Advertisement

ಮಳೆ ನೀರು ಸಂಗ್ರಹಿಸಿ ಇಂಗಿಸಲು ಮಾದರಿ ಕೊಯಕೂಡ್ಲು ಕೆರೆ

08:38 PM Jul 26, 2019 | Sriram |

ಕಾಸರಗೋಡು: ಮಳೆ ನೀರನ್ನು ಸಂರಕ್ಷಿಸಿ, ಭೂಮಿಯಡಿ ತಂಗುವಂತೆ ಮಾಡಿ ಭೂಗರ್ಭಜಲ ಸಂರಕ್ಷಿಸುವ ನಿಟ್ಟಿನಲ್ಲಿ ಆದೂರಿನ ಕೊಯಕೂಡ್ಲು ಕೆರೆ ಒಂದು ಮಾದರಿಯಾಗಿದೆ.

Advertisement

ಕಾರಡ್ಕ ಗ್ರಾಮ ಪಂಚಾಯತ್‌ನ ಹತ್ತನೇ ವಾರ್ಡ್‌ ಆಗಿರುವ ಆದೂರಿನಲ್ಲಿ ಈ ಕೆರೆಯಿದೆ. 8 ವರ್ಷಗಳ ಹಿಂದೆ ಈ ಕರೆಯನ್ನು ನಿರ್ಮಿಸಲಾಗಿತ್ತು. 7 ತಿಂಗಳ ಹಿಂದೆ ಬದಿಯ ಮಣ್ಣು ಜರಿದು ಕೆರೆ ವಿನಾಶದ ಅಂಚಿನಲ್ಲಿತ್ತು. 2018 ಡಿಸೆಂಬರ್‌ ತಿಂಗಳಲ್ಲಿ ಈ ಕರೆಯ ನವೀಕರಣ ನಡೆಸಲಾಗಿತ್ತು. ಕರೆಯ ಸುತ್ತಲೂ ತೆಂಗಿನ ನಾರಿನ ಭೂಹಾಸು ನಿರ್ಮಿಸಲಾಗಿತ್ತು. ಇದರಿಂದ ಭದ್ರತೆಯ ಜೊತೆಗೆ ಕೆರೆ ಒಂದು ಉತ್ತಮ ಮಳೆ ನೀರಿನ ಸಂಗ್ರಹಾಗಾರವೂ ಆಗಿ ಮಾರ್ಪಟ್ಟಿತ್ತು. ನವೀಕರಣ ವೇಳೆ ಕಾರಡ್ಕ ಗ್ರಾಮ ಪಂಚಾಯತ್‌ಗೆ ಕಾರಡ್ಕ ಬ್ಲಾಕ್‌ ಪಂಚಾಯತ್‌ ಹೆಗಲು ನೀಡಿತ್ತು.

ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಳವಡಿಸಿ ಕೆರೆಯ ನವೀಕರಣ ನಡೆಸಲಾಗಿದೆ. ಭೂಹಾಸು ಸಹಿತ ನವೀಕರಣಕ್ಕೆ 2 ಲಕ್ಷ ರೂ. ವೆಚ್ಚ ತಗುಲಿದೆ. ಈ ಮೂಲಕ ಕೆರೆಯ ಬದಿ ಕುಸಿಯುವ ಭೀತಿಗೆ ಶಾಶ್ವತ ಪರಿಹಾರವಾಗಿದೆ.

ಕೆರೆಯಲ್ಲಿ ನೀರಿನ ಪರಿಪಾಲನೆ ಉತ್ತಮ ರೀತಿ ನಡೆಯುತ್ತಿದೆ. ಮಳೆ ನೀರನ್ನು ಭೂಮಿಯಡಿ ಇಂಗುವಂತೆ ಮಾಡಲೂ ಇಲ್ಲಿ ಪೂರಕ ಸ್ಥಿತಿಯಿದೆ. ಇದರ ಪರಿಣಾಮ ಆಸುಪಾಸಿನ ಪ್ರದೇಶಗಳ ಬಾವಿ ಸಹಿತ ಜಲಾಶಯಗಳಲ್ಲಿ ನೀರಿನ ಮಟ್ಟ ಸುಧಾರಿತಗೊಂಡಿದೆ. ಕೆರೆಯ ಸುತ್ತಲೂ 900 ಮನೆಗಳಿವೆ. ಇವರಿಗೆಲ್ಲ ಈ ಕೆರೆ ಆಸರೆಯಾಗಿದೆ. ಕಡು ಬೇಸಗೆಯಲ್ಲೂ ಕೃಷಿಗಾಗಿ ಕೆರೆಯ ನೀರು ಬಳಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next