Advertisement

ಯಶಸ್ವಿನಿಗೆ ಮರುಜೀವ: ಜಿಲ್ಲೆಯಲ್ಲಿ 24,165 ನೋಂದಣಿ

03:01 PM Jan 07, 2023 | Team Udayavani |

ಉಡುಪಿ: ನಾಲ್ಕು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ರಾಜ್ಯ ಸರಕಾರದ ಜನೋಪಯೋಗಿ “ಯಶಸ್ವಿನಿ ಯೋಜನೆ’ಗೆ ಮತ್ತೆ ಚಾಲನೆ ಸಿಕ್ಕಿದ್ದು, ನೋಂದಣಿ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 24,165 ಮಂದಿ ನೋಂದಾಯಿಸಿದ್ದಾರೆ.

Advertisement

ಗ್ರಾಮೀಣ ಸಹಕಾರ ಸಂಘಗಳ, ಸ್ವಸಹಾಯ ಗುಂಪುಗಳ ನಾಲ್ವರು ಸದಸ್ಯರ ಕುಟುಂಬವೊಂದಕ್ಕೆ ವಾರ್ಷಿಕ 500 ರೂ.ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇ. 20ರಷ್ಟು (100 ರೂ.) ಹೆಚ್ಚುವರಿಯಾಗಿ ಪಾವತಿಸಬೇಕು.

ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬಕ್ಕೆ ವಾರ್ಷಿಕ 1 ಸಾವಿರ ರೂ. ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತೀ ಸದಸ್ಯನಿಗೆ ಶೇ. 20ರಷ್ಟು (200 ರೂ.) ಹೆಚ್ಚುವರಿಯಾಗಿ ಪಾವತಿಸಬೇಕು.

ಪ.ಜಾತಿ/ಪಂಗಡದ ಸದಸ್ಯರಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಸಹಾಯಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವ ವಂತಿಗೆಯನ್ನು ಸರಕಾರವೇ ಭರಿಸಲಿದೆ.

ರದ್ದುಗೊಂಡಿದ್ದ ಯೋಜನೆ
ಸಹಕಾರ ಸಂಘಗಳ ಸದಸ್ಯರಿಗೆ ಆರೋಗ್ಯ ಸೇವೆ ನೀಡಲು 2003ರಲ್ಲಿ ಯಶಸ್ವಿನಿ ಯೋಜನೆಯನ್ನು ರಾಜ್ಯ ಸರಕಾರ ಆರಂಭಿಸಿತ್ತು. ಆದರೆ 2018 ರಲ್ಲಿ ರಾಜ್ಯದ ಎಲ್ಲರಿಗೂ ಸಾರ್ವತ್ರಿಕ ಆರೋಗ್ಯ ರಕ್ಷಣೆ ನೀಡಲು ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನಗೊಳಿಸಿದ ಸರಕಾರ 2018ರಲ್ಲಿ ಯಶಸ್ವಿನಿ ಆರೋಗ್ಯ ಯೋಜನೆಯನ್ನು ರದ್ದುಗೊಳಿಸಿತ್ತು. ಪ್ರಸ್ತುತ ಇದೇ ಯೋಜನೆಗೆ ಮರು ಚಾಲನೆ ನೀಡಲಾಗಿದೆ.

Advertisement

ಬೇಕಿರುವ ಅರ್ಹತೆ
ಯಶಸ್ವಿನಿಯ ಫ‌ಲಾನುಭವಿಯಾಗಲು ಕನಿಷ್ಠ3 ತಿಂಗಳು ಮುಂಚಿತವಾಗಿ ಅರ್ಹ ಗ್ರಾಮೀಣ ಸಹಕಾರ ಸಂಘವೊಂದರ ಸದಸ್ಯರಾಗಿರಬೇಕು. ಗ್ರಾಮೀಣ ಸಹಕಾರ ಸಂಘ, ಬ್ಯಾಂಕ್‌ಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಸ್ತ್ರೀ ಶಕ್ತಿ ಗುಂಪು, ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಸದಸ್ಯರು ಯೋಜನೆಯ ಫ‌ಲಾನುಭವಿಯಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next