ಮಣಿಪಾಲ: ಕಾರುಗಳ ನಡುವೆ ಢಿಕ್ಕಿ ಸಂಭವಿಸಿ ಪ್ರಯಾಣಿಕರೊಬ್ಬರು ಗಾಯಗೊಂಡ ಘಟನೆ ನಡೆದಿದೆ.
ಬೆಂಗಳೂರು ಮೂಲದ ಆನಂದ ಕುಮಾರ್ ಅವರು ಮಾ. 12ರಂದು ತಮ್ಮ ಕಾರಿನಲ್ಲಿ ಮಗ ಅಶೋಕ್ ಕುಮಾರ್ ಹಾಗೂ ಹೆಂಡತಿ ಶಿವರಾಧಾ ಅವರೊಂದಿಗೆ ಉಡುಪಿ – ಶಿವಮೊಗ್ಗ ರಾ.ಹೆ. 169 (ಎ) ರಸ್ತೆಯ ಮೂಲಕ ಬೆಂಗಳೂರಿಗೆ ಹೋಗುತ್ತಿರುವಾಗ ಸಂಜೆ 4.30ಕ್ಕೆ ಪರ್ಕಳದ ಸಿಂಡಿಕೇಟ್ ಬ್ಯಾಂಕ್ ಬಳಿ ತಲುಪುವಾಗ ಶಿವಮೊಗ್ಗ ಕಡೆಯಿಂದ ಉಡುಪಿ ಕಡೆಗೆ ಅತೀ ವೇಗದಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಶಿವರಾಧಾ ಅವರ ತಲೆಯು ಕಾರಿನ ಸೀಟಿಗೆ ಹೊಡೆದು ತಲೆಗೆ ಪೆಟ್ಟಾಗಿದೆ. ಅಪಘಾತದಲ್ಲಿ ಕಾರು ಜಖಂಗೊಂಡಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.