Advertisement

ಪೊಲೀಸ್‌ ಬೀಟ್‌ಗೆ ಹೊಸ ವ್ಯವಸ್ಥೆ ಜಾರಿ

12:39 PM May 02, 2017 | |

ಮೈಸೂರು: ಪೊಲೀಸರು ಜನಸ್ನೇಹಿಯಾಗಿ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸಲು ಅನುಕೂಲ ಕಲ್ಪಿಸುವ ಸಲುವಾಗಿ ಪರಿಣಾಮಕಾರಿಯಾಗಿ ಪೊಲೀಸ್‌ ಬೀಟ್‌ ವ್ಯವಸ್ಥೆ ಜಾರಿಗೊಳಿಸಲು ರಾಜ್ಯ ಸರ್ಕಾರ ಆದೇಶಿಸಿರುವ ಹಿನ್ನೆಲೆ ಪೊಲೀಸ್‌ ಬೀಟ್‌ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ.

Advertisement

ಹೊಸ ಬೀಟ್‌ವ್ಯವಸ್ಥೆಯ ಅನ್ವಯ ಪೊಲೀಸ್‌ ಠಾಣೆಯಲ್ಲಿರುವ ಎಲ್ಲಾ ಪೇದೆ ಹಾಗೂ ಮುಖ್ಯಪೇದೆಗಳಿಗೆ ಠಾಣಾ ವ್ಯಾಪ್ತಿಯ ಗ್ರಾಮಗಳನ್ನು ವಿಂಗಡಿಸ ಲಾಗಿದ್ದು, ಅದರಂತೆ ಪ್ರತಿ ಪ್ರದೇಶಕ್ಕೊಬ್ಬ ಪೊಲೀಸ್‌ ಎಂಬಂತೆ ಬೀಟ್‌ ವ್ಯವಸ್ಥೆಗೆ ಪೇದೆ ನೇಮಿಸಲಾಗಿದೆ. ಅಲ್ಲದೆ ಬೀಟ್‌ಗೆ ನಿಯೋಜನೆಗೊಂಡಿರುವ ಪೇದೆ ಪ್ರತಿ ವರ್ಷಕ್ಕೊಮ್ಮೆ ಬದಲಾವಣೆ ಮಾಡ ಲಾಗುವುದು. ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವ ಠಾಣಾ ಬರಹಗಾರರು, ತನಿಖಾ ಸಹಾಯಕರು, ಕೋರ್ಟ್‌ ಕೆಲಸ, ಗುಪ್ತ ಮಾಹಿತಿ ಸಿಬ್ಬಂದಿಯನ್ನು ಬೀಟ್‌ ಕೆಲಸಕ್ಕೆ ನೇಮಿಸಲಾಗಿದೆ.

ಇದಲ್ಲದೆ ಜನಸ್ನೇಹಿ ಪೊಲೀಸ್‌ ಶೀರ್ಷಿಕೆಯಲ್ಲಿ ಬೀಟ್‌ ಕೆಲಸಕ್ಕಾಗಿ ನೇಮಕಗೊಂಡ ಪೊಲೀಸ್‌ ಸಿಬ್ಬಂದಿ ಬೀಟ್‌ ಕೆಲಸಕ್ಕೆ ತೆರಳುವ ಗ್ರಾಮಗಳಲ್ಲಿ ಅರ್ಜಿ ವಿಚಾರಣೆ, ವಾರೆಂಟ್‌, ಸಮನ್ಸ್‌ ಜಾರಿ, ಅಕ್ರಮ ಚಟುವಟಿಕೆಗಳ ಬಗ್ಗೆ, ಗುಪ್ತ ಮಾಹಿತಿ ಸಂಗ್ರಹಣೆ, ಗನ್‌ಲೈಸೆನ್ಸ್‌, ಅಪರಾಧ ಪತ್ತೆ ಬಗ್ಗೆ ಮಾಹಿತಿ ಸಂಗ್ರಹಣೆ ಮತ್ತು ದಲಿತ ಬೀದಿಗಳಿಗೆ ಭೇಟಿ ನೀಡಿ ದಲಿತ ಸಭೆ ನಡೆಸುವುದು ಮತ್ತು ಗ್ರಾಮದ ಕುಂದುಕೊರತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕಿದೆ.

ಇನ್ನೂ ಬೀಟ್‌ ಕೆಲಸಕ್ಕೆ ಹೋಗುವ ಸಿಬ್ಬಂದಿ ಜನರು ಹಾಗೂ ಪೊಲೀಸರ ನಡುವೆ ಸೇತುವೆಯಾಗಿಯೂ ಕೆಲಸ ಮಾಡಲಿದ್ದು, ಇದರಿಂದ ಗ್ರಾಮಗಳಲ್ಲಿನ ಸಮಸ್ಯೆ, ಇನ್ನಿತರ ಮಾಹಿತಿಗಳು ಶೀಘ್ರವೇ ಇತ್ಯರ್ಥವಾಗುವ ಜತೆಗೆ ಜನರಿಗೆ ಪೊಲೀಸರ ಬಗ್ಗೆ ವಿಶ್ವಾಸ ಮೂಡಲಿದೆ. ಬೀಟ್‌ ಸಿಬ್ಬಂದಿಯನ್ನು ತಿಂಗಳಿಗೆ ಕನಿಷ್ಠ ಎರಡು ಬಾರಿ ಬೀಟ್‌ ನಿರ್ವಹಣೆ ಮಾಡಲಾಗುವುದು. ಠಾಣೆಯ ಎಎಸ್‌ಐ ಬೀಟ್‌ ಸಿಬ್ಬಂದಿ ಜತೆಗೆ ಗ್ರಾಮದ ನಾಗರಿಕ ಸಮಿತಿ ಸದಸ್ಯರನ್ನು ಆಯ್ಕೆ ಮಾಡುವ ಜತೆಗೆ ತಿಂಗಳಿಗೊಮ್ಮೆ ಸಭೆ ನಡೆಸುವ ಮೂಲಕ ಕುಂದು ಕೊರತೆ ನಿವಾರಿಸಲಾಗುವುದು.

ವಿಶೇಷ ಸಂದರ್ಭಗಳಲ್ಲಿ ರಾತ್ರಿ ಬೀಟ್‌ ವೇಳೆ, ಕಾನೂನು ಸುವ್ಯವಸ್ಥೆ ಕಾಪಾಡುವಾಗ, ನೈಸರ್ಗಿಕ ದುರಂತಗಳ ಸಂದರ್ಭದಲ್ಲಿ ಎರಡಕ್ಕಿಂತ ಹೆಚ್ಚಿನ ಸಿಬ್ಬಂದಿ ಒಗ್ಗೂಡಿಸಿ ಬೀಟ್‌ ನಿರ್ವಹಣೆ ಮಾಡಲಾಗುವುದು. ಬೀಟ್‌ ಸಿಬ್ಬಂದಿ ಮತ್ತು ನಾಗರಿಕ ಸಮಿತಿ ಸದಸ್ಯರುಗಳು ಸೇರಿ ಒಂದು ತಂಡವಾಗಿ ಕೆಲಸ ಮಾಡಬೇಕಿದೆ. ಈ ತಂಡದ ಸದಸ್ಯರು ಪ್ರತ್ಯೇಕ ಮಾಸಿಕ ಸಭೆ ಆಯೋಜಿಸುವಂತೆ ತಿಳಿಸಲಾಗಿದೆ.

Advertisement

ಈ ಸಭೆಗೆ ಎಎಸ್‌ಐ, ಠಾಣಾಧಿಕಾರಿ ಹಾಜರಾಗಿ ಸಭೆಯ ಮಾಹಿತಿ ಸಂಗ್ರಹಿಸಲಾಗುವುದು. ಹೊಸ ಸುಧಾರಿತ ಬೀಟ್‌ ವ್ಯವಸ್ಥೆಯ ನಿರ್ವಹಣೆಗಾಗಿ ಎಲ್ಲಾ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬುನಾದಿ ತರಬೇತಿಯ ಸಂದರ್ಭದಲ್ಲಿ ಮತ್ತು ಕರ್ತವ್ಯ ನಿರ್ವಹಣೆಯ ವೇಳೆ ಅರಿವು ಮೂಡಿಸಲಾಗುವುದು. ಮುಖ್ಯವಾಗಿ ಪ್ರತಿ ಠಾಣೆಗಳಲ್ಲಿ ಬೀಟ್‌ ನಕ್ಷೆ, ಬೀಟ್‌ಗೆ ಸಂಬಂಧಿಸಿದ ಗ್ರಾಮಗಳು, ಬೀಟ್‌ಗೆ ನೇಮಿಸಲ್ಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ಅನುಕೂಲಕ್ಕೆ ಇಲಾಖೆಯಿಂದ ನೀಡಲಾದ ದೂರವಾಣಿ ಸಂಖ್ಯೆಯನ್ನು ಅವರ ಹೆಸರು, ಭಾವಚಿತ್ರ ಸಹಿತ ಫ‌ಲಕಗಳನ್ನು ಎಲ್ಲಾ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next