Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರಕಾರ, ರೋಗ ಪೂರ್ವ ನಿಯಂತ್ರಣ ಕ್ರಮಗಳಿಗೆ ಹೆಚ್ಚು ಒತ್ತು ನೀಡಿದೆ. ಇದೇ ರೀತಿ ಕೋವಿಡ್ ಲಸಿಕೀಕರಣಕ್ಕೂ ವೇಗ ನೀಡಿದೆ.
ರಾಜ್ಯದಲ್ಲಿ ಈವರೆಗೆ, 12-14 ವಯೋಮಾನದವರಿಗೆ ಮೊದಲ ಡೋಸ್ ಶೇ. 65.6, 15-17 ವಯೋಮಾನದವರಿಗೆ ಮೊದಲ ಡೋಸ್ ಶೇ. 79 ಹಾಗೂ ಎರಡನೇ ಡೋಸ್ ಶೇ. 64.5ರ ಗುರಿ ಸಾಧಿಸಿದೆ. 15 ವರ್ಷ ಮೇಲ್ಪಟ್ಟವರಲ್ಲಿ ಮೊದಲ ಡೋಸ್ ಶೇ. 100 ಹಾಗೂ ಎರಡನೇ ಡೋಸ್ ಶೇ. 95.4 ಆಗಿದೆ. 18ವರ್ಷ ಮೇಲ್ಪಟವರಲ್ಲಿ ಮೊದಲ ಡೋಸ್ ಶೇ. 101 ಹಾಗೂ ಎರಡನೇ ಡೋಸ್ ಶೇ. 97.4 ಮಂದಿಗೆ ನೀಡಲಾಗಿದೆ. ಇದುವರೆಗೆ ಶೇ. 57.6ರಷ್ಟು ಮುನ್ನೆಚ್ಚರಿಕೆ ಲಸಿಕೆ ಡೋಸ್ ನೀಡಲಾಗಿದೆ. ಈ ಮೂಲಕ ರಾಜ್ಯವು ಲಸಿಕೀಕರಣದಲ್ಲಿ ಶ್ಲಾಘನೀಯ ಪ್ರಗತಿ ಸಾಧಿಸುತ್ತಿದೆ ಎಂದರು.