Advertisement
ಮಸ್ಕಿಗೆ ಪ್ರತ್ಯೇಕ ಕೋರ್ಟ್ ಸ್ಥಾಪನೆ ಬೇಡಿಕೆ ಹಿನ್ನೆಲೆಯಲ್ಲಿ ರವಿವಾರ ಪಟ್ಟಣದ ಎಪಿಎಂಸಿ ಉಪ ಮಾರುಕಟ್ಟೆ ಕಚೇರಿ ಕಟ್ಟಡ ಪರಿಶೀಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಎಪಿಎಂಸಿ ಕಟ್ಟಡ ಮತ್ತು ಖಾಸಗಿ ಕಟ್ಟಡ ವೀಕ್ಷಿಸಲಾಗಿದೆ. ಎಪಿಎಂಸಿ ಕಟ್ಟಡದಲ್ಲಿ ತಾತ್ಕಾಲಿಕ ಕಟ್ಟಡ ಆರಂಭಿಸಲು ಸೂಕ್ತ ವ್ಯವಸ್ಥೆ ಇದೆ.
Related Articles
Advertisement
ಟ್ಯಾಕ್ಸ್ ಕೇಸ್‌ಗಳು, ಪೋತಿವಿರಾಸತ್, ಉತ್ತರ ಜೀವಿತ ಪ್ರಮಾಣಪತ್ರ, ತಹಶೀಲ್ದಾರ್ ಹಂತದಲ್ಲೇ ದಾಖಲಾಗಿ ಇತ್ಯರ್ಥವಾಗದೇ ಬಾಕಿ ಉಳಿದ ಪ್ರಕರಣ, ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಇತ್ಯರ್ಥವಾಗದೇ ಉಳಿದ ಎಲ್ಲ ಪ್ರಕರಣ ಈ ಬಾರಿಯ ಮೆಗಾ ಲೋಕ ಅದಾಲತ್‌ನಲ್ಲಿ ಪರಿಹಾರಕ್ಕೆ ಅವಕಾಶವಿದೆ ಎಂದು ಹೇಳಿದರು.
ಪರಿಶೀಲನೆ: ಇದಕ್ಕೂ ಮುನ್ನ ಎಪಿಎಂಸಿ ಉಪ ಮಾರುಕಟ್ಟೆ ಕಟ್ಟಡ, ಖಾಸಗಿ ಕಟ್ಟಡಗಳನ್ನು ತಾತ್ಕಾಲಿಕ ಕೋರ್ಟ್ ಕಚೇರಿ ಆರಂಭಕ್ಕೆ ಸೂಕ್ತವೇ ಎನ್ನುವ ಕುರಿತು ಪರಿಶೀಲನೆ ನಡೆಸಲಾಯಿತು. ಈ ವೇಳೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮುಖ್ಯಸ್ಥ ದಯಾನಂದ, ಲಿಂಗಸುಗೂರು ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ದಿಡ್ಡಿ, ನ್ಯಾಯಾಧೀಶರಾದ ವಿನಾಯಕ ಮಾಯಣ್ಣವರ, ಶಿವಕುಮಾರ ದೇಶಮುಖ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ತಹಶೀಲ್ದಾರ್ ಕವಿತಾ ಆರ್., ವಕೀಲರಾದ ಈಶಪ್ಪ ದೇಶಾಯಿ, ಬಸವರಾಜ ಯತ್ನಟ್ಟಿ, ನಬೀಶೆಡ್ಮಿ ಸೇರಿದಂತೆ ಇತರರು ಇದ್ದರು.
ಸಿಂಧನೂರು, ಮಾನ್ವಿ, ಲಿಂಗಸುಗೂರು ತಾಲೂಕಿನ ಹಳ್ಳಿಗಳ ವಿಭಜನೆಯಿಂದ ಹೊಸದಾಗಿ ಉದಯಿಸಿದ ಮಸ್ಕಿಯಲ್ಲಿ ಪ್ರತ್ಯೇಕ ಕೋರ್ಟ್ ಅಗತ್ಯವಿದೆ. ಇಲ್ಲಿನವಕೀಲರು ಸೇರಿ ಹಲವರು ಈ ಬಗ್ಗೆ ಬೇಡಿಕೆ ಇಟ್ಟಿದ್ದು, ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧಿಧೀಶರು, ಆಡಳಿತಾತ್ಮಕ ನ್ಯಾಯಾಧೀಶರು ಮಸ್ಕಿಯಲ್ಲಿ ಸದ್ಯ ತಾತ್ಕಾಲಿಕ ವಾಜ್ಯ ನಿರ್ವಹಣೆಗೆ ಇರುವ ಸೌಲಭ್ಯಗಳ ಕುರಿತು ಮಾಹಿತಿ ಕೇಳಿದ್ದಾರೆ. ಇದರನ್ವಯ ಇಲ್ಲಿನ ಮೂಲ ಸೌಕರ್ಯ ಪರಿಶೀಲಿಸಲಾಗಿದೆ.
ಮಾರುತಿ ಬಗಾಡೆ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ