ಮಹಾನಗರ: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಆಶ್ರಯದಲ್ಲಿ ಮುಸ್ಲಿಂ ಸಮುದಾಯದಿಂದ ಮಳೆಗಾಗಿ ಸಾಮೂಹಿಕ ವಿಶೇಷ ನಮಾಜ್ ಮತ್ತು ಪ್ರಾರ್ಥನೆ ನಗರದ ನೆಹರೂ ಮೈದಾನದಲ್ಲಿ ಬುಧವಾರ ನಡೆಯಿತು.
ಧರ್ಮ ಗುರುಶೇಖ್ ಸಾಕಿಬ್ ಸಲೀಂ ಉಮ್ರಿ ಅವರು ನಮಾಜ್ ಮತ್ತು ಪ್ರವಚನ ನೆರವೇರಿಸಿ,ಮಳೆ,ಬೆಳೆ,ಗಾಳಿ, ಬೆಳಕು,ಅನ್ನಾಹಾರ ಸಹಿತ ಎಲ್ಲವನ್ನೂ ಅಲ್ಲಾಹನೇ ಕೊಡುತ್ತಾನೆ ಎಂದ ರು.
ಮಾನವೀಯತೆ ಮರೆತಾಗಲೆಲ್ಲ ಮಳೆ ಕೊರತೆಯಾದ, ಹೆಚ್ಚಿನ ಮಳೆಯಿಂದ ಜಲಪ್ರಳಯವಾದ ಉದಾಹರಣೆಗಳಿವೆ. ದೇವರು ನೀಡುವ ನೀರನ್ನು ಪೋಲು ಮಾಡದೆ,ಜಾಗ್ರತೆ ವಹಿಸಬೇಕು ಎಂದು ಇಸ್ಲಾಮ್ ಕಲಿಸುತ್ತದೆ.ಇದನ್ನು ಪಾಲಿ ಸುವುದು ಎಲ್ಲರ ಜವಾಬ್ದಾರಿ ಎಂದರು.
ಎಸ್‌ಕೆಎಸ್‌ಎಂನ ಎಂ.ಜಿ.ಮೊಹಮ್ಮದ್ ಮಾತನಾಡಿ, ಜನರು ಅಕ್ರಮ,ಅನ್ಯಾಯದಲ್ಲಿ ತೊಡಗಿದಾಗ ಇಂಥ ಪ್ರಕೃತಿ ವೈಪರೀತ್ಯಗಳು ಬರುತ್ತಿದ್ದು,ಅದರ ನಿವಾರಣೆಗೆ ಪ್ರಾರ್ಥನೆ ಮಾಡಬೇಕೆಂದು ನಾವು ಪ್ರಾರ್ಥನೆ ಮಾಡಿದ್ದೇವೆ ಎಂದರು.
ಶಾಸಕ ವೇದವ್ಯಾಸ ಡಿ.ಕಾಮತ್ ಉಪಸ್ಥಿತರಿದ್ದರು.
ಮಹಿಳೆಯರ ಪ್ರಾರ್ಥನೆ
ಮುಸ್ಲಿಂ ಸಮುದಾಯದಿಂದ ಮಳೆಗಾಗಿ ನಡೆದ ಸಾಮೂ ಹಿಕ ಪ್ರಾರ್ಥನೆಯಲ್ಲಿ ಹಿರಿಯರು,ಕಿರಿಯರು,ಮಹಿಳೆಯರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರು.