Advertisement

ಎಲ್ಲ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳಿಗೆ ಏಕಮಾದರಿಯ ಚಾರ್ಜರ್‌ಗೆ ಪ್ರಸ್ತಾವ

12:18 AM Sep 05, 2022 | Team Udayavani |

ಈ ಪ್ರಸ್ತಾವಕ್ಕೆ ಕೆಲವು ಕಂಪೆನಿಗಳು ವಿರೋಧ ವ್ಯಕ್ತಪಡಿಸಿದರೂ ಬಳಕೆದಾರರಿಗೆ ಖುಷಿ ನೀಡಲಿದೆ.

Advertisement

ಮಣಿಪಾಲ: ಹೊರಗೆ ಹೋಗುವಾಗ ಮೊಬೈಲ್‌ ಚಾರ್ಜರ್‌ ಕೊಂಡು ಹೋಗದೇ ಇರುವುದು ಹಾಗೂ ಬೇರೆಯವರ ಚಾರ್ಜರ್‌ ನಮ್ಮ ಮೊಬೈಲ್‌ಗೆ ಹೊಂದಾಣಿಕೆ ಆಗದೆ ಪರದಾಡುವುದು ನಮ್ಮೆಲ್ಲರ ಸಾಮಾನ್ಯ ಸಮಸ್ಯೆ. ಜತೆಗೆ ಇ- ವೇಸ್ಟ್‌ ಸಮಸ್ಯೆಯು ದಿನದಿಂದ ದಿನಕ್ಕೆ ಬೃಹತ್‌ ಆಗಿ ವ್ಯಾಪಿಸುತ್ತಿದ್ದು, ಅದಕ್ಕಾಗಿ ಸರಕಾರ ಈಗ ಹೊಸದೊಂದು ಪ್ರಸ್ತಾವವನ್ನು ಮುಂದಿಟ್ಟಿದೆ. ಇದು ಈ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ಭಾರತದಲ್ಲಿ 2019ರಲ್ಲಿ 3 ಸಾವಿರ ಕಿಲೋಟನ್‌ ಇ- ವೇಸ್ಟ್‌ ಉತ್ಪತ್ತಿಯಾಗಿದೆ. ಒಂದೇ ಮನೆಯಲ್ಲಿ ಹಲವು ಚಾರ್ಜರ್‌ಗಳ ಅಗತ್ಯವನ್ನು ತಪ್ಪಿಸುವ ಸಲುವಾಗಿ ಈ ಪ್ರಸ್ತಾವವನ್ನು ಮುಂದಿಟ್ಟಿದ್ದು, ಇದು ಇ-ವೇಸ್ಟ್‌ ಕಡಿಮೆಗೊಳಿಸಲು ಇಟ್ಟಿರುವ ಒಂದು ಸಣ್ಣ ಹೆಜ್ಜೆಯಾಗಿದೆ.

ಮೊಬೈಲ್‌ ಮತ್ತು ಇತರ ಪೋರ್ಟೆ ಬಲ್‌ ಎಲೆಕ್ಟ್ರಾನಿಕ್‌ ಸಾಧನಗಳಿಗೆ ಸಾಮಾನ್ಯವಾದ ಚಾರ್ಜರ್‌ ಅನ್ನು ಅನ್ವೇಷಿಸಲು ಸರಕಾರವು ಪರಿಣತ ಗುಂಪುಗಳನ್ನು ರಚಿಸಿದೆ ಮತ್ತು 2 ತಿಂಗಳಲ್ಲಿ ಈ ಕುರಿತು ವಿವರವಾದ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ.

2024ರ ಒಳಗೆ ಎಲ್ಲ ಮೊಬೈಲ್‌ ಕಂಪೆನಿಗಳು ಒಂದೇ ಮೊಬೈಲ್‌ ಚಾರ್ಜರನ್ನು ಬಳಸುವಂತಾಗ ಬೇಕು ಎಂದು ಯುರೋಪಿಯನ್‌ ಕಮಿಷನ್‌ ಇತ್ತೀಚೆಗೆ ಮಾಡಿದ ನಿರ್ಣಯಗಳ ಬಳಿಕ ಭಾರತದಲ್ಲೂ ಈ ಬೆಳವಣಿಗೆ ಆರಂಭವಾಗಿದೆ.

ಪ್ರಯೋಜನಗಳೇನು?
– ಪ್ರತೀ ಮೊಬೈಲ್‌ ಖರೀದಿಸುವಾಗ ಕಂಪೆನಿಗಳು ಚಾರ್ಜರ್‌ ನೀಡುವ ಅಗತ್ಯವಿರುವು ದಿಲ್ಲ. ಗ್ರಾಹಕರೂ ಬೇರೆ ಬೇರೆ ಮೊಬೈಲ್‌ಗೆ ವಿಭಿನ್ನ ವಾದ ಚಾರ್ಜರ್‌ ಖರೀದಿಸುವ ಅಗತ್ಯವೂ ಇಲ್ಲ.
– ಈ ಯೋಜನೆ ಪರಿಸರಕ್ಕೂ ಉತ್ತಮವಾಗಿದ್ದು, ಇ-ವೇಸ್ಟ್‌ ಉತ್ಪತ್ತಿಯಾಗುವುದು ಕಡಿಮೆಯಾಗುತ್ತದೆ.
– ನಾವು ಹೋದಲ್ಲೆಲ್ಲ ಮೊಬೈಲ್‌ಚಾರ್ಜರ್‌ ಕೊಂಡೊಯ್ಯುವ ಅನಿವಾರ್ಯ ಇರುವುದಿಲ್ಲ ಹಾಗೂ ಮನೆಯಲ್ಲೂ ಒಂದೇ ಜಾರ್ಜರ್‌ ಇದ್ದರೂ ಸಾಕಾಗುತ್ತದೆ.
– ಕಂಪೆನಿಗಳು ಹೊಸ ಮೊಬೈಲ್‌ ಉತ್ಪಾದಿಸುವ ವೇಳೆ ಅದಕ್ಕೆ ಬೇಕಾದ ಜಾರ್ಜರ್‌ ಅನ್ನು ಉತ್ಪಾದಿಸುವ ಅಗತ್ಯವಿರುವುದಿಲ್ಲ.

Advertisement

ಸವಾಲುಗಳು
ಈ ಯೋಜನೆಯಿಂದ ಸಾಕಷ್ಟು ಪ್ರಯೋ ಜನಗಳಿವೆಯಾದರೂ ಅಷ್ಟೇ ಸವಾಲುಗಳೂ ಇವೆ. ಒಂದೇ ಮಾದರಿಯ ಚಾರ್ಜರ್‌ ಜಾರಿಗೆ ತರುವುದು ಒಂದು ಸಂಕೀರ್ಣ ವಿಷಯ. ಭಾರತವು ಚಾರ್ಜರ್‌ ಉತ್ಪಾದನೆ ಮಾಡುವುದ ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸ್ಥಾನದಲ್ಲಿದೆ. ಆದರೆ ಕಂಪೆನಿಗಳು, ಗ್ರಾಹಕರು ಹಾಗೂ ಪರಿಸರ ಕುರಿತು ಆಲೋಚಿಸಿ ನಿರ್ಣಯ ತೆಗೆದುಕೊಳ್ಳಬೇಕಾದ ಅನಿವಾರ್ಯವಿದೆ ಎಂದು ಸಿಂಗ್‌ ಹೇಳಿದ್ದಾರೆ.
01 ಭಾರತದಲ್ಲಿ ಚಾರ್ಜರ್‌ ಉತ್ಪಾದನೆ ಮಾಡುವ ಕಂಪೆನಿಗಳಿದ್ದು, ಅವುಗಳ ಮೇಲೆ ಈ ಯೋಜನೆಯು ಪರಿಣಾಮ ಬೀರಲಿದೆ.
02 ಭಾರತದಲ್ಲಿ ಗರಿಷ್ಠ ಮಂದಿಕಡಿಮೆ ಬೆಲೆಯ ಮೊಬೈಲ್‌ ಬಳಸುತ್ತಿದ್ದು, ಒಂದೇ ಮಾದರಿಯ ಚಾರ್ಜರ್‌ ಪ್ರಸ್ತಾವ ಜಾರಿಗೆ ಬಂದರೆ ಮೊಬೈಲ್‌ ಬೆಲೆ ಏರಿಕೆ ಯಾಗಬಹುದು.
03 ಕಳೆದ 4-5 ವರ್ಷಗಳಲ್ಲಿಮೊಬೈಲ್‌ ಜಾರ್ಜರ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಯುಎಸ್‌ಬಿ-ಸಿ ಚಾರ್ಜರ್‌ನ ಬಳಕೆ ಹೆಚ್ಚಾಗಿದೆ. ಆದರೂ ಭಾರತದಲ್ಲಿ ಹೆಚ್ಚು ಜನರು ಬೇರೆ ಬೇರೆ ಚಾರ್ಜರ್‌ ಸದ್ಯ ಬಳಕೆ ಮಾಡುತ್ತಿರುವುದು ಸವಾಲಾಗಿದೆ.
04 ಡೆಲ್‌ ಮತ್ತು ಎಚ್‌ಪಿಯಂತಹ ಹಾರ್ಡ್‌ವೇರ್‌ ಉತ್ಪಾದಕ ಕಂಪೆನಿ ಗಳು ಈ ಪ್ರಸ್ತಾವವನ್ನು ವಿರೋಧಿಸಿವೆ.
05 ಬೇರೆ ಬೇರೆ ಕಂಪೆನಿಗಳ ಮೊಬೈಲ್‌ಗ‌ಳು ವಿಭಿನ್ನ ಗುಣಮಟ್ಟವನ್ನು ಹೊಂದಿದ್ದು, ಮೊಬೈಲ್‌ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಯಾವೆಲ್ಲ ಗ್ಯಾಜೆಟ್‌ ಒಳಗೊಂಡಿದೆ ?
ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ ಸ್ಪೀಕರ್‌ಗಳು, ವಯರ್‌ಲೆಸ್‌ ಇಯರ್‌ ಬಡ್ಸ್‌ ಹಾಗೂ ಸ್ಮಾರ್ಟ್‌ ವಾಚ್‌ ಸಹಿತ ಎಲ್ಲ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳಿಗೆ ಒಂದೇ ಮಾದರಿಯ ಚಾರ್ಜರ್‌ಗೆ ಪ್ರಸ್ತಾವ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next