ಚೆನ್ನೈ: ಸಂಗೀತ ಲೋಕದ ದಿಗ್ಗಜ ಎಸ್ ಪಿ ಬಾಲಸುಬ್ರಹ್ಮಣ್ಯಂ ಇಂದು ತಮ್ಮ ಗಾನಯಾನ ಕೊನೆಗೊಳಿಸಿ ವಿಧಿವಶರಾಗಿದ್ದದ್ದಾರೆ. ಇವರ ನಿಧನದ ಹಿನ್ನಲೆಯಲ್ಲಿ ಭಾರತೀಯ ಚಿತ್ರರಂಗ ಸೇರಿದಂತೆ ಅಪಾರ ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದು ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಸ್ವರನಮನವನ್ನು ಸಲ್ಲಿಸಿದ್ದಾರೆ.
1992ರಲ್ಲಿ ಬಿಡುಗಡೆಯಾದ ರೋಜಾ ಸಿನಿಮಾಕ್ಕೆ ಮೊದಲ ಬಾರಿಗೆ ಎ.ಆರ್ ರೆಹಮಾನ್ ಸಂಗೀತ ನೀಡಿದ್ದರು. ಇದರ ಪ್ರಮುಖ ಹಾಡುಗಳು ಎಸ್.ಪಿ ಬಿ ಕಂಠಸಿರಿಯಲ್ಲಿ ಮೂಡಿಬಂದಿದ್ದವು. ನಂತರದಲ್ಲಿ ಈ ಜೋಡಿ ಸಂಗೀತ ಕ್ಷೇತ್ರಕ್ಕೆ ಹಲವು ಜನಪ್ರಿಯ ಹಾಡುಗಳನ್ನು ಕೊಡುಗೆ ನೀಡಿದ್ದರು.
ಇಂದು ಎಸ್ ಪಿ ಬಿ ತಮ್ಮ ಗಾನಯಾನವನ್ನು ಅಂತ್ಯಗೊಳಿಸಿದ್ದು, ಈ ಬಗ್ಗೆ ರೆಹಮಾನ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ‘ಮನ ಧ್ವಂಸಗೊಂಡಿದೆ’ ಎಂದು ಬರೆದುಕೊಂಡಿದ್ದಾರೆ. ನಂತರ ಟ್ವೀಟ್ ಮೂಲಕ ವಿಶೇಷ ಗೌರವ ಸಲ್ಲಿಸಿದ್ದು, ವಿಜಯದ ಧ್ವನಿ, ಪ್ರೀತಿ, ಭಕ್ತಿ ಮತ್ತು ಸಂತೋಷದ ಧ್ವನಿ” ಎಂದು ಬಣ್ಣಿಸಿ ‘ಸಂಗೀತ ಗೌರವ’ ಸಲ್ಲಿಸಿದ್ದಾರೆ.
1992ರಲ್ಲಿ ರೋಜಾ ಸಿನಿಮಾಗೆ ಎ. ಆರ್ ರೆಹಮಾನ್ ಮೊದಲ ಬಾರಿಗೆ ಸಂಗೀತ ಸಂಯೋಜಿಸಿದಾಗ ‘ಆಗಲೇ 6 ಬಾರಿಯ ರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿದ್ದ’ ಎಸ್.ಪಿ.ಬಿ ಅವರಿಂದ ಹಾಡಿಸಿದ್ದರು. ನಂತರದಲ್ಲಿ ಹಲವಾರು ಸಿನಿಮಾಗಳಿಗೆ ಒಂದಾಗಿ ಕಾರ್ಯನಿರ್ವಹಿಸಿದ್ದರು.