Advertisement

6ರಂದು ಪ್ರತಿಭಟನಾ ಮೆರವಣಿಗೆ

01:33 PM Nov 25, 2021 | Team Udayavani |

ಮಾನ್ವಿ: ಪೊಲೀಸ್‌ ಇಲಾಖೆ ಅಧಿಕಾರಿಗಳು ಹಲ್ಲೆಗೊಳಗಾದವರು ನೀಡಿದ ದೂರಿನನ್ವಯ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಡಿ.6ರಂದು ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಎಂ.ಆರ್‌.ಎಚ್‌.ಎಸ್‌. ಪ್ರಗತಿಪರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಜೆ. ಅಬ್ರಾಹಾಂ ಹೊನ್ನಟಿಗಿ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ಪ್ರಭಾವಿ ಮುಖಂಡರೊಬ್ಬರು ಜಿಲ್ಲೆಯಲ್ಲಿ ಅನೇಕ ಅಕ್ರಮ ಚಟುವಟಿಕೆ ನಡೆಸುತ್ತಿದ್ದು, ಬಡವರಿಗೆ ಸರಕಾರದಿಂದ ದೊರೆಯುತ್ತಿರುವ ಅನ್ನಭಾಗ್ಯದ ಅಕ್ಕಿಯನ್ನು ಕೂಡ ಬಿಡದೆ ತಮ್ಮ ಅಕ್ಕಿಗಿರಣಿಯಲ್ಲಿ ಪಾಲೀಶ್‌ ಮಾಡಿಸಿ ಹೆಚ್ಚಿನ ಬೆಲೆಯ ಅಕ್ಕಿಯಲ್ಲಿ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದಾರೆ. ಅಕ್ರಮ ಚಟುವಟಿಕೆಗಳನ್ನು ಪ್ರಶ್ನೆಮಾಡಿದ ಉನ್ನತ ಅಧಿಕಾರಿಗಳನ್ನು, ಪತ್ರಿಕಾ ವರದಿಗಾರರನ್ನು, ಸಂಘಟನೆಗಳ ಮುಖಂಡರ ಮೇಲೆ ತಮ್ಮ ಬೆಂಬಲಿಗರಿಂದ ಮಾರಣಾಂತಿಕ ಹಲ್ಲೆ ಮಾಡಿಸುತ್ತಿದ್ದಾರೆ. ಇದನ್ನು ಖಂಡಿಸಿ ಹಮ್ಮಿಕೊಂಡಿರುವ ಹೋರಾಟದಲ್ಲಿ ತಾಲೂಕಿನ ಪ್ರಗತಿಪರ ಚಿಂತಕರು ಹಾಗೂ ಸಂಘ-ಸಂಸ್ಥೆಯವರು ಭಾಗವಹಿಸುವಂತೆ ಕೋರಿದರು.

ಮುಖಂಡರಾದ ಅಶೋಕ ನಿಲೋಗಲ್‌, ಎ.ಕೆ. ಮರಿಯಣ್ಣ, ಪಿ.ರವಿಕುಮಾರ್‌, ಜಯಪ್ಪ, ಬಸವರಾಜ, ಯಲ್ಲಪ್ಪ, ಅಜೀತ್‌, ಗಣೇಶ, ಶಿವು, ಸಿದ್ದಪ್ಪ, ಪರಶುರಾಮ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next