Advertisement

ದೇಶದ ಮಹಿಳೆಯರಿಗೆ ಭರ್ಜರಿ ಕೊಡುಗೆ ನೀಡಲು ಕೇಂದ್ರ ಸಜ್ಜು

09:38 AM May 08, 2017 | Team Udayavani |

ಹೊಸದಿಲ್ಲಿ: ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಏಕಾಂಗಿ ಮಹಿಳೆಯರಿಗೆ ಆದಾಯ ತೆರಿಗೆಯಲ್ಲಿ ರಿಯಾಯಿತಿ, ಆರೋಗ್ಯದ ಉಚಿತ ತಪಾಸಣೆಗೆ ಆಧಾರ್‌ ಸಂಪರ್ಕಿತ ಆರೋಗ್ಯ ಕಾರ್ಡ್‌ಗಳ ವಿತರಣೆ, ಗರ್ಭಿಣಿಯರಿಗೆ ನಗದುರಹಿತ ವೈದ್ಯಕೀಯ ಸೇವೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸುವ ಚಿಂತನೆ ನಡೆದಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ನೇತೃತ್ವದ ಸಚಿವರ ಸಮಿತಿಯು ಮಹಿಳೆಯರಿಗೆಂದೇ ಹೊಸ ರಾಷ್ಟ್ರೀಯ ನೀತಿಯನ್ನು ರಚಿಸಿದ್ದು, ಸಂಪುಟದ ಒಪ್ಪಿಗೆಯಷ್ಟೇ ಬಾಕಿಯಿದೆ ಎಂದು ಮೂಲಗಳು ತಿಳಿಸಿವೆ.

Advertisement

ಋತುಸ್ರಾವದ ನೈರ್ಮಲ್ಯ ಕಾಪಾಡುವ ಎಲ್ಲ ಉತ್ಪನ್ನಗಳಿಗೂ ತೆರಿಗೆ ವಿನಾಯ್ತಿ, ಶೌಚಾಧಿಲಯಗಳ ಸ್ಥಾಪನೆ, ಲಿಂಗಾಧಾರಿತ ದೌರ್ಜನ್ಯಗಳ ಸಂತ್ರಸ್ತರಿಗೆ ಉಚಿತ ವೈದ್ಯಕೀಯ, ಕಾನೂನು ನೆರವು, ಆಶ್ರಯ ಮುಂತಾದ ಸೌಲಭ್ಯಗಳೂ ಈ ನೀತಿಯಲ್ಲಿ ಒಳಗೊಂಡಿವೆ.

ಪ್ರಸ್ತಾಪದಲ್ಲೇನಿದೆ?
– ಆಧಾರ್‌ ಸಂಪರ್ಕಿತ ಹೆಲ್ತ್‌ ಕಾರ್ಡ್‌ ಹೊಂದಿರುವವರಿಗೆ ಆರೋಗ್ಯ ತಪಾಸಣೆ

– ಗರ್ಭಿಣಿಯರಿಗೆ ನಗದುರಹಿತ ವೈದ್ಯ ಸೇವೆ

– ಹೆಚ್ಚು ಸಾರ್ವಜನಿಕ ಶೌಚಾಲಯಗಳು; ಸ್ಯಾನಿಟರಿ ನ್ಯಾಪ್ಕಿನ್‌ಗಳಿಗೆ ತೆರಿಗೆ ವಿನಾಯ್ತಿ

Advertisement

– ಲಿಂಗಾಧಾರಿತ ಹಿಂಸೆಯ ಸಂತ್ರಸ್ತರಿಗೆ ಉಚಿತ ವೈದ್ಯಕೀಯ, ಕಾನೂನು ನೆರವು

– ಹೆಣ್ಣುಮಕ್ಕಳಿಗೆ ಸರಕಾರಿ ಸಂಸ್ಥೆಗಳು ನಡೆಸುವ ಸ್ಪರ್ಧಾತ್ಮಕ, ಪ್ರವೇಶ ಪರೀಕ್ಷೆಗಳ ನೋಂದಣಿ ಶುಲ್ಕ ಮನ್ನಾ ಹೆಚ್ಚು ಹಾಸ್ಟೆಲ್‌ಗ‌ಳ ಸ್ಥಾಪನೆ

Advertisement

Udayavani is now on Telegram. Click here to join our channel and stay updated with the latest news.

Next