Advertisement

ಸಕಾರಾತ್ಮಕ ಮನೋಭಾವದಿಂದ ಧನಾತ್ಮಕ ಫ‌ಲಿತಾಂಶ

06:07 PM Nov 02, 2022 | Team Udayavani |

ಮಮನುಷ್ಯನ ಜೀವನದಲ್ಲಿ ಸುಖ- ದುಃಖ, ಲಾಭ-ನಷ್ಟ, ನಗು- ಅಳು ಎಲ್ಲವೂ ಸಹಜ. ಇವೆಲ್ಲವೂ ಒಳಗೊಂಡಿದ್ದರೆ ಅದು ಜೀವನ. ಯಾವನೇ ವ್ಯಕ್ತಿಯಾಗಲೀ ತನ್ನ ಬದುಕಿನುದ್ದಕ್ಕೂ ಕೇವಲ ಸುಖ ಅಥವಾ ಕೇವಲ ದುಃಖವನ್ನೇ ಕಂಡಿದ್ದರೆ ಆತನ ಜೀವನದ ನಿಜಾ ರ್ಥದಲ್ಲಿ ಬರಡು. ಇವೆರಡೂ ಸಮ್ಮಿಳಿತ  ‌ಗೊಂಡಿದ್ದರೆ ಆ ಬದುಕಿಗೂ ಒಂದು ಅರ್ಥ. ಹಾಗೆಂದು ಸಂಕಷ್ಟಗಳು ಎದುರಾದವೆಂದು ಕೊರಗುವುದಾಗಲೀ ಸುಖಮಯವಾಗಿದೆ ಎಂದು ಹಿಗ್ಗುವುದಾಗಲೀ ಸರಿಯಲ್ಲ. ಸಮಸ್ಯೆ, ಕಷ್ಟಗಳು ಎದುರಾದಾಗ ಅದನ್ನು ಎದುರಿಸುವ ಛಾತಿಯನ್ನು ನಾವು ಬೆಳೆಸಿಕೊಳ್ಳಬೇಕು. ಸಕಾರಾತ್ಮಕ ಮನೋ ಭಾ ವದಿಂದ ಮುನ್ನಡೆದಲ್ಲಿ ಯಶಸ್ಸನ್ನು ಕಾಣಬಹುದು.

Advertisement

ಒಮ್ಮೆ ಒಬ್ಬಳು ಗೃಹಿಣಿ ಎರಡು ಮಾವಿನ ಹಣ್ಣುಗಳನ್ನು ತಿಂದು ಅದರ ಗೊರಟುಗಳನ್ನು (ಓಟೆ) ತಿಪ್ಪೆ ಗುಂಡಿಗೆ ಬಿಸಾಡಿದಳು. ಆಗ ಒಂದನೆಯ ಗೊರಟು ಯೋಚನೆ ಮಾಡಿತು ನನ್ನ ಬೇರುಗಳು ಭೂಮಿಯೊಳಕ್ಕೆ ಹೋಗುತ್ತವೆ, ಅಂತರ್ಜಲವನ್ನು ಹೀರಿಕೊಳ್ಳುತ್ತವೆ, ತಿಪ್ಪೆಯು ಗೊಬ್ಬರ ಮತ್ತು ಪೌಷ್ಟಿಕಾಂಶ ಕೊಡು ತ್ತದೆ, ಇದರಿಂದ ಸಸಿಯಾಗಿ ಸಣ್ಣ ಗಿಡವಾಗುತ್ತೇನೆ, ಕಾಲಾಂತರದಲ್ಲಿ ದೊಡ್ಡ ಮರವಾಗಿ ಬೆಳೆಯುತ್ತೇನೆ. ಮಾವಿನ ಸೊಪ್ಪು, ರುಚಿಕರವಾದ ಮಾವಿನ ಹಣ್ಣನ್ನು ಕೊಡುತ್ತೇನೆ. ನೂರಾರು ವರ್ಷಗಳು ಬದು ಕುತ್ತೇನೆಂದು ಯೋಚಿಸಿ ಅದ ರಂತೆಯೇ ಬೆಳೆಯಿತು ಮತ್ತು ಎಲ್ಲರಿಗೂ ಬೇಕಾದ ಮರ ಮತ್ತು ಹಣ್ಣಾಗಿ ಪರೋಪ ಕಾರಿಯಾಗಿ ಬಾಳಿ ಬದುಕಿತು.

ಅದರ ಪಕ್ಕದಲ್ಲೇ ಇದ್ದ ಎರಡನೆಯ ಗೊರಟು ನನ್ನ ಬೇರುಗಳಿಗೆ ಅಂತರ್ಜಲ ಸಿಗದಿದ್ದರೆ? ಪೌಷ್ಟಿಕಾಂಶ ಸಿಗದಿದ್ದರೆ? ಗಿಡವಾದಾಗ ಹಸು, ಕುರಿ ಮೇಕೆಗಳು ಬಂದು ತಿಂದರೆ, ಮರವಾಗಿ ಹಣ್ಣು ಬಿಡುವಾಗ, ಜನ ಹಣ್ಣು ಉದುರಿಸಲು ನನಗೆ ಕಲ್ಲು ಹೊಡೆದರೆ ನನಗೆ ನೋವಾಗುವುದಿಲ್ಲವೇ? ಎಂದೆಲ್ಲ ಯೋಚಿಸಿ ಬೇರನ್ನು ಕೆಳಗೆ ಬಿಡದೆ, ಮೇಲೆ ಸಸಿ ಯಾಗಿ ಬೆಳೆಯದೆ ಹಾಗೆಯೇ ಉಳಿದು ಬಿಟ್ಟಿತು. ಕೆಲವೇ ದಿನಗಳಲ್ಲಿ ತಿಪ್ಪೆಯಲ್ಲಿನ ಗೊಬ್ಬರದೊಂದಿಗೆ ಗೊರಟೂ ಗೊಬ್ಬರವಾಗಿ ಬೆರೆತು ಹಾಳಾಗಿ ಹೋಯಿತು.

ಮೊದಲನೆಯ ಗೊರಟಿನ ಮನೋಭಾವ ಸಕಾರಾತ್ಮಕವಾಗಿತ್ತು. ಎರಡನೆಯ ಗೊರಟಿನ ಮನೋಭಾವ ನಕಾರಾತ್ಮಕವಾಗಿತ್ತು. ಸಕಾರಾತ್ಮಕವಾಗಿ ಯೋಚಿಸಿದ ಗೊರಟು ಮೊಳಕೆಯೊಡೆದು, ಗಿಡವಾಗಿ, ಮರ ವಾಗಿ ಬೆಳೆದು ದಶಕಗಳ ಕಾಲ ಬದುಕಿತು. ಆದರೆ ಕೇವಲ ನಕಾರಾತ್ಮಕವಾಗಿಯೇ ಯೋಚಿಸುತ್ತಿದ್ದ ಗೊರಟು ಒಂದೆ ರಡು ವಾರಗಳಲ್ಲೇ ತನ್ನ ಅಸ್ತಿ ತ್ವವೇ ಇಲ್ಲದಂತೆ ಮರೆಯಾಗಿ ಹೋಯಿತು. ನಮ್ಮ ಜೀವನದಲ್ಲೂ ಸಹ ನಮ್ಮ ಬಳಿ ಬುದ್ಧಿವಂತಿಕೆ, ಜ್ಞಾನ, ಪ್ರತಿಭೆ, ಅವಕಾಶಗಳು ಎಲ್ಲವೂ ಇರಬಹುದು ಅಥವಾ ಇಲ್ಲದಿ ರಬಹುದು. ಆದರೆ ಸಕಾ ರಾತ್ಮಕ ಮನೋ ಭಾವವೇ ಇಲ್ಲದಿದ್ದರೆ, ಏನಿದ್ದರೂ ಅವೆಲ್ಲವೂ ವ್ಯರ್ಥವಾಗುತ್ತವೆ.

ಆಕಾಶದೆತ್ತರಕ್ಕೆ ಹಾರುವ ಮನೋಭಾವವೇ ಗಾಳಿಪಟಕ್ಕೆ ಇಲ್ಲದಿದ್ದರೆ ಒಳ್ಳೆಯ ಹವಾಮಾನ ವಿದ್ದರೂ ಏನೂ ಫ‌ಲ ವಿಲ್ಲ ಮತ್ತು ಅದು ಮೇಲೇರಲು ಸಾಧ್ಯವಿಲ್ಲ. ಅವಕಾಶ ಗಳು ಎಲ್ಲರ ಜೀವನದಲ್ಲೂ ಬಂದೇ ಬರುತ್ತವೆ. ಆದರೆ ಸಕಾರಾತ್ಮಕವಾಗಿ ಬದುಕುವವರು ಅವಕಾಶ ಗಳನ್ನು ಹುಡುಕುತ್ತಾರೆ; ಹುಡುಕಿಗಳಿಸಿ ಕೊಳ್ಳುತ್ತಾರೆ. ನಕಾರಾತ್ಮಕ ವಾಗಿ ಯೋಚಿಸುವವರು ಸದಾ ಪ್ರತಿಯೊಂದನ್ನೂ ಸಂಶಯದಿಂದ ನೋಡುತ್ತಾರೆ. ಸಮಸ್ಯೆಗಳು ಪ್ರತಿಯೊಬ್ಬರಿಗೂ ಇದ್ದಿದ್ದೇ. ಬದುಕಲ್ಲಿ ಸೋಲುಗಳು ಎದುರಾಗುತ್ತವೆ ಆದರೆ ಸಕಾರಾತ್ಮಕವಾಗಿ ಯೋಚಿಸುವವರು ಬಿದ್ದಲ್ಲೇ ಮತ್ತೆ ಎದ್ದು ಏನೂ ಆಗಿಲ್ಲವೆಂಬಂತೆ ಮುಂದುವರಿಯುತ್ತಾರೆ.

Advertisement

“ಹವ್ಯಾಸವನ್ನು ಬದಲಿಸಿಕೊಂಡರೆ ಹಣೆಬರಹ ಬದಲಾದೀತು. ನೋಡುವ ದೃಷ್ಟಿಯನ್ನು ಬದಲಿಸಿಕೊಂಡರೆ ಕಾಣುವ ದೃಶ್ಯವೇ ಬದಲಾದೀತು, ದೋಣಿಯನ್ನೇ ಬದಲಿಸಬೇಕಾಗಿಲ್ಲ ಬದಲಿಗೆ ಸಾಗುವ ದಿಕ್ಕನ್ನು ಬದಲಿಸಿಕೊಂಡರೆ ಸಾಕು ದಡ ವನ್ನು ತಲುಪಬಹುದು’-ಇದು ಕವಿ ಅಸಾ ದುಲ್ಲಾ ಬೇಗ್‌ ಅವರ ಕವನವೊಂದರ ಸಾಲುಗಳು. ಎಷ್ಟೊಂದು ಅರ್ಥಪೂರ್ಣ ಮತ್ತು ನೈಜತೆಗೆ ಸನಿಹವಾಗಿರುವ ಈ ಸಾಲುಗಳು ನಮ್ಮನ್ನು ಕ್ಷಣಕಾಲ ಚಿಂತನೆಯ ಒರೆಗೆ ಹಚ್ಚದೇ ಇರಲಾದರು. ನಾವೂ ನಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕವಾಗಿ ಯೋಚಿಸಿ ಕೆಲಸ ಮಾಡಿ ದರೆ ನಮ್ಮ ಫ‌ಲಿತಾಂಶವೂ ಧನಾತ್ಮಕವಾಗಿ ಬದಲಾಗುತ್ತದೆ. ನಮ್ಮ ಹವ್ಯಾಸವನ್ನು ಬದ ಲಿಸಿ ಕೊಂಡರೆ ನಮ್ಮ ಹಣೆ ಬರಹವೇ ಬದಲಾಗಬಹುದು.

-ಸಂತೋಷ್‌ ರಾವ್‌ ಪೆರ್ಮುಡ

Advertisement

Udayavani is now on Telegram. Click here to join our channel and stay updated with the latest news.

Next