Advertisement

ತೇರದಾಳವನ್ನು ಮಾದರಿ ಕ್ಷೇತ್ರವನ್ನಾಗಿಸುವ ಪ್ರಾಮಾಣಿಕ ಪ್ರಯತ್ನ:ಸವದಿ

10:19 PM Dec 07, 2022 | Team Udayavani |

ರಬಕವಿ-ಬನಹಟ್ಟಿ: ತೇರದಾಳ ಮತಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದೇನೆ. ಮುಂದಿನ ದಿನಗಳಲ್ಲಿಯೂ ಕೂಡಾ ತೇರದಾಳ ಮತಕ್ಷೇತ್ರವನ್ನು ಮಾದರಿ ಮತಕ್ಷೇತ್ರವನ್ನಾಗಿಸುವಲ್ಲಿ ಪ್ರಯತ್ನಿಸುತ್ತೇನೆ. ನಾವೆಲ್ಲರೂ ಉಳಿಯಬೇಕಾದರೆ ರಾಜ್ಯ ಮತ್ತು ದೇಶದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ಬರಬೇಕು. ಈ ನಿಟ್ಟಿನಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಪಾತ್ರ ಬಹಳಷ್ಟು ಮುಖ್ಯವಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

Advertisement

ಬುಧವಾರ ಸಮೀಪದ ರಾಮಪುರದ ದಾನೇಶ್ವರಿ ಸಮುದಾಯ ಭವನದಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕ್ಷೇತ್ರದಲ್ಲಿ ಉತ್ತಮ ರಸ್ತೆಗಳು ನಿರ್ಮಾಣಗೊಂಡಿವೆ. ಸಮುದಾಯ ಭವನಗಳ ನಿರ್ಮಾಣ, ಅಲಂಕಾರಿಕ ದೀಪಗಳ ಅಳವಡಿಕೆ, ನೀರಾವರಿ ಯೋಜನೆಗಳು, ರೈತ ಮತ್ತು ನೇಕಾರರ ಅಭಿವೃದ್ಧಿಗಾಗಿ ಹಾಗೂ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಗಾಗಿ ಶ್ರಮಿಸುವುದರ ಜೊತೆಗೆ ರಬಕವಿ ಬನಹಟ್ಟಿ ನಗರಸಭೆಗೆ ನಗರೋತ್ಥಾನ ಯೋಜನೆ ಅಡಿಯಲ್ಲಿ 35 ಕೋಟಿ ರೂ. ಅನುದಾನವನ್ನು ತೆಗೆದುಕೊಂಡು ಬರಲಾಗಿದೆ. ಕ್ಷೇತ್ರದಲ್ಲಿ ನೇಕಾರರ ಅಭಿವೃದ್ಧಿಗಾಗಿ ಸರಕಾರದ ಜೊತೆ ಮಾತುಕತೆ ಮಾಡಿ ಅನೇಕ ಸಮಸ್ಯೆಗಳನ್ನು ಪರಿಹರಿಸಿದ್ದೇನೆ. ಕಳೆದ ಬಾರಿ ಮಾಜಿ ಶಾಸಕಿ ಉಮಾಶ್ರೀ ನೇಕಾರರನ್ನು ಮರೆತಿದ್ದರಿಂದ ಕಳೆದ ಚುನಾವಣೆಯಲ್ಲಿ ಜನ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡು ಪಕ್ಷದಿಂದ ದೂರ ಉಳಿಯಬೇಡಿ. ಪಕ್ಷ ತಾಯಿ ಇದ್ದಂತೆ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ 2023 ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸೋಣ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶಿವಾನಂದ ಗಾಯಕವಾಡ ಮಾತನಾಡಿ,1947 ರಲ್ಲಿ ದೇಶವನ್ನು ವಿಭಜಿಸಿದವರು ಇಂದು ಭಾರತ ಜೋಡೋ ಕಾರ್ಯಕ್ರಮ ಮಾಡುತ್ತಿದ್ದಾರೆ. ಸಿದ್ಧರಾಮಯ್ಯನವರಂತಹ ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಸಾಕಷ್ಟು ತೊಂದರೆಯನ್ನು ಎದುರಿಸಬೇಕಾಗುತ್ತದೆ ಎಂದರು.

Advertisement

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ದುಂಡಪ್ಪ ಮಾಚಕನೂರ, ಸುರೇಶ ಚಿಂಡಕ, ಶಂಕರ ಜುಂಜಪ್ಪನವರ ಸೇರಿದಂತೆ ಅನೇಕರು ಮಾತನಾಡಿದರು.

ರಬಕವಿ-ಬನಹಟ್ಟಿ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ನಗರಸಭೆಯ ಅಧ್ಯಕ್ಷ ಸಂಜಯ ತೆಗ್ಗಿ, ಉಪಾಧ್ಯಕ್ಷೆ ವಿದ್ಯಾ ಧಬಾಡಿ, ಸ್ಥಾಯಿ ಸಮಿತಿ ಕಾರ್ಯಾಧ್ಯಕ್ಷ ಸದಾಶಿವ ಪರೀಟ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸಪ್ರಭು ಹಟ್ಟಿ, ಮಲ್ಲಿಕಾರ್ಜುನ ನಾಶಿ, ಮಲ್ಲಿಕಾರ್ಜುನ ಬಾಣಕಾರ, ಬಸವರಾಜ ತೆಗ್ಗಿ, ಸಿದ್ದನಗೌಡ ಪಾಟೀಲ, ಹಿರಾಚಂದ ಕಾಸರ, ಶಿವಾನಂದ ಬಾಗಲಕೋಟಮಠ, ಸವಿತಾ ಹೊಸೂರ, ಸುವರ್ಣಾ ಕೊಪ್ಪದ, ಶ್ರೀಶೈಲ ದಲಾಲ, ಬಸವರಾಜ ಭದ್ರನ್ನವರ, ಸಿದ್ರಾಮ ಸವದತ್ತಿ, ಓಂಪ್ರಕಾಶ ಕಾಬರಾ, ಬಾಳವ್ವ ಕಾಖಂಡಕಿ, ಪರಪ್ಪ ಪೂಜಾರಿ, ಪರಪ್ಪ ಉರಬಿನವರ, ಶಿವಾನಂದ ಕಾಗಿ, ಜಯವಂತ ಮಿಳ್ಳಿ, ಶಂಕರೆಪ್ಪ ಬುಜರುಕ ಡಾ. ಅಕ್ಬರ ತಾಂಬೋಳಿ, ಡಾ. ಅಭಯ ಯಂಡೋಳಿ, ಪರಪ್ಪ ಬಿಳ್ಳೂರ, ರಾಮಣ್ಣ ಹುಲಕುಂದ ಇದ್ದರು.

ಕಾರ್ಯಕ್ರಮದಲ್ಲಿ ಮಹಾದೇವ ಕೋಟ್ಯಾಳ, ಆನಂದ ಕಂಪು, ಶಂಕರ ಅಂಗಡಿ, ಶ್ರೀಶೈಲ ಬೀಳಗಿ, ಈಶ್ವರ ಪಾಟೀಲ, ಗೌರಿ ಮಿಳ್ಳಿ, ವೈಷ್ಣವಿ ಬಾಗೇವಾಡಿ, ಶಶಿಕಲಾ ಸಾರವಾಡ, ಜಯಶ್ರೀ ಬಾಗೇವಾಡಿ, ದುರ್ಗವ್ವ ಹರಿಜನ, ದೀಪಾ ಕೊಣ್ಣೂರ, ಮಲಕಪ್ಪ ಪಾಟೀಲ, ಬೀಮಸಿ ಪಾಟೀಲ, ಶಿವು ಗುಂಡಿ, ಯಲ್ಲಪ್ಪ ಕಟಗಿ, ಭೀಮಸಿ ಹಂದಿಗುಂದ , ಚಿದಾನಂದ ಹೊರಟ್ಟಿ, ನಾರಾಯಣ ಮಾಲಪಾಣಿ, ಅರುಣ ಬುದ್ನಿ, ಮಂಜು ಲೆಂಡಿ, ಶಿವಾನಂದ ಬುದ್ನಿ, ಸೋಮನಾಥ ಗೊಂಬಿ, ಮಹಾದೇವ ಆಲಕನೂರ ಸೇರಿದಂತೆ ನಗರ ಬಿಜೆಪಿ ಘಟಕದ ಮುಖಂಡರು ಇದ್ದರು.

ಶ್ರೀಶೈಲ ಬೀಳಗಿ ಪ್ರಾರ್ಥಿಸಿದರು. ಆನಂದ ಕಂಪು ಸ್ವಾಗತಿಸಿದರು. ಪ್ರಕಾಶ ಸಿಂಗನ್ ನಿರೂಪಿಸಿದರು. ಶಿವಾನಂದ ಕಾಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next