ಬೆಂಗಳೂರು: ಬಸ್‌ನಲ್ಲಿ ಲ್ಯಾಪ್‌ಟಾಪ್, ಮೊಬೈಲ್ ಗಳಿದ್ದ ವಸ್ತುಗಳಿದ್ದ ಬ್ಯಾಗ್ ಬಿಟ್ಟು ಪರಾರಿಯಾಗಿದ್ದ ಅನುಮಾನಾಸ್ಪದ ವ್ಯಕ್ತಿಯ ವಸ್ತುಗಳನ್ನು ಕೆಎಸ್‌ಆರ್ ಟಿಸಿ ನಿರ್ವಾಹಕ, ಪೊಲೀಸರಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಬೆಂಗಳೂರು- ವೇಲೂರು ಮಾರ್ಗದ ಬಸ್‌ನಲ್ಲಿ ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ. ನಿರ್ವಾಹಕ ಬಿ.ಸಿ. ಮಂಜುನಾಥ್, ಬಸ್‌ನಲ್ಲಿ ಅನುಮಾನಾಸ್ಪದ ವ್ಯಕ್ತಿ ಬಿಟ್ಟುಹೋದ ಏಳು ವಿವಿಧ ಕಂಪನಿಗಳ ಲ್ಯಾಪ್‌ಟಾಪ್ ಮತ್ತು ಏಳು ಮೊಬೈಲ್‌ಗಳನ್ನು ಕೆಎಸ್‌ಆರ್‌ಟಿಸಿ ಕೇಂದ್ರೀಯ ವಿಭಾಗೀಯ ನಿಯಂತ್ರಣಾಧಿಕಾರಿ ಸಮ್ಮುಖದಲ್ಲಿ ಬಸವನಗುಡಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಬೆಂಗಳೂರಿನಿಂದ ವೇಲೂರು ಕಡೆಗೆ ಹೊರಟ ಬಸ್ (ಕೆಎ- 57 ಎಫ್- 985)ನಲ್ಲಿ ಲಾಲ್‌ಬಾಗ್ ಬಳಿ ಹತ್ತಿದ ವ್ಯಕ್ತಿಯ ನಡೆ ಅನುಮಾನಾಸ್ಪದವಾಗಿ ಕಂಡು ಬಂದಿತು. ಈ ವೇಳೆ ನಿರ್ವಾಹಕ ಮಂಜುನಾಥ್, ಪ್ರಯಾಣಿಕನ ಬ್ಯಾಗ್ ತಪಾಸಣೆಗೆ ಮುಂದಾಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ವ್ಯಕ್ತಿ, ಮುಂದೆ ಮಡಿವಾಳದ ಬಳಿ ಪ್ರಯಾಣಿಕರ ಮಧ್ಯೆ ನುಸುಳಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ:ಗರ್ಭಪಾತ ತೀರ್ಪು ಸೋರಿಕೆ: ಅಮೆರಿಕದಲ್ಲಿ ಭಾರೀ ಸಂಚಲನ
ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಗ ತಕ್ಷಣ ಈ ಬಗ್ಗೆ ನಿರ್ವಾಹಕ, ಘಟಕ ವ್ಯವಸ್ಥಾಪಕರ (ಡಿಪೋ- 6) ಗಮನಕ್ಕೆ ತಂದಿದ್ದಾರೆ. ನಂತರ ಅವರು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ದೂರವಾಣಿ ಮೂಲಕ ಸುದ್ದಿ ಮುಟ್ಟಿಸಿ, ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಠಾಣೆಯ ಇನ್‌ಸ್ಪೆಕ್ಟರ್ ವಿಭಾಗೀಯ ಕಚೇರಿಗೆ ಆಗಮಿಸಿದ್ದು, ನಿರ್ವಾಹಕರ ಸಮ್ಮುಖದಲ್ಲಿ ಬ್ಯಾಗ್ ಹಸ್ತಾಂತರಿಸಲಾಯಿತು.
ಅಭಿನಂದನಾ ಪತ್ರ: ನಿರ್ವಾಹಕ ಮಂಜುನಾಥ್ ಅವರ ಸಮಯಪ್ರಜ್ಞೆಗೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನಾ ಪತ್ರ ಪ್ರದಾನ ಮಾಡಿದ್ದಾರೆ. ಜತೆಗೆ ಮಂಜುನಾಥ್ ಸೇವೆ ಇತರರಿಗೆ ಮಾದರಿಯಾಗಿದ್ದು, ಇಂತಹ ಪ್ರಾಮಾಣಿಕ ಸಿಬ್ಬಂದಿಯಿಂದಲೇ ಸಂಸ್ಥೆಯು ವಿಶ್ವಾಸಾರ್ಹ ಸೇವೆಗೆ ಪಾತ್ರವಾಗಿದೆ ಎಂದು ಶ್ಲಾಸಿದರು.