Advertisement

ಪುನೀತ್‌ ಸಮಾಧಿ ಸ್ಥಳದಲ್ಲಿ ಶೀಘ್ರ ಸ್ಮಾರಕ: ಸಿಎಂ ಬೊಮ್ಮಾಯಿ

11:15 PM Feb 07, 2023 | Team Udayavani |

ಬೆಂಗಳೂರು: ಪುನೀತ್‌ ಹೆಸರನ್ನು ಮತ್ತಷ್ಟು ಚಿರಸ್ಥಾಯಿಯಾಗಿ ಮಾಡಲು ಅಪ್ಪು ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

Advertisement

ಪದ್ಮನಾಭನಗರದ ಅಟಲ್‌ ಬಿಹಾರಿ ವಾಜಪೇಯಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಿಂಗ್‌ ರೋಡ್‌ ರಸ್ತೆಗೆ ಡಾ.ಪುನೀತ್‌ ಹೆಸರು ನಾಮಕರಣ ಮಾಡಿ ಮಾತನಾಡಿದ ಅವರು, ಸ್ಮಾರಕದಲ್ಲಿ ಡಾ|ರಾಜ್‌, ಪುನೀತ್‌ ಜೀವನ ಸಾಧನೆ ಜನರಿಗೆ ತಿಳಿಹೇಳುವ ಕೆಲಸ ಮಾಡಲಾಗುವುದು ಎಂದರು.

ಹಾಗೆಯೇ ಅಂಬರೀಶ್‌ ಕೂಡ ಕನ್ನಡ ಚಿತ್ರರಂಗದಲ್ಲಿ ಕೊಡಗೈ ದಾನಿ ಎನಿಸಿ¨ªಾರೆ. ದೇಶ ವಿದೇಶದಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಮಾರ್ಚ್‌ ಮೊದಲ ವಾರದಲ್ಲಿ ಸರ್ಕಾರ ಅವರ ಸ್ಮಾರಕ ಲೋಕಾರ್ಪಣೆ ಮಾಡಲಿದೆ ಎಂದರು

ನಮಗೆ ಹೆಮ್ಮೆ:
ಸಚಿವ ಆರ್‌.ಅಶೋಕ್‌ ಮಾತನಾಡಿ, ನಾಯಂಡ ಹಳ್ಳಿಯಿಂದ ಜೆ.ಪಿ.ನಗರದ ವೇಗಾಸಿಟಿ ವರೆಗಿನ 12 ಕಿ.ಮೀ ವರೆಗಿನ ರಸ್ತೆಗೆ ಡಾ.ಪುನೀತ್‌ ರಾಜ್‌ ಕುಮಾರ್‌ ಹೆಸರು ಇಟ್ಟಿರುವುದು ಹೆಮ್ಮೆ ಆಗುತ್ತದೆ. ಇದಕ್ಕೆ ಸಿಎಂ ಬೊಮ್ಮಾಯಿ ಕಾರಣರಾಗಿದ್ದಾರೆ ಎಂದರು.

ಈ ರಸ್ತೆ ಹೆಸರಿಡಲು ಹಲವು ಸಾಧಕರ ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ ಅಂತಿಮವಾಗಿ ಮುಖ್ಯಮಂತ್ರಿಗಳು ಪುನೀತ್‌ ಹೆಸರು ಆಯ್ಕೆ ಮಾಡಿದರು. ರಾಜ್‌ ಕುಮಾರ್‌ ನಿಧನರಾಗಿ¨ªಾಗ ಸರ್ಕಾರ ಅರ್ಧ ಎಕರೆ ಭೂಮಿ ನೀಡಲು ಮಂದಾಗಿತ್ತು. ಆದರೆ, ಆಗಿನ ಸಿಎಂ ಆಗಿದ್ದ ಯಡಿಯೂರಪ್ಪ ಅವರಿಗೆ ಹೇಳಿ 2 ಎಕರೆ ಜಮೀನು ಕೊಡಿಸುವಲ್ಲಿ ಸಫ‌ಲನಾದೆ. ನಾನು ಕೂಡ ಈ ಹಿಂದೆ ಜಸಲಹಳ್ಳಿ ವ್ಯಾಪ್ತಿಯ ಡಾ.ರಾಜ್‌ ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿದ್ದೆ. ಪುನೀತ್‌ಗೆ ಕರ್ನಾಟಕ ರತ್ನ ನೀಡಿದಾಗ ಅದರ ಉಸ್ತುವಾರಿ ನಾನೇ ವಹಿಸಿಕೊಂಡಿದ್ದೆ ಎಂದು ಸ್ಮರಿಸಿದರು.

Advertisement

ಕಾರ್ಯಮದಲ್ಲಿ ಸಂಸದ ತೇಜಸ್ವಿಸೂರ್ಯ, ಶಾಸಕ ರವಿಸುಬ್ರಹ್ಮಣ್ಯ, ಸತೀಶ್‌ ರೆಡ್ಡಿ, ಕೃಷ್ಣಪ್ಪ, ಉದಯ್‌ ಗರುಡಾಚಾರ್‌, ನಟ ಅಭಿಷೇಕ್‌ ಅಂಬರೀಷ್‌, ರಾಕ್‌ಲೈನ್‌ ವೆಂಕಟೇಶ್‌, ಸುಂದರ್‌ರಾಜ್‌ ಇತರರಿದ್ದರು.

ಅಶೋಕ್‌ ಒಬ್ಬ ಛಲಗಾರ:
ಕಂದಾಯ ಸಚಿವ ಒಬ್ನ ಛಲಗಾರ. ಮನಸ್ಸು ಮಾಡಿದರೆ ಆ ಕೆಲಸವನ್ನು ಮಾಡದೇ ಬಿಡಲಾರ. ಯಾವುದೇ ಕೆಲಸ ನೀಡಿದರೂ ಅಚ್ಚುಕಟ್ಟಾಗಿ ಮಾಡದೆ ವಿರಮಿಸುದಿಲ್ಲ ಎಂದು ಸಿಎಂ ಬೊಮ್ಮಾಯಿ ಶ್ಲಾಘಿಸಿದ್ದರು. ಕಂದಾಯ ಇಲಾಖೆಯಿಂದ ಹಿಂದೆಂದೂ ಆಗದಂತಹ ಕೆಲಸ ಮಾಡಿದ್ದಾರೆ. ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮ ಸೇರಿದಂತೆ ಹಲವು ಜನಮೆಚ್ಚುವ ಕಾರ್ಯಕ್ರಮ ರೂಪಿಸಿದ ಹರಿಕಾರ ಎಂದರು. ಸತತ 6 ಬಾರಿಗೆ ಗೆದಿದ್ದಾರೆ. ಆರು ಬಾರಿ ಗೆಲವು ಸುಲಭವಲ್ಲ.ಪದ್ಮನಾಭ ಕ್ಷೇತ್ರದಲ್ಲಿ ಉದ್ಯಾನವನ ಸೇರಿದಂತೆ ಬಹಳಷ್ಟು ಉತ್ತಮ ಕೆಲಸ ಮಾಡಿ ಈ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next