ನವದೆಹಲಿ: ಕೊರೊನಾ ಹೊಸ ರೂಪಾಂತರಿ ಎಕ್ಸ್‌ಬಿಬಿ.1.16 ಸೋಂಕಿನ 76 ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದ್ದು, ಭಾರತದಲ್ಲಿ ಕೊರೊನಾ ಪ್ರಕರಣಗಳ ಏರಿಕೆಗೆ ಈ ರೂಪಾಂತರಿಯೇ ಕಾರಣವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯ ಹೇಳಿದ್ದಾರೆ.
ಇಂಡಿಯನ್ ಸಾರ್ಸ್-ಕೋವಿಡ್-20 ಜಿನೋಮಿಕ್ಸ್ ಕನ್ಸಾರ್ಟಿಯಮ್ ದತ್ತಾಂಶಗಳ ಪ್ರಕಾರ, ಕರ್ನಾಟಕದಲ್ಲಿ 30, ಮಹಾರಾಷ್ಟ್ರ 29, ಪುದುಚೇರಿ 7, ದೆಹಲಿ 5, ತೆಲಂಗಾಣ 2, ಗುಜರಾತ್, ಹಿಮಾಚಲ ಪ್ರದೇಶ ಹಾಗೂ ಒಡಿಶಾದಲ್ಲಿ ತಲಾ 1ಎಕ್ಸ್‌ಬಿಬಿ.1.16 ಪ್ರಕರಣಗಳು ವರದಿಯಾಗಿವೆ.
ಜನವರಿಯಲ್ಲಿ ಕೇವಲ ಇಬ್ಬರಲ್ಲಿ ಪತ್ತೆಯಾಗಿದ್ದ ಸೋಂಕು, ಫೆಬ್ರವರಿ ವೇಳೆಗೆ 59 ಮಂದಿಗೆ ಹಾಗೂ ಮಾರ್ಚ್ ಆರಂಭದಿಂದ 15 ಮಂದಿಯಲ್ಲಿ ಪತ್ತೆಯಾಗಿದೆ. ಕೊರೊನಾ ಪ್ರಕರಣಗಳ ದಿಢೀರ್ ಹೆಚ್ಚಳಕ್ಕೂ ಇದೇ ಕಾರಣ ಎನ್ನಲಾಗುತ್ತಿದೆ.