ಅತ್ಯಂತ ಹಿಂದುಳಿದ ವರ್ಗದಲ್ಲಿ ಜನಿಸಿದ ಕರ್ಪೂರಿ ಸಾಮಾಜಿಕ ಸುಧಾರಣೆಗೆ ಕಂಕಣ ತೊಟ್ಟರು ಸರಕಾರಿ ಉದ್ಯೋಗದಲ್ಲಿ ಹಿಂದು ಳಿದವರಿಗೆ ಮೀಸಲಾತಿ ನೀಡಿದ ಹರಿಕಾರ ಎನಿಸಿಕೊಂಡಿದ್ದಾರೆ.
Advertisement
ಬಿಹಾರದಲ್ಲಿ ಎರಡು ಬಾರಿ ಕರ್ಪೂರಿ ಠಾಕೂರ್ ಮುಖ್ಯಮಂತ್ರಿಯಾಗಿದ್ದರು. ಅದೂ ಅತ್ಯಲ್ಪ ಅವಧಿಗೆ. ಮೊದಲ ಬಾರಿ 1970, ಡಿ.22ರಿಂದ 1971 ಜೂ.2ರವರೆಗೆ ಕೇವಲ 5 ತಿಂಗಳವರೆಗೆ ಆಡಳಿತ ನಡೆಸಿದರು. ಆ ಮೂಲಕ ಬಿಹಾರದಲ್ಲಿ ಕಾಂಗ್ರೆಸ್ಸೇತರ ಪಕ್ಷದ ಮೊದಲ ಮುಖ್ಯಮಂತ್ರಿ ಎನಿಸಿದರು. 1977, ಜೂ.24ರಿಂದ 1979, ಎ. 21ರ ವರೆಗೆ 2ನೇ ಬಾರಿ ಮುಖ್ಯಮಂತ್ರಿಯಾಗಿದ್ದರು. ಅಷ್ಟರಲ್ಲೇ ಹಲವು ಕ್ರಾಂತಿಕಾರಿ ನಿರ್ಧಾರ ಕೈಗೊಂಡು ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ.
Related Articles
Advertisement
ಮದ್ಯ ನಿಷೇಧ: ಬಿಹಾರದಲ್ಲಿ ಸಂಪೂರ್ಣ ಮದ್ಯ ನಿಷೇಧ ಜಾರಿ ಮಾಡಿದ ಮೊದಲ ಮುಖ್ಯಮಂತ್ರಿ ಅವರು. ನಂತರ ಅವರ ಹೆಸರಿನಲ್ಲಿ ಬಿಹಾರದಾದ್ಯಂತ ಹಲವು ಶಾಲೆ, ಕಾಲೇಜುಗಳು ತೆರೆಯಲ್ಪಟ್ಟವು. ಅವೆಲ್ಲವೂ ಹಿಂದುಳಿದ ಪ್ರದೇಶದಲ್ಲೇ ಇದ್ದವು.
ಇಂಗ್ಲಿಷ್ ಭಾಷೆಯನ್ನೇ ಕಿತ್ತು ಹಾಕಿದ್ದರು: ಅವರು ಬಿಹಾರದ ಶಿಕ್ಷಣ ಸಚಿವರಾಗಿದ್ದಾಗ, 10ನೇ ತರಗತಿಯಲ್ಲಿ (ಮೆಟ್ರಿಕ್ಯುಲೇಶನ್) ಇಂಗ್ಲಿಷ್ ಭಾಷೆ ಕಡ್ಡಾಯ ಎಂಬ ನಿಯಮವನ್ನು ರದ್ದು ಮಾಡಿದ್ದರು. ಇಂಗ್ಲಿಷ್ ಭಾಷೆಯ ಕಾರಣಕ್ಕೆ ಬಿಹಾರದ ವಿದ್ಯಾರ್ಥಿಗಳ ಫಲಿತಾಂಶ ಕಳಪೆಯಾಗಿದೆ ಎಂಬ ದೂರುಗಳು ಕೇಳಿಬಂದಿದ್ದರಿಂದ ಈ ನಿಯಮ ಜಾರಿ ಮಾಡಿದ್ದರು. ಹಿಂದಿ ಪರವಾಗಿ ಬಲವಾದ ಧ್ವನಿಯೆತ್ತಿದ್ದರು. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸುವ ಮೂಲಕ ಬಡ ಭೂ ರಹಿತರಿಗೆ ಜಮೀನಾªರರ ಭೂಮಿಯನ್ನು ಹಂಚಿಕೆ ಮಾಡಿದರು.
ಜನನಾಯಕನಿಧನರಾಗಿ 34 ವರ್ಷಗಳೇ ಸಂದರೂ ಬಿಹಾರದ ರಾಜಕೀಯ ಸಾಮಾಜಿಕ ಸ್ತರ ದಲ್ಲಿ ಇನ್ನೂ ಚಾಲ್ತಿಯಲ್ಲಿರುವ ಧೀಮಂತ ನಾಯಕ ಕರ್ಪೂರಿ. ಶೋಷಿತರ ಪರವಾಗಿ ಸದಾ ದನಿ ಎತ್ತುತ್ತಿದ್ದ ಅವರನ್ನು “ಜನ ನಾಯಕ’ ಎಂದೇ ಕರೆಯಲಾಗುತ್ತಿತ್ತು. ಅವರ ಹುಟ್ಟೂರು ಪಿತೌಂಝಿಯ ಎಂಬ ಹಳ್ಳಿಯ ಹೆಸರನ್ನೇ ಕರ್ಪೂರಿ ಎಂದು ಬದಲಾಯಿಸಲಾಗುತ್ತದೆ. ಪ್ರತಿವರ್ಷ ಅವರ ಜನ್ಮದಿನದಂದು ಈ ಗ್ರಾಮದಲ್ಲಿ ಸರಕಾರ ಕಾರ್ಯಕ್ರಮ ನಡೆಸುತ್ತದೆ. ಸಮಾಜದಲ್ಲಿ ಇನ್ನೂ ಗೌರವ ಉಳಿಸಿಕೊಂಡ ನಾಯಕ.