Advertisement
1919 ಶಾಲೆ ಆರಂಭ“ಅರಮನೆ ಕಾಡು ಶಾಲೆ’ ಎಂದು ಪ್ರಚಲಿತ
ಈ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳಲ್ಲಿ ಯಕ್ಷಗಾನ ಛಂದೋ ತಪಸ್ವಿ ಡಾ | ನಾರಾಯಣ ಶೆಟ್ಟಿ ಶಿಮಂತೂರು, ಅರ್ಥಶಾಸ್ತ್ರಜ್ಞರಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಉಪನಿರ್ದೇಶಕನ ಹುದ್ದೆಯನ್ನೂ ಅಲಂಕರಿಸಿದ ಡಾ | ಸದಾನಂದ ಎಲ್. ಶೆಟ್ಟಿ , ಈಚೆಗಷ್ಟೇ ಸರ್ ಸಿ. ವಿ. ರಾಮನ್ ಯುವ ವಿಜ್ಞಾನಿ ಪ್ರಶಸ್ತಿಯನ್ನು ಸ್ವೀಕರಿಸಿರುವ ಕೃಷಿ ವಿಜ್ಞಾನಿ ಡಾ | ಪಡುಬಿದ್ರಿ ಶಿವಪ್ರಸಾದ್ ರಾವ್ ಅವರಿದ್ದಾರೆ. ಅಲ್ಲದೆ ದೇಶದ ಸೇನೆ, ಉದ್ಯಮ, ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ, ಯಕ್ಷಗಾನ, ಕಂಬಳ ಮತ್ತಿತರ ಕ್ಷೇತ್ರಗಳಲ್ಲೂ ಸಾಧನೆ ಮಾಡಿದವರಿದ್ದಾರೆ. ಸ್ವಂತ ಕಾಲ ಮೇಲೆ ನಿಲ್ಲುವಂತಹ ಮನೋಸ್ಥೈರ್ಯವನ್ನು ಪ್ರತಿಯೊರ್ವ ವಿದ್ಯಾರ್ಥಿಯಲ್ಲಿ ತುಂಬುವ ಕೆಲಸವನ್ನು ಈ ಸರಕಾರಿ ಶಿಕ್ಷಣ ಸಂಸ್ಥೆ ಮಾಡಿದೆ.
Related Articles
1954 ರಲ್ಲಿ ಚೀಂಕ್ರಿಗುತ್ತು ರಾಘು ಶೆಟ್ಟಿ ಹಾಗೂ ಗ್ರಾಮಸ್ಥರ ನೆರವಿನಿಂದ ಶಾಲೆಯ ನೂತನ ಕೊಠಡಿಗಳು ನಿರ್ಮಾಣಗೊಂಡವು. ಈ ಶಾಲೆಯಲ್ಲಿ ವಿದ್ಯಾರ್ಜನೆಯನ್ನು ಮಾಡಿದ ಸಹಸ್ರಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಸಾಧನೆ ಗೈದಿರುವುದು ಸಂಸ್ಥೆಯ ಗೌರವವಾಗಿದೆ. ಒಂದರಿಂದ ಏಳನೇ ತರಗತಿವರೆಗಿರುವ
ಈ ಶಾಲೆಯಲ್ಲಿ ಇತ್ತೀಚಿನ ಕೆಲ ಬೆಳವಣಿಗೆಗಳು, ಆಂಗ್ಲ ಮಾಧ್ಯಮ ಶಾಲೆಗಳ ಪೈಪೋಟಿ ಮತ್ತು ಸರಕಾರಿ ಶಾಲೆಗಳ ಮೇಲೆ ಜನರ ನಿರುತ್ಸಾಹ, ಮೂಲಸೌಕರ್ಯದ ಕೊರತೆಯಿಂದಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಗೆ ಕಾರಣವಾಯಿತು. ಪ್ರಸ್ತುತ ಶಾಲೆಯಲ್ಲಿ ಒಂದರಿಂದ ಏಳನೆ ತರಗತಿವರೆಗೆ ಕೇವಲ ಮೂವತ್ತೇಳು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
Advertisement
ವಿವಿಧ ಅಭಿವೃದ್ಧಿ ಕಾರ್ಯಶತಮಾನೋತ್ಸವದ ಸಂಭ್ರಮದಲ್ಲಿ ಶಿಥಿಲಗೊಂಡಿರುವ ಶಾಲಾ ಕೊಠಡಿಗಳನ್ನು ದುರಸ್ತಿಗೊಳಿಸಿ ಅಗತ್ಯವಿರುವ ಮೂಲ ಸೌಕರ್ಯಗಳಾದ ಕಲಿಕಾ ಸಾಮಾಗ್ರಿಗಳು, ಪೀಠೊಪಕರಣ, ತರಗತಿ ಕೊಠಡಿಗಳಿಗೆ ವಿದ್ಯುತ್ ದೀಪಗಳ ಜೋಡಣೆ, ಕುಡಿಯುವ ನೀರು, ನಳ್ಳಿ ನೀರಿನ ವ್ಯವಸ್ಥೆ, ಅಕ್ಷರ ದಾಸೋಹ ಕೊಠಡಿಯ ನವೀಕರಣ, ಶಾಲಾ ಕಚೇರಿಗೆ ಆಧುನಿಕ ಸ್ಪರ್ಶ, ವಿದ್ಯಾರ್ಥಿಗಳಿಗೆ ಮತ್ತು ಕಚೇರಿ ಉಪಯೋಗಕ್ಕಾಗಿ ಕಂಪ್ಯೂಟರ್ ಹಾಗೂ ಪ್ರಿಂಟರ್ ವ್ಯವಸ್ಥೆ, ಶೌಚಾಲಯ ದುರಸ್ತಿ, ನಲಿ-ಕಲಿ ತರಗತಿಗೆ ಸಲಕರಣೆಗಳ ಜೋಡಣೆ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಶಾಲಾ ಹಳೆ ವಿದ್ಯಾರ್ಥಿಯಾಗಿ ಹೆಮ್ಮೆ ಎನಿಸಿದೆ. ಶಾಲಾಭಿವೃದ್ದಿಗಾಗಿ ನಂದಿಕೂರು ಎಜ್ಯುಕೇಶನ್ ಟ್ರಸ್ಟ್ ಸಂಸ್ಥೆಯನ್ನು ಸ್ಥಾಪಿಸಿಕೊಂಡು 2019ರ ಜನವರಿಯಲ್ಲಿ ಶಾಲಾ ಶತಮಾನೋತ್ಸವ ಆಚರಿಸಲಾಗಿದೆ. ಇಲ್ಲಿದೆ.
– ಲಕ್ಷ್ಮಣ್ ಶೆಟ್ಟಿವಾಲ್,ಶಾಲಾ ಹಳೆ ವಿದ್ಯಾರ್ಥಿ. 4ವರ್ಷಗಳ ಹಿಂದೆ ವರ್ಗಾವಣೆ ಗೊಂಡು ನಂದಿಕೂರು ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸು ತ್ತಿರುವೆನು. ಶತಮಾನೋತ್ಸವ ಕಂಡಿರುವ ಸರಕಾರಿ ಶಾಲೆ ಎಂಬ ಬಗೆಗೆ ತನಗೆ ಹೆಮ್ಮೆ ಇದೆ. ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. - ವಿಮಲಾ, ಪ್ರಭಾರ ಶಾಲಾ ಮುಖ್ಯ ಶಿಕ್ಷಕಿ. – ಆರಾಮ