ಯಲ್ಲಾಪುರ: ಟ್ಯಾಂಕರ್ ವಾಹನವೊಂದಕ್ಕೆ ಶಾಲಾ ಮಕ್ಕಳ ವಾಹನ ಡಿಕ್ಕಿ ಹೊಡೆದು ಚಾಲಕ, ಶಿಕ್ಷಕರು ಸೇರಿ 12 ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ರಾ.ಹೆದ್ದಾರಿ 63ರ ಅರಬೈಲ್ ಘಟ್ಟದಲ್ಲಿ ಶುಕ್ರವಾರ ಸಂಭವಿಸಿದೆ.
Advertisement
ಹುಬ್ಬಳ್ಳಿಯ ಖಾಸಗಿ ಶಾಲೆಯ ವಾಹನದಲ್ಲಿ ಪ್ರವಾಸಕ್ಕೆ ಅಂಕೋಲಾ ಕಡೆಗೆ ಸಾಗುತ್ತಿದ್ದ ವೇಳೆ ಅರಬೈಲ್ ಘಟ್ಟದಲ್ಲಿ ಹಾಳಾಗಿ ನಿಂತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದ್ದು, ಗಾಯಾಳುಗಳಿಗೆ ಚಿಕಿತ್ಸೆಗೆಂದು ತಾಲೂಕು ಸಮುದಾಯ ಕೇಂದ್ರದಲ್ಲಿ ಧಾಖಲಿಸಿದೆ.