ಥಾಣೆ : ಎಲ್ಲಾ ವಿಷಯಗಳಲ್ಲಿ ತಲಾ 35 ಅಂಕ ಪಡೆದು ವಿದ್ಯಾರ್ಥಿಯೊಬ್ಬ ಪಾಸಾಗುವ ಮೂಲಕ ಹೆತ್ತವರ ಸಂಭ್ರಮಕ್ಕೆ ಕಾರಣವಾಗಿ ಸುದ್ದಿಯಾಗಿದ್ದಾನೆ.
ಮಹಾರಾಷ್ಟ್ರದ ಮಾರಾಠಿ ಮಾಧ್ಯಮ ಎಸ್ ಎಸ್ ಸಿ ವಿದ್ಯಾರ್ಥಿ ವಿಶಾಲ್ ಕಾರಾಡ್ ಈಗ ಅತೀ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದವರಿಗಿಂತ ಸುದ್ದಿಯಾಗಿದ್ದು, ಸಾಮಾಜಿಕ ತಾಣಗಳಲ್ಲೂ ಸುದ್ದಿಯಾಗಿದ್ದಾನೆ.
10 ನೇ ತರಗತಿಯಲ್ಲಿ ಕೊನೆಗೂ ಉತ್ತೀರ್ಣನಾದ ಬಗ್ಗೆ ಉತಲ್‌ಸರ್‌ನಲ್ಲಿರುವ ಅಂಬೇಡ್ಕರ್ ನಗರ ಕೊಳೆಗೇರಿ ನಿವಾಸಿ ಆಟೋ ಚಾಲಕರಾಗಿರುವ ತಂದೆ ಅಶೋಕ್ ಮತ್ತು ತಾಯಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
”ನನಗೆ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಖಚಿತತೆಯೇ ಇರಲಿಲ್ಲ. ಆ ಬಗ್ಗೆ ಚಿಂತೆ ಇತ್ತು. ಕೊನೆಗೂ ಉತ್ತೀರ್ಣನಾಗಿದ್ದು, ನಾನು ಮುಂದೆ ಶಿಕ್ಷಣ ಮುಂದುವರಿಸುತ್ತೇನೆ” ಎಂದು ವಿಶಾಲ್ ಹೇಳಿದ್ದಾನೆ.