Advertisement

ಸಾಹಿತ್ಯದ ಸಸಿಗೆ ನೀರೆರೆದವಳು

10:20 AM Feb 23, 2020 | mahesh |

ಓದುಗರ ಭಾವನಾತ್ಮಕ ಸಂಬಂಧ ತಿಳಿಸುವ ಪತ್ರಗಳ ಸರಣಿ

Advertisement

ಬಾಲ್ಯ ಜೀವನದಲ್ಲಿ ವಾರ್ತಾಪತ್ರಿಕೆಗಳ ಓದುವುದು, ಬರೆಯುವ ಹವ್ಯಾಸಗಳಿರಲಿಲ್ಲ. ಸಾಫ್ಟ್ವೇರ್‌ ಉದ್ಯೋಗಿಯಾಗಿದ್ದ ನಾನು ಮದುವೆಯಾಗಿ, ಬಳಿಕ ಮನೆಯಲ್ಲೇ ಮಗುವಿನ ಆರೈಕೆಯಲ್ಲಿ ನಿರತನಾದೆ. ನಾನು ಕೆಲಸಕ್ಕೆ ರಾಜೀನಾಮೆ ನೀಡುವಾಗ “ಕೆಲಸ ಬಿಡಬೇಡ’ ಎಂದವರು ಕಡಿಮೆ ಏನಲ್ಲ. ಆದರೆ ಕೆಲಸ ಬಿಟ್ಟಿದ್ದೇ ನಾನು ಮಾಡಿದ ಒಳ್ಳೆಯ ಗಳಿಗೆ. ನನ್ನ ಜೀವನಕ್ಕೆ ಉದಯವಾಣಿ ಬಂದಳು. ನನ್ನ ಓದುವ, ಬರೆಯುವ ಹವ್ಯಾಸ ಅಲ್ಲಿಂದ ಆರಂಭವಾಯಿತು. ಮಾವ ಪತ್ರಿಕೆಗೆ ಲೇಖನ ಕಳುಹಿಸಿ ನೋಡು ಪ್ರಕಟವಾಗಬಹುದು ಎಂದರು.

ಪ್ರತಿ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವಂತೆಯೇ ನನ್ನ ಸಾಹಿತ್ಯದ ಕೂಸಿನ ಅಂಬೆಗಾಲಿಡುವ ಯಶಸ್ಸಿನ ಶ್ರೇಯಸ್ಸು “ಮಹಿಳಾ ಸಂಪದ’ ದದ್ದು. ಅನಂತರ ಸಣ್ಣ ಸಣ್ಣ ಲೇಖನಗಳನ್ನು ಬರೆದಾಗ ಪೊರೆದವಳು “ಅವಳು’. ನಾಗತಿಹಳ್ಳಿಯವರ “ನನ್ನ ಪ್ರೀತಿಯ ಹುಡುಗಿಗೆ’ ಪುಸ್ತಕ ಓದಿ ಪ್ರೇಮಪತ್ರ ಪ್ರಬಂಧ ಬರೆಯಲು ಶುರುಮಾಡಿದಾಗ “ಜೋಶ್‌’ ಜಾಗ ಮಾಡಿ ಕೊಟ್ಟಿತು. “ಚಿನ್ನಾರಿ’ ಪುಟಕ್ಕೂ ಪ್ರಯತ್ನಿಸಿದ್ದೇನೆ.

ನಾನು ಹೈಸ್ಕೂಲು ಓದುವಾಗ ಗುರುನಾಥ ಎಂಬ ಶಿಕ್ಷಕರು ಬರೆಯುವ ಮನಸ್ಸುಳ್ಳವರು ಸಾಕಷ್ಟು ಓದಬೇಕು ಎನ್ನುತ್ತಿದ್ದರು. ಈಗ ಉದಯವಾಣಿಯ ಪ್ರತಿ ಪುರವಣಿ ಓದುವುದೇ ನನಗೆ ಬಹಳ ಅಚ್ಚುಮೆಚ್ಚು. ಲೇಖನದ ಆಡಿಯೋ ಕೇಳುತ್ತ ಮನೆಕೆಲಸಗಳ ಪೂರ್ತಿಗೊಳಿಸಿದ್ದು ಉಂಟು. “ಉದಯವಾಣಿ ಆ್ಯಫ್’ ಈ ನಿಟ್ಟಿನಲ್ಲಿ ನನಗೆ ಉತ್ತಮ ಗೆಳತಿ.

ಮಗನ ತುಂಟಾಟಗಳನ್ನು ನೋಡುತ್ತ, ನನಗೆ ದೊರೆತ ಸ್ವಲ್ಪ ಸಮಯದಲ್ಲಾದರೂ ಓದಲು ಅವಕಾಶ ಸಿಕ್ಕಿರುವುದು “ಆ್ಯಪ್‌’ ನಿಂದ. ಓದು ಶಬ್ದ ಭಂಡಾರವನ್ನು ಬೆಳೆಸುತ್ತದೆ ಎಂಬ ಮಾತು ಸುಳ್ಳಲ್ಲ.
ನಾನು ಸಾಹಿತ್ಯ ಕ್ಷೇತ್ರದಲ್ಲಿ ಒಂದು ಸಣ್ಣ ಕೂಸು. ಉದಯವಾಣಿಯೆಂಬ ಮಹಾತಾಯಿಯ ಪ್ರೀತಿ 50 ವರುಷಗಳಿಂದ ಪಸರಿಸಿದರೂ, ನನ್ನ ಅವಳ ನಂಟು 2-3 ವರುಷಗಳಿಂದ ಇರಬಹುದು. ಆದರೆ ತಾಯಿಯ
ಪ್ರೀತಿ ತಡವಾಗಿ ಸಿಕ್ಕರೂ ಅಮೃತದಂತಲ್ಲವೇ? ಅವಳ ಪ್ರೀತಿ, ಆಶೀರ್ವಾದ ನನ್ನ ಮೇಲಷ್ಟೇ ಅಲ್ಲ ನಾಡಿನ ಜನತೆಯ ಮೇಲೆ ನಿತ್ಯ ನಿರಂತರವಾಗಿರಲಿ ಎಂಬುದೇ ನನ್ನ ಆಶಯ.

Advertisement

ಸಾವಿತ್ರಿ ಶ್ಯಾನುಭಾಗ್‌, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next