ಹೈದರಾಬಾದ್: ದೇಶದಲ್ಲಿ ಪಾಕ್ ಬೆಂಬಲಿತ ದುಷ್ಕೃತ್ಯಗಳನ್ನು ನಡೆಸುವ ಹಾಗೂ ಬಾಂಬ್ ದಾಳಿ ಎಸಗುವ ಸಂಚನ್ನು ಬಯಲಿಗೆ ಎಳೆಯಲಾಗಿದೆ. ಜತೆಗೆ ದೇಶದಲ್ಲಿ ಒಂಟಿ ತೋಳ ದಾಳಿ (ಲೋನ್ ವೂಲ್ಫ್ ಅಟ್ಯಾಕ್) ನಡೆಸುವ ಹುನ್ನಾರ ಬಹಿರಂಗವಾಗಿದೆ.
ಕರ್ನಾಟಕದ ಶಿವಮೊಗ್ಗ, ಉತ್ತರ ಪ್ರದೇಶದ ಗೋರಖ್‌ಪುರ, ಹೈದರಾಬಾದ್‌ನಲ್ಲಿ ಒಂಟಿ ತೋಳ ದಾಳಿ ನಡೆಸಲು ಯೋಜಿಸಲಾಗಿದೆ ಎಂಬ ಆಘಾತಕಾರಿ ಅಂಶ ಬಹಿರಂಗವಾಗಿದೆ.
ಹೈದರಾಬಾದ್‌ನಲ್ಲಿ ಮೊಹಮ್ಮದ್ ಅಬ್ದುಲ್ ಝಹೇದ್, ಮೂಸಾರಾಮ್ ಭಾಗ್, ಮಾಸ್ ಹಸನ್ ಫಾರೂಕ್ ಎಂಬವ ರನ್ನು ಬಂಧಿಸ ಲಾಗಿದ್ದು, ಅವರಿಗೆ ಲಷ್ಕರ್-ಎ- ತಯ್ಯಬಾ, ಪಾಕ್ ಐಎಸ್‌ಐನಿಂದ ನಿರ್ದೇಶನ ಹಾಗೂ ಧನಸಹಾಯ ಲಭ್ಯವಾಗುತ್ತಿತ್ತು ಎಂದು ಎನ್‌ಐಎ ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಬಿಜೆಪಿ ಮತ್ತು ಆರೆಸ್ಸೆಸ್ ಸಭೆ, ಕಾರ್ಯ ಕ್ರಮಗಳನ್ನು ಗುರಿಯಾಗಿಸಿಕೊಂಡು ಗ್ರೆನೇಡ್ ದಾಳಿಗೆ ಸಂಚು ರೂಪಿಸಲಾಗಿದೆ ಎಂಬುದು ಎನ್‌ಐಎ ನಡೆಸಿದ ಪ್ರಾಥಮಿಕ ಹಂತದ ತನಿಖೆಯಿಂದ ದೃಢಪಟ್ಟಿದೆ.