Advertisement
ಬರದ ಮೇಲಿನ ಚರ್ಚೆಗೆ ಬುಧವಾರ ಉತ್ತರ ನೀಡಿದ ಅವರು, ರೈತರ ಸಾಲ ಮನ್ನಾ ಯೋಜನೆಯ ಬಗ್ಗೆ ಯಾವುದೇ ಅಪ ನಂಬಿಕೆ ಬೇಡ. ರಾóàಕೃತ ಬ್ಯಾಂಕುಗಳು ರೈತರಿಗೆ ಬೇಬಾಕಿ ಪತ್ರ ನೀಡದಿದ್ದರೂ ರಾಜ್ಯ ಸರ್ಕಾರವೇ ಸಾಲ ಮನ್ನಾ ವ್ಯಾಪ್ತಿಗೆ ಎಲ್ಲ ರೈತರಿಗೂ ಬೇಬಾಕಿ ಪತ್ರವನ್ನು ತರಿಸಲಿದೆ. ಈ ಬೇಬಾಕಿ ಪತ್ರದ ಮೂಲಕ ರೈತರು ಮುಂದಿನ ಹಂಗಾುಗೆ ಸಾಲ ಪಡೆಯಲು ಅರ್ಹತೆ ಪಡೆಯುತ್ತಾರೆ. ಸಾಲ ಮನ್ನಾ ಪ್ರಕ್ರಿಯೆಯನ್ನು ಚುರುಕುಗೊಳಿಸಲು ರಿಯ ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ಶೇಷ ಕೋಶ ರಚಿಸಲಾಗಿದೆ. ಈ ತಂಡವು ಸಾಲ ಮನ್ನಾಕ್ಕೆಸಂಬಂಧಿಸಿದಂತೆ ವೈಜ್ಞಾನಿಕವಾಗಿ, ಸಾಫ್ಟ್ವೇರ್ ಸಿದ್ಧಪಡಿಸಿದ್ದಾರೆ. ಸಾಲ ಮನ್ನಾ ವ್ಯಾಪ್ತಿಗೆ ಬರುವ ರೈತರ ಮಾತಿ ಸಂಗ್ರಸಲಾಗುತ್ತಿದ್ದು ಇದಕ್ಕಾಗಿ ಆಧಾರ್, ಪಹಣಿ ಮತ್ತು ರೇಷನ್ ಕಾರ್ಡ್ ವರನ್ನು ಮಾತ್ರ ಪಡೆಯುತ್ತಿದ್ದೇವೆ ಎಂದು ಹೇಳಿದರು.
Related Articles
Advertisement
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದಾಗ ಮಾಡಿದ ಸಾಲಮನ್ನಾ ಬಾಕಿಯನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಬ್ಯಾಂಕುಗಳಿಗೆ ಮರುಪಾವತಿ ಮಾಡಿದ್ದರು. ಅದೇ ರೀತಿ, ಸಿದ್ದರಾಮಯ್ಯ ಅವರ ಸರ್ಕಾರ ಮಾಡಿದ ಸಾಲಮನ್ನಾ ಯೋಜನೆಯ ಬಾಕಿಯನ್ನು ಮೈತ್ರಿ ಸರ್ಕಾರ ಮರುಪಾವತಿಸಿದೆ. ಸರ್ಕಾರ ಒಮ್ಮೆ ಆದೇಶ ಹೊರಡಿಸಿದರೆ ಮುಂಬವರು ಸರ್ಕಾರದ ಜವಾಬ್ದಾರಿಯೂ ಇದರಲ್ಲಿ ಇರುತ್ತದೆ ಎಂದರು.
ಸರ್ಕಾರ ಸತ್ತಿಲ್ಲ ಜೀವಂತವಾಗಿದೆ ಎಂಬುದನ್ನು ಕಾರ್ಯಕ್ರಮಗಳ ಮೂಲಕ ತೋರಿಸಿಕೊಡುತ್ತೇನೆ ಮತ್ತು ಪ್ರತಿಪಕ್ಷಗಳ ಈ ಆರೋಪಕ್ಕೆ ಕಾಲವೇ ಉತ್ತರಿಸಲಿದೆ. ಕೇವಲ 6 ತಿಂಗಳಲ್ಲಿ 28 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿುಂದ ನೀಡಲಾಗಿದೆ. ಕೇಂದ್ರ ಸರ್ಕಾರ ಸ್ವಾುನಾಥನ್ ವರದಿ ಅನುಷ್ಠಾನ ಮಾಡಿಲ್ಲ ಹಾಗೂ ಮಹಾರಾಷ್ಟ್ರ, ಉತ್ತರಪ್ರದೇಶದಲ್ಲಿ ಸಾಲಮನ್ನಾ ಹೇಗೆ ಮಾಡಿದ್ದಾರೆ ಎಂಬ ಮಾತಿಯೂ ಇದೆ ಎಂದು ಪ್ರತಿಪಕ್ಷದವರ ಟೀಕೆಗೆ ಉತ್ತರಿಸಿದರು.