Advertisement

ರೇಷ್ಮೆ ಸೀರೆಯಲ್ಲಿ ಅರಳಿದ ಪುನೀತ್‌ ಭಾವಚಿತ್ರ; ಅಭಿಮಾನಿಯ ಉಡುಗೊರೆ

05:49 PM Oct 29, 2022 | Team Udayavani |

ಬೆಂಗಳೂರು: ಪುನೀತ್‌ ರಾಜಕುಮಾರ್‌ ಸ್ಮರಣಾರ್ಥ ಅಭಿಮಾನಿಗಳು ವಿಶೇಷ ರೀತಿಯಲ್ಲಿ ತಮ್ಮ ನೆಚ್ಚಿನ ನಟನಿಗೆ ಗೌರವ ಸಮರ್ಪಿಸಿದ್ದಾರೆ. ಚಿಕ್ಕಬಳ್ಳಾಪುರದ ಸೀರೆ ತಯಾರಕರೊಬ್ಬರು ಪುನೀತ್‌ ರಾಜಕುಮಾರ್‌ ಭಾವಚಿತ್ರವನ್ನು ರೇಷ್ಮೆ ಸೀರೆಯಲ್ಲಿ ಅರಳಿಸಿ ಅಭಿಮಾನ ಮೆರೆದಿದ್ದಾರೆ.

Advertisement

ಇದನ್ನೂ ಓದಿ:7 ತಿಂಗಳಿಂದ ಕೋಮಾದಲ್ಲಿದ್ದೇ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ!

ಕಂಠೀರವ ಸ್ಟುಡಿಯೋದಲ್ಲಿ ಅಶ್ವಿ‌ನಿ ಪುನೀತ್‌ ರಾಜಕುಮಾರ್‌ ಅವರಿಗೆ ಉಡುಗೊರೆಯಾಗಿ ನೀಡಲು ಈ ವಿಶೇಷ ಸೀರೆಯನ್ನು ತರಲಾಗಿತ್ತು. ಆದರೆ ಕಂಠೀರವ ಸ್ಟುಡಿಯೋದಲ್ಲಿ ಜನ ಜಂಗುಳಿ ಹೆಚ್ಚಾದ ಕಾರಣ, ಕೊನೆ ಕ್ಷಣದಲ್ಲಿ ಅಶ್ವಿ‌ನಿ ಅವರ ಭೇಟಿ ಸಾಧ್ಯವಾಗಲಿಲ್ಲ.

ಹಾಗಾಗಿ, ಕೊನೆಗೆ ಅಭಿಮಾನಿಗಳು ಸದಾಶಿವನಗರದಲ್ಲಿರುವ ನಿವಾಸಕ್ಕೆ ತೆರಳಿ ರಾಘವೇಂದ್ರ ರಾಜಕುಮಾರ್‌ ಅವರಿಗೆ ಈ ಸೀರೆಯನ್ನು ಸಮರ್ಪಿಸಿದರು. ಅಭಿಮಾನಿಗಳು ತಂದಿದ್ದ ರೇಷ್ಮೆ ಸೀರೆಯನ್ನು ಸ್ವೀಕರಿಸಿದ ರಾಘವೇಂದ್ರ ರಾಜಕುಮಾರ್‌, ವಿಭಿನ್ನ ರೀತಿಯಲ್ಲಿ ಅಭಿಮಾನದ ಮೆರೆದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next