Advertisement

ಯುಗಾದಿ: ಗ್ರಾಮ ದೇವತೆಗಳ ಮೆರವಣಿಗೆ

06:35 PM Apr 16, 2021 | Team Udayavani |

ಶ್ರೀನಿವಾಸಪುರ: ಹನ್ನೊಂದು ದೇವತಾಮೂರ್ತಿಗಳನ್ನು ತಳಿರು ತೋರಣಗಳಿಂದಅಲಂಕರಿಸಿ 10 ಬೆಳ್ಳಿ ಪಲ್ಲಕ್ಕಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.ಪಟ್ಟಣದಲ್ಲಿ ಗ್ರಾಮ ದೇವತೆಗಳನ್ನು ಪ್ರತಿವರ್ಷ ಯುಗಾದಿ ಹಬ್ಬದಂದು ಗ್ರಾಮಮುಖಂಡರು ಸೇರಿಕೊಂಡು ಮೆರವಣಿಗೆನಡೆಸುವುದು ಸಂಪ್ರದಾಯ.

Advertisement

ಗ್ರಾಮ ದೇವತೆಗಳಾದ ಚೌಡೇಶ್ವರಿ, ಗಂಗಮ್ಮ, ಪಿಲೇಕಮ್ಮ,ನಲ್ಲಗಂಗಮ್ಮ, ಅಷ್ಟಮೂರ್ತೆಮ್ಮ, ನರಿಡೆಮ್ಮ,ರೇಣುಕಾ ಯಲ್ಲಮ್ಮ,ಕನ್ಯಕಾಪರಮೇಶ್ವರಿ,ಲಕ್ಷ್ಮೀ ನರಸಿಂಹಸ್ವಾಮಿ, ತಿರು ಮಲರಾಯಸ್ವಾಮಿ, ವರದಬಾಲಾಂಜ ನೇಯಸ್ವಾಮಿದೇವತಾ ಮೂರ್ತಿಗಳನ್ನು ಪ್ರತ್ಯೇಕ ಪಲ್ಲಕ್ಕಿಗಳಲ್ಲಿಇಟ್ಟು ಮೆರವಣಿಗೆ ನಡೆಸಲಾಯಿತು.

ಪಲ್ಲಕ್ಕಿಗಳು ನೇರವಾಗಿ ಚೌಡೇಶ್ವರಿದೇವಾಲಯದ ಬಳಿ ಬಂದು ಪ್ರಥಮ ಪೂಜೆಶ್ರೀ ಚೌಡೇಶ್ವರಿ ಮಾತೆಗೆ ಪೂಜೆ ಸಲ್ಲಿಸಿದ ನಂತರಮೆರವಣಿಗೆ ಆರಂಭಿಸಿ ಇಡೀ ರಾತ್ರಿ ಬುಧವಾರಹಾಗೂ ಹಗಲು ಗುರುವಾರ ಬೆಳಗ್ಗೆ 11ಗಂಟೆಯವರಿಗೆ ಮೆರವಣಿಗೆ ನಡೆಸಲಾಯಿತು.ಭಕ್ತರು ಪೂಜೆ ಸಲ್ಲಿಸಿದರು.

ಶ್ರೀ ಚೌಡೇಶ್ವರಿಮಾತೆ ಹೊತ್ತ ಪಲ್ಲಕ್ಕಿಯಲ್ಲಿ ಗಣಪತಿಗಳ ವಾದ್ಯವೃಂದ ಮೂರ್ತಿಗಳು ಭಕ್ತರ ಮನೆ ಸೂರೆಗೊಳಿಸದವು. ಮೆರವಣಿಗೆ ಜವಾಬ್ದಾರಿಯನ್ನುಎಸ್‌.ಆರ್‌.ಮಂಜುನಾಥ್‌, ವೆಂಕಟರಾಮಪ್ಪ,ಮುನಿರೆಡ್ಡಿ, ಎ.ಎನ್‌.ಜಗದೀಶ್‌, ಶಂಕರೇಗೌಡಇತರರು ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next