಕೋಟೆ ಸದಸ್ಯೆ, ಪ್ರಗತಿ ಮಹಿಳಾ ಮಂಡಳ, ಭಗನಿ ಸಮಾಜ ಬಾಗಲಕೋಟೆ ಸದಸ್ಯೆಯಾಗಿದ್ದಾರೆ.

ಕಾಂಗ್ರೆಸ್‌ ಕಟ್ಟಾಳು
ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ಸರ್ಕಾರ ವಿರುದ್ಧ ನಾನಾ ಪ್ರತಿಭಟನೆ, ಹೋರಾಟಗಳನ್ನು ನೇತೃತ್ವ ವಹಿಸಿ ಯಶಸ್ವಿಗೊಳಿಸಿದ್ದಾರೆ. ಇಂಧನ ಮತ್ತು ಸಿಲಿಂಡರ್‌ ಏರಿಕೆ ವಿರುದ್ಧ ರಣಕಹಳೆ ಮೊಳಗಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂದಿರಾ ಗಾಂಧಿ ನಮನ, ಅರಿಷಿಣ-ಕುಂಕುಮ, ಮನೆ-ಮನೆ ಕಾಂಗ್ರೆಸ್‌ ಮತ್ತು ಮಹಿಳಾ ಕಾಂಗ್ರೆಸ್‌ ಶಕ್ತಿ ಕಾರ್ಯಕ್ರಮ ಹಮ್ಮಿಕೊಂಡು ಮರೆಯಲಾಗದ ಸೇವೆ ಮಾಡಿದ್ದಾರೆ. ನಾನು ಶಕ್ತಿ ಕಾರ್ಯಕ್ರಮದಲ್ಲಿ ಬಾಗಲಕೋಟ ವಿಧಾನಸಭೆ ಕ್ಷೇತ್ರದಲ್ಲಿ 5 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ನೋಂದಾಯಿಸಿದ್ದು, ಯಾರೂ ಮರೆತಿಲ್ಲ.

2004ರಲ್ಲಿ ಗೋಕಾಕ ವಿಧಾನಸಭಾ ಮತಕ್ಷೇತ್ರದ ಚುನಾವಣೆ ಕ್ಷೇತ್ರದಲ್ಲಿ ಮಾಡಿದ ಕಾರ್ಯದಿಂದ ಪಕ್ಷ ಗೆಲ್ಲುವಂತಾಯಿತು. 2008 ಮತ್ತು 2013ರಲ್ಲಿ ಬಾಗಲಕೋಟೆ ವಿಧಾನಸಭೆ, 2009 ಮತ್ತು 2014ರ ಬಾಗಲಕೋಟೆ ಲೋಕಸಭಾ, ಬಾಗಲಕೋಟೆ ಜಿಲ್ಲೆಯಲ್ಲಿ 2018 ವಿಧಾನಸಭಾ ಚುನಾವಣೆ ಮತ್ತು 2018ರ ಜಮಖಂಡಿ ಚುನಾವಣೆಯಲ್ಲಿ ಶ್ರಮಿಸಿದ್ದರು. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ರೀತಿ ಶ್ಲಾಘನೀಯ. ಸೋತರೂ, ಗೆದ್ದರೂ ಮತ ಗಳಿಕೆ ಪ್ರಮಾಣ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಇವರ ಸಂಘಟನಾ ಶಕ್ತಿ ಎಂದರೆ ತಪ್ಪಲ್ಲ.

ಮಕ್ಕಳಿಂದ ವೃದ್ಧರವರೆಗೂ ವಿಶೇಷ ಕಾಳಜಿ
2018-2019ರಲ್ಲಿ ಇತಿಹಾಸದಲ್ಲಿ ಕಂಡು ಕೇಳರಿಯದ ಪ್ರವಾಹ ಉಂಟಾಗಿದ್ದು, ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳು ಉಕ್ಕಿ ಹರಿದಿದ್ದವು. ಜನ- ಜಾನುವಾರು ಸೇರಿದಂತೆ ಜೀವ ಸಂಕುಲುಗಳೇ ಸಂಕಟಕ್ಕೆ ಸಿಲುಕಿದ್ದವು. ಎಂ.ಎಸ್‌.ಈಟಿ ಫೌಂಡೇಶನ್‌ ಮೂಲಕ ಪ್ರವಾಹ ಪೀಡಿತ ಪ್ರದೇಶದ ನೂರಾರು ಗ್ರಾಮಗಳ ಗಂಜಿ ಕೇಂದ್ರಕ್ಕೆ ಭೇಟಿ ನೀಡಿದ ರಕ್ಷಿತಾ ಭರತಕುಮಾರ ಈಟಿ ಗೃಹೋಪಯೋಗಿ ವಸ್ತುಗಳಾದ ಸೊಳ್ಳೆ ಪರದೆಗಳು, ಹೊದಿಕೆಗಳು, ಪಾತ್ರೆಗಳು, ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಸಾವಿರ ಸಾವಿರ ಸಂಖ್ಯೆಯಲ್ಲಿ ವಿತರಿಸಿದ್ದು ಇಂದಿಗೂ ಜನ ಮರೆತಿಲ್ಲ. ಬಡ ಶಾಲಾ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್‌ಗಳಿಗೆ ಸಹಕಾರಿಯಾಗಲು ಸ್ಮಾರ್ಟ್‌ಫೋನ್‌ ನೀಡುವ ಮೂಲಕ ಶೈಕ್ಷಣಿಕ ಸಹಕಾರ ನೀಡಿದ್ದರು. ಕೋವಿಡ್‌ ಯೋಧರು, ಮಹಿಳೆಯರಿಗೆ ಶಾಲಾ ಮಕ್ಕಳಿಗೆ ಜಿಂಕ್‌, ವಿಟಮಿನ್‌-ಸಿ, ಸ್ಯಾನಿಟೈಸರ್‌, ಮಾಸ್ಕ್ ಮತ್ತು ಪಿಪಿಇ ಕಿಟ್‌ಗಳನ್ನೊಳಗೊಂಡ ಆರೋಗ್ಯ ಕಿಟ್‌ ವಿತರಿಸಿ, ಗಮನ ಸೆಳೆದಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ನೇಕಾರರು, ಕೃಷಿಕರು, ನೀರಾವರಿ, ಶಿಕ್ಷಣ, ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಯಾಗಬೇಕು. ಮುಂಬರುವ ಲೋಕಸಭೆ ಚುನಾವಣೆಗೆ ಬಾಗಲಕೋಟೆ ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಪಕ್ಷ-ಹಿರಿಯರು ಅವಕಾಶ ನೀಡುವ ವಿಶ್ವಾಸವಿದೆ. ನಮ್ಮದು ರಾಷ್ಟ್ರೀಯ ಪಕ್ಷ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ ನೇತೃತ್ವದ ನಮ್ಮ ಸರ್ಕಾರ ಪ್ರತಿಯೊಂದು ವರ್ಗಕ್ಕೂ ಜಾತಿ-ಬೇಧವಿಲ್ಲದೇ ಹಲವು ಯೋಜನೆ ಕೊಡುತ್ತಿದೆ. ಕೇಂದ್ರದಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಬಲಿಷ್ಠಗೊಂಡಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲೂ ಗೆದ್ದು, ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಕೇಂದ್ರ, ರಾಜ್ಯ ಸರ್ಕಾರ ಯಾವುದೇ ಇರಲಿ ಅಭಿವೃದ್ಧಿಗೆ ಆದ್ಯತೆ ನೀಡುವ ವ್ಯಕ್ತಿ ಜನಪ್ರತಿನಿಧಿಯಾಗಬೇಕು ಎಂಬುದು ನನ್ನ ನಿಲುವು.
– ರಕ್ಷಿತಾ ಭರತಕುಮಾರ ಈಟಿ, ಜಿಲ್ಲಾ ಅಧ್ಯಕ್ಷೆ, ಮಹಿಳಾ ಕಾಂಗ್ರೆಸ್‌, ಬಾಗಲಕೋಟೆ

Advertisement

Udayavani is now on Telegram. Click here to join our channel and stay updated with the latest news.

Next