Advertisement
ನೆಲಮಂಗಲ ಮೂಲದ ಮೋಹನ್ ಎಂಬಾತ ಕಳೆದ ಐದಾರು ತಿಂಗಳಿಂದ ಮಹಿಳೆಯೊಬ್ಬಳಿಗೆ ಫೇಸ್‌ಬುಕ್ ಹಾಗೂ ದೂರವಾಣಿ ಮೂಲಕ ಕಿರುಕುಳ ನೀಡುತ್ತಿದ್ದ. ಅಲ್ಲದೆ 15 ಲಕ್ಷ ರೂ. ನೀಡಬೇಕೆಂದು ಬೇಡಿಕೆಯನ್ನೂ ಇಟ್ಟಿದ್ದ. ಇದರಿಂದ ಮನನೊಂದ ಮಹಿಳೆ, ತನ್ನ ಪತಿ ಮತ್ತು ಸಂಬಂಧಿಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಳು. ಪತಿ ಹಾಗೂ ಕುಟುಂಬಸ್ಥರು ಈತ ಯಾರು ಎಂಬುದನ್ನು ಪತ್ತೆ ಹಚ್ಚಲು ಶುರು ಮಾಡಿದರು. ಆದರೆ, ಆತನ ಪತ್ತೆಯಾಗಿರಲಿಲ್ಲ. ಶುಕ್ರವಾರ ಆತ ಸಂಬಂಧಿಕರ ಮದುವೆಯೊಂದರಲ್ಲಿ ಭಾಗವಹಿಸಲು ಭೀಮಸಂದ್ರಕ್ಕೆ ಬಂದಿದ್ದ. ಈ ವೇಳೆ ಆತನ ಗುರುತುಸಿಕ್ಕಿತು. ಈತನೇ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂಬುದನ್ನು ಖಚಿತ ಪಡಿಸಿಕೊಂಡ ಮಹಿಳೆಯ ಸಂಬಂಧಿಕರು ಮತ್ತು ಭೀಮಸಂದ್ರ ನಾಗರಿಕರು, ಆತನನ್ನು ಕಂಬಕ್ಕೆ ಕಟ್ಟಿ ಹಾಕಿ, ಹಿಗ್ಗಾಮುಗ್ಗಾ ಥಳಿಸಿದರು. ನಂತರ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿ, ಪೊಲೀಸರಿಗೆ ಒಪ್ಪಿಸಿದರು.