Advertisement
ನವರಸಪುರ ನಗರವನ್ನು ಸಂಗೀತದ ಸೇವೆಗಾಗಿ ಸಂಗೀತ ಸುಧೆಯನ್ನು ಹರಿಸಲು ನಿರ್ಮಿಸಲಾಯಿತು. ಇದು ವಿಜಯಪುರದಿಂದ ಅಥಣಿಗೆ ಹೋಗುವ ರಸ್ತೆಯಲ್ಲಿ ಸುಮಾರು 7 ಕಿ.ಮೀ ದೂರದಲ್ಲಿದೆ. ಇದನ್ನು 1599 ರಲ್ಲಿ ಜಗದ್ಗುರು ಎಂದೇ ಖ್ಯಾತಿಯಾಗಿರುವ ಎರಡನೇ ಇಬ್ರಾಹಿಂ ಆದಿಲ್‌ಶಹಾನು ಪ್ರಾಚೀನ ಕಾಲದ ತೊರವಿ ಎಂಬ ಗ್ರಾಮದ ಹತ್ತಿರ ಹೊಸನಗರವನ್ನು ನಿರ್ಮಿಸಿ ಅದಕ್ಕೆ ನವರಸಪುರ ಎಂದು ಹೆಸರು ಬರಲು ಅನೇಕ ಕಥೆಗಳಿವೆ.
Related Articles
Advertisement
ಸಂಗೀತ ಮಹಲ್ ಎದುರಿಗೆ ನಾರಿ ಮಹಲ್ ಇದೆ. ಇಲ್ಲಿ ಆಸ್ಥಾನಕ್ಕೆ ಕಾರ್ಯಕ್ರಮ ನೀಡಲು ಬರುತ್ತಿದ್ದ ಸಂಗೀತಗಾರ್ತಿಯರು ಮತ್ತು ನೃತ್ಯಗಾರ್ತಿಯರು ಇಲ್ಲಿ ವಾಸಿಸುತ್ತಿದ್ದರು. ಪುರುಷರಿಗೆ ಪ್ರವೇಶವಿರಲಿಲ್ಲ. ಇಂದು ಈ ಮಹಲ್ ಕುರೂಪಿಯಂತಾಗಿದೆ. ಸಂಗೀತ ಮಹಲ್ ಪುಂಡರ, ಕಳ್ಳಕಾಕರ ಸ್ಥಳವಾಗಿ ಮಾರ್ಪಟ್ಟಿದೆ. ಇದನ್ನು ಕಾಯುವ ಭದ್ರತಾ ಸಿಬಂದಿಗೆ ಸಮವಸ್ತ್ರವೂ ಇಲ್ಲ.
ಇದಲ್ಲದೇ ಇಡೀ ಸಂಗೀತ ಮಹಲ್‌ಗೆ ಇವರೊಬ್ಬರೇ ಭದ್ರತಾ ಸಿಬಂದಿ. ಇಲ್ಲಿ ಪ್ರವಾಸಿಗರಿಗೆ ಕುಡಿಯಲು ನೀರಿಲ್ಲ. ಬೋರ್‌ವೆಲ್ ಕೆಟ್ಟು ಹೋಗಿ ಎಷ್ಟೊ ದಿನಗಳಾಗಿವೆ. ಹಾಗಾಗಿ ಪ್ರವಾಸಿಗರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿದೆ.
ಇದನ್ನು ಉಳಿಸಬೇಕಾದ ಯುವಜನಾಂಗ ಸ್ಮಾರಕಗಳ ಗೋಡೆಗಳ ಮೇಲೆ ಗೀಚಿ ಹಾಳು ಮಾಡುತ್ತಿದ್ದಾರೆ. ಇದು ಅನಾಗರಿಕರ ಕೆಲಸ. ನವರಸಪುರವನ್ನು ಇಂದು ಗುರುತಿಸಬೇಕಾದರೆ ನಾವು ಸಂಗೀತ ಮಹಲ್ ಮೂಲಕವೇ ಗುರುತಿಸಬೇಕಾಗಿದೆ. ಮಲಿಕ್ ಅಂಬರ್ ಇವುಗಳನ್ನು ನಾಶ ಮಾಡಿದ ಅಂದಿನಿಂದ ಅವು ತನ್ನತನವನ್ನು ಕಳೆದುಕೊಂಡು ಅನಾಥವಾಗಿವೆ. ಈ ಸ್ಮಾರಕಗಳನ್ನು ಉಳಿಸಿಕೊಳ್ಳಲು ನಮ್ಮ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ. ಈ ಸ್ಮಾರಕಗಳು ನಮ್ಮ ದೇಶದ ಸಂಪತ್ತು.ಇವುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಸಂರಕ್ಷಿಸಿಡುವುದು ನಮ್ಮ ಗುರುತರವಾದ ಜವಾಬ್ದಾರಿಯಾಗಿರುವುದನ್ನು ಮರೆಯಬಾರದು.
-ದೀಕ್ಷಾ ಮುಚ್ಚಂಡಿ
ವಿಜಯಪುರ