Advertisement

ಕುಮಟಾ: ಹೆಂಡತಿ, ಮಗನನ್ನು ಕೊಂದು ವ್ಯಕ್ತಿ ಆತ್ಮಹತ್ಯೆ

05:50 PM Jul 08, 2022 | Team Udayavani |

ಕುಮಟಾ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊರ್ವ ಜಗಳವಾಡಿ,  ಹೆಂಡತಿ ಹಾಗೂ ಮಗನನ್ನು ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸಂತೆಗುಳಿ ಗಾ.ಪಂ ವ್ಯಾಪ್ತಿಯ ಬಂಗಣೆಯಲ್ಲಿ ನಡೆದಿದೆ.

Advertisement

ತಾಕಿ ಮರಾಠಿ (35), ಲಕ್ಷ್ಮಣ ಮರಾಠಿ (12) ಕೊಲೆಯಾದವರಾಗಿದ್ದು, ರಾಮ ಮರಾಠಿ (40) ಹೆಂಡತಿ ಮಗನನ್ನು ಕೊಲೆ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ.

ವೃತ್ತಿಯಲ್ಲಿ ಕೃಷಿಕನಾಗಿರುವ ರಾಮ ಮರಾಠಿ ಗುರುವಾರ ಕುಡಿದ ಮತ್ತಿನಲ್ಲಿ ಮನೆಗೆ ಬಂದು ಮಲಗಿರುವ ಹೆಂಡತಿಯನ್ನು ಕತ್ತಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ. ಈ ವೇಳೆ ಶಬ್ದ ಕೇಳಿ ಹೊರ ಬಂದ ಮಕ್ಕಳನ್ನು ಕಡಿಯಲು ಅಟ್ಟಿಸಿಕೊಂಡು ಹೋಗಿದ್ದಾನೆ. ಈ ವೇಳೆ ಓರ್ವ ಮಗ ಕೈಗೆ ಸಿಕ್ಕಿದ್ದು, ಆತನನ್ನು ಕತ್ತಿಯಿಂದ ಕಡಿದಿದ್ದಾನೆ. ಇನ್ನೋರ್ವ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ನಂತರ ಮನೆಗೆ ಬಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಉಡುಪಿ: ಮುಂದಿನ 5 ದಿನಗಳ ಕಾಲ ಭಾರಿ ಮಳೆ ಸಾಧ್ಯತೆ

ಘಟನೆ ಕುಮಟಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next