ಮಾರ್ಸೆಲ್ಲೆ (ಫ್ರಾನ್ಸ್): ಗ್ರೀಸ್‌ನಿಂದ ಹೊರಟ ಒಲಿಂಪಿಕ್ ಜ್ಯೋತಿಯನ್ನು ಹೊತ್ತ ಬೃಹತ್ ಹಡಗು ಅಭಿಮಾನಿಗಳ ಸಂಭ್ರಮ ಮತ್ತು ಹೆಚ್ಚಿನ ಭದ್ರತೆಯ ನಡುವೆ ಬುಧವಾರ ಮಾರ್ಸೆಲ್ಲೆಗೆ ಆಗಮಿಸಿತು.
ನಗರದಲ್ಲಿ ಜ್ಯೋತಿಗೆ ಅದ್ಭುತ ರೀತಿಯಲ್ಲಿ ಸ್ವಾಗತ ನೀಡಲು ಪ್ಯಾರಿಸ್ ಗೇಮ್ಸ್ ಸಂಘಟಕರು ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ಇಲ್ಲಿನ ಹಳೆಯ ಬಂದರು ಪ್ರದೇಶದಲ್ಲಿ ಗರಿಷ್ಠ ಭದ್ರತೆ ಒದಗಿಸಲಾಗಿದೆ. 1896ರಲ್ಲಿ ಮೊದಲ ಬಾರಿ ಬಳಸಲ್ಪಟ್ಟ ಬೆಲೆಮ್ ಎಂಬ ಭವ್ಯವಾದ ಹಡಗಿನಲ್ಲಿ ಈ ಒಲಿಂಪಿಕ್ ಜ್ಯೋತಿಯನ್ನು ತರಲಾಗಿದೆ.
ಮಾರ್ಸೆಲ್ಲೆಯ ಬಂದರು ಪ್ರದೇಶದ ಸುತ್ತ ನಡೆಉಯವ ಭವ್ಯವಾದ ಮೆರವಣಿಗೆಯಲ್ಲಿ ಬೆಲೆಮ್ ಹಡಗಿನ ಜತೆ ಸಾವಿರಾರು ದೋಣಿಗಳು ಭಾಗ ವಹಿಸಲಿವೆ. ಬುಧವಾರ ಸಂಜೆ ನಡೆ ಯುವ ಸ್ವಾಗತ ಸಮಾರಂಭದ ವೇಳೆ ಫ್ರಾನ್ಸ್ ವಾಯುಪಡೆಯಿಂದ ಜೆಟ್‌ಗಳ ಪ್ರದರ್ಶನವೂ ಒಳಗೊಂಡಿದೆ.
ನಮ್ಮ ದೇಶಕ್ಕೆ ಒಲಿಂಪಿಕ್ಸ್ ಗೇಮ್ಸ್ ಮರಳುತ್ತಿರುವ ಕಾರಣ ಈ ಸಮಾ ರಂಭವನ್ನು ಅದ್ಭುತ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ಪ್ಯಾರಿಸ್ ಒಲಿಂಪಿಕ್ಸ್‌ನ ಸಂಘಟನ ಸಮಿತಿಯ ಅಧ್ಯಕ್ಷ ಟೋನಿ ಎಸ್ಟಾಂಗ್ಯುಟ್ ಹೇಳಿದ್ದಾರೆ.
ಇದನ್ನೂ ಓದಿ: Sanju Samson: ಐಪಿಎಲ್ ನೀತಿಸಂಹಿತೆ ಉಲ್ಲಂಘನೆ : ಸಂಜು ಸ್ಯಾಮ್ಸನ್‌ಗೆ ದಂಡ