Advertisement

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

12:04 PM Nov 15, 2024 | Team Udayavani |

ಬೆಳ್ಮಣ್‌: ಕರಾವಳಿಯಲ್ಲಿ ಮುಂಗಾರು ಮಳೆ ಮುಗಿದಿದ್ದರೂ ಕೃಷಿಕರ ಗೋಳು ನಿಂತಿಲ್ಲ. ಫಸಲು ಕಟಾವಿಗೆ ಬಂದ ಸಂದರ್ಭ ರೈತರು ಅಕಾಲಿಕ ಮಳೆಯಿಂದ ಕಂಗೆಟ್ಟರು. ಬೆಳ್ಮಣ್‌, ಮುಂಡ್ಕೂರು ಭಾಗದ ಕೆಲವೆಡೆ ಇನ್ನೂ ಕಟಾವು ಬಾಕಿ ಇದ್ದು, ಕಟಾವು ಯಂತ್ರಗಳ ಕೊರತೆ ಇದಕ್ಕೆ ಕಾರಣ. ತಮಿಳುನಾಡು ಕಡೆಗಳಲ್ಲಿ ಬೆಳೆ ಕಟಾವಿಗೆ ಬಂದಿದ್ದು, ಅಲ್ಲಿ ಗಂಟೆಗೆ ಹೆಚ್ಚುವರಿ ಆದಾಯ ಇರುವುದರಿಂದ ಕಟಾವು ಯಂತ್ರಗಳ ಮಾಲಕರು ಅತ್ತ ಧಾವಿಸಿದ್ದಾರೆ ಎಂದು ನಮ್ಮ ಭಾಗದ ಕೃಷಿಕರು ಹೇಳುತ್ತಿದ್ದಾರೆ.

Advertisement

ಮಳೆಯಿಂದ ಬೈಹುಲ್ಲಿಗೆ ಹಾನಿ
ಭತ್ತಗಳನ್ನು ಬೇರ್ಪಡಿಸುವ ತವಕದಲ್ಲಿ ಮಳೆಯ ಕಾರಣದಿಂದ ಬೈಹುಲ್ಲುಗಳು ಒದ್ದೆಯಾಗಿ ಕೃಷಿಕರು ಅಪಾರ ನಷ್ಟ ಎದುರಿಸಿದ್ದಾರೆ. ಎಕ್ರೆಗಟ್ಟಲೆ ಗದ್ದೆಗಳ ಬೈ ಹುಲ್ಲು ಗೊಬ್ಬರವಾಗಿದೆ.

ಅಕ್ಕಿ ಗಿರಣಿ ಮುಂದೆ ವಾಹನಗಳ ಸಾಲು
ಸಾಲ ಮಾಡಿ ಬೇಸಾಯ ಮಾಡಿದ ರೈತರು ತುರ್ತಾಗಿ ಹಣ ಪಡೆಯುವ ತವಕದಲ್ಲಿ ತಮ್ಮ ಭತ್ತಗಳನ್ನು ವಾಹನಗಳಲ್ಲಿ ತುಂಬಿಸಿಕೊಂಡು ಅಕ್ಕಿ ಗಿರಣಿ ಮುಂದೆ ಸಾಲು ನಿಲ್ಲುತ್ತಿದ್ದಾರೆ. ಆದರೆ ಅಲ್ಲೂ ನಿರೀಕ್ಷಿತ ದರ ಸಿಗುತ್ತಿಲ್ಲ ಎಂಬ ದೂರುಗಳಿವೆ.

ಒಟ್ಟಾರೆ ಕರಾವಳಿಯ ಕೃಷಿಕರು ಅಕಾಲಿಕ ಮಳೆ, ಯಂತ್ರೋಪಕರಣಗಳ ಕೊರತೆ ಸಹಿತ ಹಲವು ಸಮಸ್ಯೆಗಳಿಂದ ಕಂಗೆಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next