Advertisement

ಗೋಕಾಕ್‌ಗಿಂತ ಕ್ರಾಂತಿಕಾರಕ ಚಳವಳಿ ಬೇಕಿದೆ

12:27 AM Jan 08, 2023 | Team Udayavani |

ಹಾವೇರಿ: ಕನ್ನಡದ ಉಳಿವಿಗೆ ಗೋಕಾಕ್‌ ಚಳವಳಿಗಿಂತ ಕ್ರಾಂತಿಕಾರಕ ಚಳವಳಿ ಅಗತ್ಯತೆ ಈ ನೆಲಕ್ಕಿದೆ. ಇದು ಕನ್ನಡ ಪೋಷಕರ ಹೊಣೆಗಾರಿಕೆ. ಆಗ ಕನ್ನಡ ಉಳಿಯುತ್ತದೆ, ಬೆಳೆಯುತ್ತದೆ..

Advertisement

-ಹೀಗೆಂದ ವರು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ದೊಡ್ಡರಂಗೇಗೌಡರು. ಸರ್ವಾಧ್ಯಕ್ಷರ ಜೊತೆಗಿನ “ಮಾತು ಮಂಥನ’ದಲ್ಲಿ ಗಟ್ಟಿ ಧ್ವನಿಯಲ್ಲಿ ಈ ಮಾತನ್ನು ಹೇಳುವ ಮೂಲಕ ಅವರು ಕನ್ನಡದ ಅಸ್ಮಿತೆಯ ರಕ್ಷಣೆಯ ಕುರಿತು ಮನದೊಳಗಿನ ಸಂಕಟ, ತಳಮಳವನ್ನೂ ತೆರೆದಿಟ್ಟರು. ಜತೆಗೆ ತಮ್ಮ ಬಾಲ್ಯ, ಶಾಲೆ, ಹ ಳ್ಳಿಯ ಬದುಕು, ಕಾವ್ಯದ ಹೂರಣ ಸೇರಿ ಹಲವು ವಿಚಾರಗಳನ್ನು ಕನ್ನಡದ ಮನಸ್ಸುಗಳ ಮುಂದೆ ಬಿಚ್ಚಿಟ್ಟರು.

ಹಿರಿಯ ಸಾಹಿತಿ ಬುಕ್ಕಾಪಟ್ನ ವಾಸು ಪ್ರಶ್ನೆಗೆ ಉತ್ತರಿಸುವಾಗ, ಕಂಬಳಿ ಹುಳು ಚಿಟ್ಟೆ ಆಗಬೇಕೇ?’ ಎಂಬ ಸ್ವಾರಸ್ಯಕರ ಸಂಗತಿ ಮೂಲಕ ಯುವ ಕವಿ-ಸಾಹಿತಿಗಳಿಗೆ ಅವರು ಅರಿವಿನ ಪಾಠವನ್ನೂ ಮಾಡಿದರು. ಅರಿವಿನ ಪರಿ  ಹೆಚ್ಚಲು ಅಂತರಂಗದ ಹಸಿವು ಹೆಚ್ಚಬೇಕು. ಹಿರಿಯ ಸಾಹಿತಿಗಳ ಕೃತಿಗಳನ್ನು ಓದಿದಾಗ ನಮ್ಮ ಅರಿವು ವಿಸ್ತಾರವಾಗುತ್ತದೆ. ಹೊಸ ಕವಿಗಳು ಕುವೆಂಪು, ಬೇಂದ್ರೆ ಸಹಿತ ಎಲ್ಲರ ಕೃತಿ ಓದಬೇಕು. ಆಗ ಕಂಬಳಿ ಹುಳು ಆಗಿದ್ದವರು ಚಿಟ್ಟೆ ಆಗಲು ಸಾಧ್ಯ. ಚಿಟ್ಟೆ ಆಗುವ ಮೂಲಕ ಬಣ್ಣ ಬಣ್ಣದ ರಂಗು ಪಡೆಯಬಹುದು. ಎಲ್ಲರ ಗಮನ ಸೆಳೆಯಬಹುದು. ಚಿಟ್ಟೆಯಾಗಿ ರೂಪಾಂತರಗೊಳ್ಳಲು ಓದಬೇಕು. ಎಲ್ಲರ ಮನಸ್ಸಿನಲ್ಲಿ ಚಿಟ್ಟೆ ರಮ್ಯವಾಗಿ ಕಾಣುತ್ತದೆ. ಎಳೆಯ ಬರಹಗಾರರು ಸತತ ಅಧ್ಯಯನ ಮಾಡಬೇಕು. ಕನ್ನಡ ಸಾಹಿತ್ಯ ಸಮೃದ್ಧವಾಗಿದೆ. ಓದಿನಿಂದ ಅದರ ಹತ್ತನೇ ಒಂದು ಭಾಗವಾಗಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು.

ಆದರೆ, ಇದನ್ನು ಯಾರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಜಾಣ ಕಿವುಡು, ಕುರುಡು ಪ್ರದರ್ಶನ ಮಾಡುತ್ತೇವೆ ಎಂದೂ ವಿಷಾದಿಸಿದ ದೊಡ್ಡರಂಗೇಗೌಡರು, ಹಳೆ ಕವಿತೆಗಳ ಪದಗಳ ವ್ಯಾಪ್ತಿ, ಭಾಷಾ ಕೋಶ ಗೊತ್ತಾಗಲು ಓದಬೇಕು ಎಂದು ಪುನರುಚ್ಚರಿಸಿದರು.

ಬಾಲ್ಯದ ಕಾವ್ಯ ಯಾವುದು?: ವೇಳೆಯ ನಿರ್ವಹಣೆ( ಟೈಂ ಮ್ಯಾನೇಜ್‌ಮೆಂಟ್‌)ಯ ಕುರಿತು ಪ್ರತಿಕ್ರಿಯೆ ನೀಡಿದ ಸರ್ವಾಧ್ಯಕ್ಷರು, ವೇಳೆಯ ನಿರ್ವಹಣೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಯಾರು ಶ್ರದ್ಧಾವಂತ, ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಬಯಸುತ್ತಾನೋ ಅವನಿಗೆ ಪ್ರತಿ ಗ ಳಿಗೆಯೂ ಹೊಸತಾಗುತ್ತದೆ. ಅಮೂಲ್ಯ ಎನಿಸುತ್ತದೆ. ಪ್ರಕೃತಿ ಅದನ್ನು ಕಲಿಸುತ್ತದೆ. ನಾನು ಮೊದಲು ಬರೆದದ್ದು ಪ್ರಕೃತಿಯ ಕುರಿತಾದ ಕವಿತೆಯೇ ಎಂದು ಕವಿತೆಯ ಸಾಲು ಹಾಡಿದರು.

Advertisement

ದಡದ ಬಳಿ ಮರದ ಸಾಲು…ಅಲ್ಲಿ ಹಸಿರು, ಕೆಳಗೆ ಕೆಸರು…ರಮ್ಯ ಬಣ್ಣ ಏನು ಚೆಂದ.. ಕೆಂಪು ಹಸಿರು…ಹಕ್ಕಿ ಹಿಂಡು ಹಾರಿಕೊಂಡು ಬಂದು ನಿಂತು ನೀರು ಕುಡಿದು ಎಂದು ಸುಶ್ರಾವ್ಯವಾಗಿ ಹಾಡಿದಾಗ ಸಭೆ ಚಪ್ಪಾಳೆ ತಟ್ಟಿತು. ಬಾಲ್ಯದ ಬರಹದ ತರ ಈಗ ಬರುವುದೇ ಇಲ್ಲ. ಬರೆಯಲೂ ಆಗೋದಿಲ್ಲ. ಸರಳತೆ, ಜೀವನ ಪ್ರೀತಿ, ಮುಗ್ಧ ನೋಟ ಸಾಹಿತ್ಯದಲ್ಲಿ ಬರೋದಿಲ್ಲ. ಈಗ ಬರೆಯಲು ಕುಳಿತರೆ ಏನೇನೋ ಮನಸ್ಸಿನಲ್ಲಿ ತುಂಬಿರುತ್ತದೆ. ರಾಜಕೀಯ, ಸತ್ಯ, ಧರ್ಮ, ಸಂಕೀರ್ಣತೆ, ಸಮಾಜದ ಏರುಪೇರು. ಅಂದು ಬರೆದಂಥದ್ದನ್ನು ಬರೆಯಲಾಗದು ಎಂದರು.

ವಿಶ್ವವನ್ನು ಆವರಿಸಿದೆ ಅಭುìದ ರೋಗ: ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಅವರ ಪ್ರಶ್ನೆಯ ತನಕ ಸಾಹಿತ್ಯ, ಕುಟುಂಬ,ಚಿತ್ರಗೀತೆಗಳ ಕುರಿತು ಸುತ್ತುತ್ತಿದ್ದ ಸಂವಾದ, ಸಂಸದೀಯ ವ್ಯವಸ್ಥೆ ಕುಸಿಯುತ್ತಿರುವ ಬಗ್ಗೆ, ಚರ್ಚೆಗಳು ಆಗದೆ ಬಜೆಟ್‌-ವಿಧೇಯಕಗಳ ಅನು ಮೋ ದನೆ ಬಗ್ಗೆ ತಿರುಗಿತು. ಇದಕ್ಕೆ ಸ್ಪಂದಿಸಿದ ವಿಧಾನ ಪರಿಷತ್‌ ಸದಸ್ಯರೂ ಆಗಿದ್ದ ಗೌಡರು, ಇಂದು ಪ್ರಜಾಪ್ರಭುತ್ವದ ಮೌಲ್ಯಗಳು ದಿನೇದಿನೆ ಕುಸಿಯುತ್ತಿವೆ. ಹಣದಿಂದ ಅಧಿಕಾರ ಕೊಂಡುಕೊಂಡ ವ್ಯಕ್ತಿಗಳು ವಿಧಾನ ಮಂಡಲ ಪ್ರವೇಶಿಸುತ್ತಾರೆ. ಶಾಸನಸಭೆಯ ಭಾಷೆ ಕೇಳಿದರೆ ಮೈಯೆಲ್ಲ ಉರಿದು ಹೋಗುತ್ತದೆ.

ಪಂಚೆಯನ್ನು ಮೇಲೆತ್ತಿ ತೊಡೆ ತಟ್ಟುವುದೇ ಮೌಲ್ಯ ಕುಸಿದಿರುವುದಕ್ಕೆ ಸಾಕ್ಷಿ. ಭ್ರಷ್ಟತೆಯ ಪರಮಾಧಿಕಾರದಲ್ಲಿ ಪ್ರಾಮಾಣಿಕೆ ಹುಡುಕಬೇಕಾಗಿದೆ. ಪ್ರಜೆಗಳ ಕಷ್ಟ ಕೇಳುತ್ತಿಲ್ಲ. ಅಧಿ ಕಾರಸ್ಥರಲ್ಲಿ ಸ್ವಾರ್ಥದ ಲಾಲಸೆ ಹೆಚ್ಚಿ ಅವರ ಕೆಲಸ ಮಾತ್ರ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವರೋ ಅವರು ಎಲ್ಲವನ್ನೂ ಪಡೆದುಕೊಳ್ಳುತ್ತಾರೆ. ಇದು ವಿಶ್ವವನ್ನು ಆವರಿಸಿದ ಅಭುದ ರೋಗ. ಆದರೆ, ವ್ಯಕ್ತಿತ್ವದ ಪತನ ಆಗುತ್ತಿದೆ. ಇದನ್ನು ಸರಿ ಮಾಡಲು ಕ್ರಾಂತಿ ಆಗಬೇಕು ಎಂದರೆ ಅದು ಅಸಾಧ್ಯ. ವ್ಯಕ್ತಿಗಳಲ್ಲಿ ಅರಿವಾದರೆ ಎಂಥ ಬದಲಾವಣೆ ಸಾಧ್ಯ. ಈ ಅರಿವಿನ ಬದಲಾವಣೆ ಸಾಮೂಹಿಕ ಅರಿವಾಗಬೇಕು ಎಂದು ಹೇಳಿದರು.

ಮನಸ್ಸು ಹಳ್ಳಿಯಲ್ಲೇ ಇರುತ್ತೆ!: ಮಾತು ಮಂಥನದ ಪ್ರಥಮ ಪ್ರಶ್ನೆಯ ಪಾಳಿ ಸಂಕಮ್ಮ ಜಿ. ಸಂಕಣ್ಣನವರ ಪಾಲಿಗೆ ಬಂದಿತ್ತು. ಗೀತ ಸಾಹಿತ್ಯಕ್ಕೂ, ಸಿನಿಮಾ ಸಾಹಿತ್ಯಕ್ಕೂ ವ್ಯತ್ಯಾಸ ಏನು ಎಂದು ಕೇಳಿ ಹಳ್ಳಿಯ ಸೊಗಡೇ ಕಾಣಾ¤ವಲ್ಲ ಪದ್ಯಗಳಲ್ಲಿ ಎಂದು ಕೇಳಿದರು.

ಕಾವ್ಯ, ಸಾಹಿತ್ಯ ರಚನೆ ಮಾಡುವಾಗ ನನ್ನ ಮನಸ್ಸು ನನ್ನ ಊರು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕುರುಬರ ಹಳ್ಳಿಯಲ್ಲೇ ಇರುತ್ತದೆ ಎಂದು ಮಾತು ಆರಂಭಿಸಿದ ಸರ್ವಾಧ್ಯಕ್ಷರು, ನಗರದಲ್ಲಿ ವಾಸಿಸುತ್ತಿದ್ದರೂ ಸಾಹಿತ್ಯ ರಚನೆಯಲ್ಲಿ ತೊಡಗಿದಾಗ ನನ್ನ ಊರು, ರೈತರು, ಕೃಷಿ ಕಾರ್ಮಿಕರು, ಶಾಲೆ, ಅರಳೀಮರ, ರಂಗನಾಥನ ತೇರು, ಜಾನಪದ, ನುಡಿಸುವ ತಮಟೆ ಎಲ್ಲವೂ ಕಾಣುತ್ತದೆ. ತಮಟೆಯ ಲಯವನ್ನು ಕಾವ್ಯದಲ್ಲಿ ಹಿಡಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದರು.

ಸಿನಿಮಾಕ್ಕೆ ಬರೆಯುವಾಗ ದೃಶ್ಯ ಸಂಯೋಜನೆ, ಸಂಗೀತ ನಿರ್ದೇಶಕರು ಹೇಳಿದಂತೆ ಲಯ ಬೇಕು. ಕಾವ್ಯ ಬರೆಯುವಾಗ ನಮ್ಮ ಮನಸ್ಸು ಹಕ್ಕಿಯಾಗಿ ಹಾರುತ್ತದೆ. ಕವಿತೆಯಲ್ಲಿ ಮುಕ್ತ ಸ್ವಾತಂತ್ರÂ, ಹಾರುವ ಹಕ್ಕಿಯ ಹಾಗೆ ಅಂಬರದಲ್ಲಿ ವಿಹರಿಸಬಹುದು. ಭೋರ್ಗರೆದು ಬೀಳುವ ಜಲಪಾತದಂತೆ, ಸಮುದ್ರದ ಅಲೆಯಂತೆ ಬರುತ್ತದೆ ಎಂದರು.

ವಚನಕಾರರ ವಚನಗಳು ಆಂಗ್ಲ ಭಾಷೆಗೆ ತುರ್ಜುಮೆ ಆಗಿದ್ದರಿಂದ ಕನ್ನಡದ ವಚನಗಳು ಅವರ ಗಮನಕ್ಕೂ ಬಂದಿವೆ. ನನ್ನ ಅನೇಕ ಕೃತಿಗಳೂ ಭಾಷಾಂತರಗೊಂಡಿವೆ. ಬ್ರಿಟಿಷರು, ಅಮೆರಿಕನ್ನರು ಕನ್ನಡದ ಕಡೆ ನೋಡುವಂತೆ ಆಗಿದೆ. ನಾವು ಪ್ರಾಚೀನ, ನಮ್ಮ ಭಾಷೆ ಪ್ರಾಚೀನ, ವಿಶ್ವಮುಖಿ ಎನ್ನುವುದಕ್ಕೆ ವಿಶಾಲ ಅರ್ಥವಿದೆ ಎಂದೂ ವಿಶ್ಲೇಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next