ಮಂಗಳೂರು: ಮೂಲತಃ ಹಾವೇರಿಯವರಾಗಿದ್ದು ಮಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ರವಿ ಫಕೀರಪ್ಪ ದೇಸೂರ (48) ನಾಪತ್ತೆಯಾಗಿದ್ದಾರೆ.
Advertisement
ಪಂಜಿಮೊಗರು ವಿದ್ಯಾನಗರದಲ್ಲಿ ಪತ್ನಿ, ಮಕ್ಕಳೊಂದಿಗೆ ವಾಸವಾಗಿದ್ದ ರವಿ ಫಕೀರಪ್ಪ ಕಳೆದ ನವೆಂಬರ್‌ನಲ್ಲಿ ಊರಿಗೆ ಹೋಗುವುದಾಗಿ ತಿಳಿಸಿ ಹೋದವರು ಊರಿಗೂ ಹೋಗದೆ ಮನೆಗೂ ವಾಪಸಾಗದೆ ನಾಪತ್ತೆಯಾಗಿದ್ದಾರೆ ಎಂದು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಜಪೆ: ಗಂಜಿಮಠ ಬಡಗುಳಿಪಾಡಿ ಗ್ರಾಮದ ಗಣೇಶ್ ನಗರ ಹೌಸ್‌ನ ನಿವಾಸಿ ಪರಮೇಶ್ವರ ಗೌಡ (60) ಜ. 8ರಂದು ಸಂಜೆ 6.45ಕ್ಕೆ ಮನೆಯಿಂದ ಹೋದವರು ಕಾಣೆಯಾಗಿದ್ದು, ಇವರನ್ನು ಎಲ್ಲ ಕಡೆ ಹುಡುಕಾಡಿದಾಗ ಪತ್ತೆಯಾಗಿಲ್ಲ.
Related Articles
ಅವರು 5.3 ಅಡಿ ಎತ್ತರ,ಎಣ್ಣೆ ಕಪ್ಪು ಮೈ ಬಣ್ಣ ,ಸಪೂರ ಶರೀರ, ಕೊಂಕಣಿ ಕನ್ನಡ ತುಳು ಮಾತನಾಡುತ್ತಾರೆ. ನೇರಳೆ ಬಣ್ಣದ ಗೆರೆಯ ಶರ್ಟ್, ಕೇಸರಿ ಬಣ್ಣದ ಲುಂಗಿ ಧರಿಸಿದ್ದರು.
Advertisement
ಹೊಟೇಲ್ ಕಾರ್ಮಿಕ ಬ್ರಹ್ಮಾವರ: ಚೇರ್ಕಾಡಿ ಗ್ರಾಮ ಉಗ್ರಾಣಿಜಡ್ಡಿನ ಹರೀಶ (39) ಜ. 24ರಿಂದ ಕಾಣೆಯಾಗಿದ್ದಾರೆ. ಬೀದರ್‌ನ ಹೊಟೇ ಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಅವರು ಕಾಲಿನ ಚಿಕಿತ್ಸೆ ಪಡೆದು ಮನೆಯಲ್ಲಿದ್ದರು. ಜ. 24ರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದು, ಗ್ರೇ ಕಲರ್ ಪ್ಯಾಂಟ್ ಹಾಗೂ ನೀಲಿ ಬಣ್ಣದ ತುಂಬು ತೋಳಿನ ಅಂಗಿ ಧರಿಸಿದ್ದರು. ಎಡಕಾಲು ಮಣಿಗಂಟು ಬಳಿ ಗಾಯವಾಗಿದೆ. ಇವರ ಕುರಿತು ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ(0820-2561044) ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ. ಧಾರವಾಡದ ಯುವಕ
ಮಂಗಳೂರು: ಮೂಲತಃ ಧಾರವಾಡದ, ಮಂಗಳೂರಿನ ಬೋಳೂರು ಗ್ರಾಮದ ಅಶ್ವಥಕಟ್ಟೆ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಂಜುನಾಥ ಶಿವಪ್ಪ ಗಾಣಿಗೇರ (22) ಊರಿಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತವರು ಬರ್ಕೆ ಠಾಣೆ (0824-2220522) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.