ಶಿರಸಿ: ಅರಣ್ಯ ಇಲಾಖೆಗೆ ತಾಕತ್ತಿದ್ದರೆ ಅರಣ್ಯ ಅತಿಕ್ರಮಣ ಮಾಡಿದ ಜನಪ್ರತಿನಿಧಿಗಳ ಅತಿಕ್ರಮಣ ಖುಲ್ಲಾ ಮಾಡಿಸಿ ಎಂದು ಅರಣ್ಯ ಅತಿಕ್ರಮಣದಾರರ ಹೋರಾಟ ವೇದಿಕೆ ಅಧ್ಯಕ್ಷ ಎ. ರವೀಂದ್ರ ನಾಯ್ಕ ಗುಡುಗಿದರು.
ಗುರುವಾರ ಅವರು ಅರಣ್ಯ ಇಲಾಖೆಯ ವೃತ್ತ ಕಚೇರಿಯಲ್ಲಿ ನಡೆದ ಸಭೆಯಲ್ಲಿಪಾಲ್ಗೊಂಡು ಮಾತನಾಡಿ, ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಮೂವರು ಸಚಿವರು ನಡೆಸಿದ ಸಭೆಯ ನಡಾವಳಿಗೂ ಅಧಿಕಾರಿಗಳು ಕಿಮ್ಮತ್ತು ಕೊಟ್ಟಿಲ್ಲ. ಅರಣ್ಯ ಕಾನೂನೂ ಪಾಲಿಸದೇ ಸರಕಾರದ ನಡಾವಳಿಯನ್ನೂ ಮೀರಿ ಅರಣ್ಯ ಜಿಲ್ಲೆಯ 4 ಸಾವಿರ ಬಡ ಅತಿಕ್ರಮಣದಾರರಿಗೆ ಇಲಾಖೆಯ ಅಧಿಕಾರಿಗಳು 64 ರ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಇದಕ್ಕೆ ಸ್ಪಂದಿಸಿದ ಅರಣ್ಯಾಧಿಕಾರಿ ವಸಂತ ರೆಡ್ಡಿ, ಸರಕಾರದ ನಡಾವಳಿ ಸೂಚನೆ ಬಂದಿದೆ. ಆದೇಶ ಆಗಿಲ್ಲ. ಅದಕ್ಕಾಗಿ ಕಾಯುತ್ತಿದ್ದೇವೆ. ಆದೇಶ ಬಂದರೆ ಅತಿಕ್ರಮಣದಾರರ ವಿಚಾರಣೆ ಮಾಡುವದಿಲ್ಲ ಎಂದರು. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರರಿಗೂ ಸಭೆಯಲ್ಲಿ ಮಾತನಾಡಿ ಅಂತಿಮವಾಗಿ ಹದಿನೈದು ದಿನಗಳ ಕಾಲ ವಿಚಾರಣೆ ನಿಲ್ಲಿಸುವದಾಗಿ ಹೇಳಿದರು.
ಅಷ್ಟರೊಳಗೆ ಫೆಬ್ರವರಿ ಸಭೆಯ ಆದೇಶ ತರಿಸುವ ಬಗ್ಗೂ ಸಮಾಲೋಚನೆ ನಡೆಯಿತು. ಇದೆ ವೇಳೆ ಇನ್ನೂ ಐದು ಪ್ರಮುಖ ಸಂಗತಿಯ ಸಮಾಲೋಚನೆ ನಡೆಸಲಾಯಿತು. ಈ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜಯ್ ಜಿ.ಆರ್., ಸಹಾಯಕ ಅರಣ್ಯಸಂರಕ್ಷಾಧಿಕಾರಿ ಅಶೋಕ ಅಲಗೂರು, ಡಿ.ರಘು ಇತರರು ಇದ್ದರು.