Advertisement

ಕಾಂಗ್ರೆಸ್ ಕಾಲದಲ್ಲೂ ಖಾಸಗಿ ಸಮೀಕ್ಷೆ ನಡೆದಿತ್ತು: ಮಾಹಿತಿ ಕಳವು ಆರೋಪಕ್ಕೆ ಸಿಎಂ ತಿರುಗೇಟು

02:30 PM Nov 17, 2022 | Team Udayavani |

ಬೆಂಗಳೂರು: ಕಾಂಗ್ರೆಸ್ ನವರು ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ. ಮತದಾರರ ಮಾಹಿತಿ ಕಳವು ಆಧಾರ ರಹಿತ ಆರೋಪ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

Advertisement

ಮತದಾರರ ಸಮೀಕ್ಷೆ ಹೆಸರಿನಲ್ಲಿ ಖಾಸಗೀತನಕ್ಕೆ ಕನ್ನ ಹಾಕಲಾಗಿದೆ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಇಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣಾ ಆಯೋಗ ಸ್ವೀಪ್ ಕಾರ್ಯಕ್ರಮ ಕೈಗೊಳ್ಳಲು  ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ  ವಹಿಸಿರುತ್ತಾರೆ. ಅವರು ಸಮೀಕ್ಷಾ ಕೆಲಸವನ್ನು ಎನ್ ಜಿಓ ಗಳಿಗೆ ನೀಡಿರುತ್ತಾರೆ. ಇದೇನು ಮೊದಲ ಬಾರಿ ನೀಡಿರುವುದಲ್ಲ. 2018 ರಲ್ಲಿ ಇದ್ದ ಸರ್ಕಾರದ ಕಾಲದಲ್ಲಿಯೂ ನೀಡಿದ್ದಾರೆ. ಎನ್ ಜಿಒ ಬಿಎಲ್ ಡಿ ದುರ್ಬಳಕೆ ಮಾಡಿದ್ದಾರೆ. ಆದ್ದರಿಂದ ಚುನಾವಣಾ ಆಯೋಗ ನೀಡಿರುವ ಆದೇಶದಿಂದ ಮೊದಲುಗೊಂಡು ಇಡೀ ಪ್ರಕರಣದ ಸಮಗ್ರ ತನಿಖೆಗೆ ಸೂಚನೆ ನೀಡುತ್ತೇನೆ. ನಿಜ ಹೊರಗೆ ಬರಲಿ ಎಂದರು.

ಇದನ್ನೂ ಓದಿ:ಅಡಿಲೇಡ್ ನಲ್ಲಿ ಆ್ಯಶ್ಟನ್ ಆ್ಯಗರ್ ಸೂಪರ್ ಮ್ಯಾನ್ ಫೀಲ್ಡಿಂಗ್: ಇಲ್ಲಿದೆ ವಿಡಿಯೋ

ಆಧಾರ ರಹಿತ ಆರೋಪ: ಕಾಂಗ್ರೆಸ್ ರಾಜೀನಾಮೆಗೆ ಒತ್ತಾಯಿಸುವುದು   ಹಾಸ್ಯಾಸ್ಪದ. ಸಂಬಂಧವಿಲ್ಲದ್ದನ್ನು ಕೇಳುತ್ತಿದ್ದಾರೆ. ಅದೇ ಮಾನದಂಡವಾದರೆ ಕಾಂಗ್ರೆಸ್ ಮುಖ್ಯಮಂತ್ರಿಗಳು ಈವರೆಗೆ ಮೂರು ಬಾರಿ ರಾಜೀನಾಮೆ ನೀಡಬೇಕಿತ್ತು. ಇದೊಂದು ಆಧಾರರಹಿತ ಆರೋಪ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next