ಪಂಜಾಬ್: ಸಿನೆಮಾ ತಾರೆಯರಿಗೆ ಕೆಂಪು ಹಾಸು ಹಾಕಿ ಸ್ವಾಗತಿಸುವುದನ್ನು ಕಂಡಿದ್ದೇವೆ. ಅದೇ ಒಬ್ಬ ಸೈನಿಕನಿಗೆ ಅಂಥ ಸ್ವಾಗತ ಸಿಕ್ಕರೆ ಹೇಗಿರಬಹುದು.
ಹೃದಯ ತುಂಬಿಬರಬಹುದು. ಗಡಿಯಲ್ಲಿ, ಯುದ್ಧಭೂಮಿಯಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ಪ್ರತಿ ಸೈನಿಕನಿಗೂ ಅಂಥದ್ದೇ ಸ್ವಾಗತವನ್ನು ನಾವು ಕೋರಬೇಕು.
ಇದಕ್ಕೆ ನಿದರ್ಶನವೆಂಬಂತೆ ಸ್ವಾತಂತ್ರ್ಯ ದಿನ ದಂದು ಪಂಜಾಬ್‌ನಲ್ಲಿ ಸೇನೆಗೆ ಸೇರಿದ ಬಳಿಕ ಮೊದಲ ಬಾರಿಗೆ ಊರಿಗೆ ಬಂದ ಮಗನನ್ನು ಕುಟುಂಬಸ್ಥರು ಹಾಗೂ ಆ ಹಳ್ಳಿ ಯವರು ಅದ್ಧೂರಿಯಾಗಿ ಕೆಂಪು ಹಾಸು ಹಾಕಿ ಸ್ವಾಗತಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದಕ್ಕೆ ಹಲ ವರು ಪ್ರಶಂಸನೆಯ ಸುರಿಮಳೆಗೆರೆದಿದ್ದಾರೆ.
ಭಾರತೀಯ ಸೇನೆಯ ನಿವೃತ್ತ ಮೇಜರ್ ಪವನ್ ಕುಮಾರ್ ಎಂಬುವವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ವೀಡಿ ಯೋವನ್ನು ಹಂಚಿಕೊಂಡು, “ಊರಿನ ಯು ವಕ ಭಾರತೀಯ ಸೇನೆಯನ್ನು ಸೇರಿ ರುವ ಸಂತಸ, ಹೆಮ್ಮೆ ಊರಿನವರ ಮುಖ ದಲ್ಲಿ ಎದ್ದು ಕಾಣುತ್ತಿದೆ. ಈ ರೀತಿಯಾಗಿ ಸೈನಿಕರನ್ನು ಪ್ರೇರೆಪಿಸಿದರೆ ಒಂದು ದೇಶವು ವಿಫಲವಾಗಲು ಸಾಧ್ಯವೇ?’ ಎಂದು ಬರೆದಿದ್ದಾರೆ.
ವೀಡಿಯೋದಲ್ಲಿ ಏನಿದೆ?: ಕಾರಿನಲ್ಲಿ ಊರಿಗೆ ಬಂದ ಸೈನಿಕನನ್ನು ಕೆಂಪುಹಾಸು ಹಾಕಿ ಬರ ಮಾಡಿಕೊಳ್ಳಲಾಗುತ್ತದೆ. ಸಂತಸ ಮತ್ತು ಹೆಮ್ಮೆಯಿಂದ ಸಾಗಿಬಂದ ಸೈನಿಕ ತನ್ನ ತಾಯಿಗೆ ಸೆಲ್ಯೂಟ್ ಹೊಡೆದು, ಮಂಡಿ ಯೂರಿ ನಮಸ್ಕರಿಸುತ್ತಾನೆ. ಹೆಮ್ಮೆಯಿಂದ ಮಗನಿಗೆ ಆರ್ಶೀವದಿಸಿ, ಮಗನನ್ನು ತಾಯಿ ಅಪ್ಪಿಕೊಳ್ಳುತ್ತಾಳೆ. ಅನಂತರ ಅಲ್ಲಿ ನೆರೆದಿ ರುವವರೆಲ್ಲರೂ ಸೈನಿಕನ ಮೇಲೆ ಹೂವಿನ ಮಳೆ ಸುರಿಸಿ, ಸಿಹಿ ತನ್ನಿಸಿ ಆತನನ್ನು ಹೆಮ್ಮೆ ಯಿಂದ ಸ್ವಾಗತಿಸುವಾಗ ಅವರ ಕಣ್ಣುಗಳು ತುಂಬಿಬಂದಿದ್ದವು. ಪ್ರತಿಯೊಬ್ಬರು ಸೆಲ್ಯೂಟ್ ನೀಡಿ ಸಂಭ್ರಮಿಸಿದರು.
ಸದಾ ವಿಶೇಷ ಸಂಗತಿಗಳನ್ನು ತಮ್ಮ ಸಾಮಾ ಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಆನಂ ದ್ ಮಹೀಂದ್ರಾ ಈ ವೀಡಿಯೋವನ್ನು ಹಂಚಿಕೊಂಡು “ಭಾರತೀಯರು ಹಾಗೂ ನಮ್ಮನ್ನು ರಕ್ಷಿಸುವ ಸೈನಿಕರ ನಡುವಿನ ಭಾವ ನಾತ್ಮಕ ಸಂಬಂಧವನ್ನು ಅರ್ಥ ಮಾಡಿ ಕೊಳ್ಳಬೇಕೆಂದರೆ ಈ ವೀಡಿಯೋವನ್ನು ನೋಡಬೇಕು. ಈ ಕುಟುಂಬದವರಿಗೆ ನನ್ನ ಸೆಲ್ಯೂಟ್’ ಎಂದು ಬರೆದುಕೊಂಡಿದ್ದಾರೆ.