Advertisement

ಅನಕ್ಷರಸ್ಥ ಪೋಷಕರ ಮಕ್ಕಳ ಕೈಗೆಟುಕದ ಖಾಸಗಿ ಶಿಕ್ಷಣ !- ಒಂದು ಚಿಂತನೆ

10:39 AM Aug 23, 2019 | mahesh |

ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆಯನ್ನು ಕಾಣುತ್ತಿದ್ದೇವೆ. ಇದರಲ್ಲಿ ಶಿಕ್ಷಣವೂ ಹೊರತಾಗಿಲ್ಲ. ಗಾಂಧೀಜಿಯವರು ಹೇಳುವಂತೆ “ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ”.

Advertisement

ಆದರೆ ಇಂದಿನ ಶಿಕ್ಷಣ ಪದ್ಧತಿಯ ಕುರಿತಂತೆ ಬಹುಜನರಿಗೆ ಬೇಸರವಿದೆ. ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯು ಕೇವಲ ಉದ್ಯೋಗದ ಕನಸನ್ನು ಹೇರುತ್ತಿದೆ ಹೊರತು ನೈತಿಕ ಶಿಕ್ಷಣದ ಕೊರತೆ ಕಾಣುತ್ತಿದೆ ಎಂಬ ವಾದ ಎಲ್ಲಡೆಯಿಂದಲೂ ಕೇಳಿಬರುತ್ತಿದೆ.

ದೇಶದಲ್ಲಿ ಬ್ರಿಟಿಷ್‌ ಆಳ್ವಿಕೆ ಇದ್ದಾಗ ಐದನೇ ತರಗತಿಯವರೆಗೆ ಇಂಗ್ಲೀಷನ್ನು ಭಾಷೆಯಾಗಿ ಕಲಿಸಲಾಗುತ್ತಿತ್ತು. ಅಂದು ಕನ್ನಡ ಮಾತೃ ಭಾಷೆಯಲ್ಲಿ ಕಲಿತವರು ಎತ್ತರಕ್ಕೆ ಬೆಳೆದು ಅನೇಕ ಸಾಧನೆಗಳನ್ನು ಮಾಡಿರಲ್ಲಿಲ್ಲವೇ? ಅಂದಿನ ಶಿಕ್ಷಣ ಸಾಮರ್ಥ್ಯ ಹಾಗಿತ್ತು.

ಅಂದು ಬಡವ, ಶ್ರೀಮಂತ ಎಂಬ ಭೇದ ಭಾವ ಶಿಕ್ಷಣ ವ್ಯವಸ್ಥೆಯಲ್ಲಿರಲ್ಲಿಲ್ಲ. ಎಲ್ಲರೂ ಸಮಾನರು, ಎಲ್ಲರಿಗೂ ಸಮಾನವಾಗಿ ಶಿಕ್ಷಣ ಕಲಿಯುವ ಅವಕಾಶ . ಇದರೊಂದಿಗೆ ಮಕ್ಕಳ ನೈತಿಕ ಗುಣಮಟ್ಟದ ಬೆಳವಣಿಗೆಗೆ ಸಹಕಾರಿಯಾಗಿತ್ತು.

ಸ್ವಾತಂತ್ರ್ಯ ನಂತರದ ಶಿಕ್ಷಣ ಪದ್ಧತಿಯನ್ನು ಬಹಳ ಹತ್ತಿರದಿಂದ ಗಮನಿಸುತ್ತಿದ್ದೇವೆ. ಎಲ್ಲರೂ ಒಂದೇ ಶಾಲೆಯಲ್ಲಿ ಕಲಿಯುವ, ಒಂದೇ ಪಠ್ಯ ಕ್ರಮವನ್ನು ಬೋಧಿಸುವ, ಒಂದೇ ಮಾಧ್ಯಮದಲ್ಲಿ ಕಲಿಯುವ ಒಂದೇ ರೀತಿಯಲ್ಲಿ ಪರೀಕ್ಷೆಯನ್ನು ನಡೆಸುವ ಬ್ರಿಟಿಷ್‌ ಶಿಕ್ಷಣ ಕ್ರಮ ಕೊನೆಯಾಯಿತು. ಬದಲಾಗಿ ಉಳ್ಳವರ ಮಕ್ಕಳಿಗಾಗಿಯೇ ಖಾಸಗಿ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಂಡವು.

Advertisement

ಈ ವ್ಯವಸ್ಥೆಯಲ್ಲಿ ‘ಇಂಗ್ಲಿಷ್’ ಭಾಷೆ ಮಾತನಾಡಲು ಮತ್ತು ಬರೆಯಲು ಬಾರದಿರುವವರನ್ನು ‘ಅನಕ್ಷರಸ್ಥ’ರು ಎಂಬ ದೃಷ್ಟಿಯಲ್ಲಿ ನೋಡಲಾಗುತ್ತಿದೆ. ಇಲ್ಲಿ ಇಂಗ್ಲೀಷ್‌ ಮಾಧ್ಯಮಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಯಿತು. ಇದರಿಂದಾಗಿ  ಇವರ ದೃಷ್ಟಿಯಲ್ಲಿ ‘ಅನಕ್ಷರಸ್ಥ’ ಪೋಷಕರ ಮಕ್ಕಳು ಇಂತಹ ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾಗುವಂತಾಯಿತು. “ವಿದ್ಯಾದಾನ ಮಹಾದಾನ” ಎಂಬ ಮೌಲ್ಯ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಾಣದಾಗಿದೆ.

ಸಮಾಜದಲ್ಲಿ ಸಾಧನೆ ಮಾಡಲು ಪ್ರತಿಭೆ, ಪರಿಶ್ರಮ ಮತ್ತು ವ್ಯವಹಾರ ಜ್ಞಾನ ಮುಖ್ಯವಾಗುತ್ತದೆಯೇ ಹೊರತು ಭಾಷೆ ಅಲ್ಲ. ಭಾಷೆ ಎಂಬುದು ನಮ್ಮ ಸಂವಹನಕ್ಕೆ ಅಗತ್ಯವಾಗಿರುವ ಮಾಧ್ಯಮಷ್ಟೇ ಎಂಬುದನ್ನು ಈ ವ್ಯವಸ್ಥೆಯಲ್ಲಿ ಉಸಿರಾಡುತ್ತಿರುವವರಿಗೆ ತಿಳಿಹೇಳುವವರು ಯಾರು ಎಂಬುದೇ ಬಹುದೊಡ್ಡ ಪ್ರಶ್ನೆಯಾಗಿ ಎಲ್ಲರನ್ನೂ ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next