Advertisement

ಶ್ರಮಜೀವಿಗಳಾದರೆ ಸ್ವಾವಲಂಬಿ ಜೀವನ ಸಾಧ್ಯ

04:30 PM Aug 05, 2022 | Team Udayavani |

ಸೇಡಂ: ಯುವಕರು ದುಶ್ಚಟಗಳಿಗೆ ಒಳಗಾಗಿ, ಪೋಷಕ ರಿಗೆ ಹೊರೆಯಾಗದೇ ಶ್ರಮ ಜೀವಿಗಳಾಗಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸಲಹೆ ನೀಡಿದರು.

Advertisement

ತಾಲೂಕಿನ ಹಂಗನಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಯೋಜಿಸಿದ ರೈತರಿಗೆ ಬಡ್ಡಿ ರಹಿತ ಸಾಲ ವಿತರಣೆ ಮಾಡಿ ಮಾತನಾಡಿದ ಅವರು, ರೈತರ ಜೀವನ ಹಸನಾಗಲಿ ಎಂಬ ಕಾರಣಕ್ಕಾಗಿ ಡಿಸಿಸಿ ಬ್ಯಾಂಕ್‌ ಚುಕ್ಕಾಣಿ ಹಿಡಿದಿದ್ದೇನೆ. ಆದರೆ ಇದು ವಿರೋಧ ಪಕ್ಷದವರಿಗೆ ನುಂಗಲಾಗದ ತುತ್ತಾಗಿದೆ. ಇಂದು 2.25 ಕೋಟಿ ರೂ. ಬಡ್ಡಿ ರಹಿತ ಸಾಲ ನೀಡಲಾಗಿದೆ. ಒಂದು ವರ್ಷದಲ್ಲಿ ವಾಪಾಸ್‌ ನೀಡಿದರೆ ಮತ್ತೆ ಅದರ ದುಪ್ಪಟ್ಟು ಹಣ ನೀಡುತ್ತೇವೆ. ಇಲ್ಲಿಯವರೆಗೂ ತಾಲೂಕಿಗೆ 150 ಕೊಟಿ ರೂ. ಬಡ್ಡಿ ರಹಿತ ಸಾಲ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಯುವಕರಿಗೆ ಸ್ವಯಂ ಉದ್ಯೋಗ ಮಾಡಿಕೊಳ್ಳಲು ಬಡ್ಡಿ ರಹಿತ ಸಾಲ ನೀಡಲಾಗುವುದು. ಅದರಂತೆ ಮಹಿಳಾ ಸ್ವ-ಸಹಾಯ ಸಂಘಗಳಿಗೂ ಬಡ್ಡಿ ರಹಿತ ಸಾಲ ನೀಡಲಾಗುವದು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಶಾಖಾಪುರದ ಶ್ರೀ ಡಾ| ಸಿದ್ಧರಾಮ ಶಿವಾಚಾರ್ಯರು ಮಾತನಾಡಿ, ಶಾಸಕ ತೇಲ್ಕೂರ ಅವರು ತಾಲೂಕು ಸೇರಿದಂತೆ ಕ್ಷೇತ್ರದ ಅನೇಕ ಮಠ ಮಾನ್ಯಗಳ ಅಭಿವೃದ್ಧಿಗಾಗಿ ಅನುದಾನ ನೀಡುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ. ಹಿಂದೆಂದೂ ಇಂತಹ ಕೆಲಸ ಯಾರೂ ಮಾಡಿರಲಿಲ್ಲ. ಇದರ ಜೊತೆಗೆ ರೈತರಿಗೆ ಬಡ್ಡಿ ರಹಿತ ಸಾಲ ನೀಡುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ. ರೈತರು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಉತ್ತಮ ಬದುಕು ಕಟ್ಟಿ ಕೊಳ್ಳಬೇಕು ಎಂದರು.

ಹಂಗನಹಳ್ಳಿಯ ಶ್ರೀ ವೀರಗಂಗಾಧರ ಶಿವಾ ಚಾರ್ಯರು, ಪಿಕೆಪಿಎಸ್‌ ಅಧ್ಯಕ್ಷ ಸಿದ್ಧು ಕೊದಂಪೂರ, ಬಿಜೆಪಿ ತಾಲೂಕು ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ, ಪ್ರಮುಖರಾದ ಶಿವಕುಮಾರ ಪಾಟೀಲ್‌ ತೆಲ್ಕೂರ (ಜಿಕೆ), ಬಸವರಾಜ ಭೂತಪೂರ, ಬಸವರಾಜ ರೇವಗೊಂಡ, ಶಿವಲಿಂಗರೆಡ್ಡಿ ಪಾಟೀಲ ಬೆನಕನಹಳ್ಳಿ, ಪ್ರಶಾಂತ ಕೇರಿ, ತಿಪ್ಪೆಸ್ವಾಮಿ, ಬಸವರಾಜಗೌಡ, ಶಿವಾನಂದಸ್ವಾಮಿ, ವೆಂಕಟೇಶ ಪಾಟೀಲ(ವೆಂಕಿ), ಶಂಕರ, ಶಾಂತವೀರ ಗೋಣಿ, ಬಸವರಾಜ ಕೋಸಗಿ, ಕಾಶಿನಾಥ ಕುಲಕರ್ಣಿ, ಮಲ್ಲಿಕಾರ್ಜುನ ಪಾಟೀಲ ಭೂತಪೂರ, ವಿರೇಶ ಹೂಗಾರ, ಸಿದ್ದು ಶೆಟ್ಟಿ, ವಿಜಯಕುಮಾರ ಜಾದವ, ಭೀಮುನಾಯಕ ಹೂಡಾ, ಗೌಡಪ್ಪಗೌಡ ಪಾಟೀಲ, ನಾಗು ಪಾಟೀಲ, ಬಸಲಿಂಗಪ್ಪ ಸಾಹುಕಾರ ಅಳ್ಳೊಳ್ಳಿ, ಶಿವರಾಯ ತೆಲ್ಕೂರ, ಶರಣಭೂಪಾಲರೆಡ್ಡಿ, ಓಂಪ್ರಕಾಶ ಪಾಟೀಲ, ರವೀಂದ್ರ ಭಂಟನಹಳ್ಳಿ, ಜಗದೇವಪ್ಪ ಸಾಹುಕಾರ ನಾಚವಾರ, ಶ್ರೀಮಂತ ಅವಂಟಿ, ಬಸರೆಡ್ಡಿ ಚಿಟಕನಪಲ್ಲಿ, ಖಾಸಿಂ ಊಡಗಿ, ಸತ್ಯನಾರಾಯಣರೆಡ್ಡಿ ಕಲಕಂಭ, ಸೂರ್ಯಕಾಂತ ಮಾಸ್ತರ ಹಂಗನಹಳ್ಳಿ, ರಾಜು ಪಾಟೀಲ ಹಂಗನಳ್ಳಿ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next