Advertisement

ಕರ್ನಾಟಕದಲ್ಲಿ ಅಭಿವೃದ್ಧಿಯ ಹೊಸ ಯುಗ ಆರಂಭವಾಗಲಿದೆ: ಸಿಎಂ ಬೊಮ್ಮಾಯಿ

11:25 AM Oct 07, 2021 | Team Udayavani |

ಮೈಸೂರು: ಸ್ವಚ್ಛ, ದಕ್ಷ, ಜನಪರ ಆಡಳಿತ ನೀಡಲು ಬದ್ಧರಾಗಿದ್ದು, ಕರ್ನಾಟಕದಲ್ಲಿ ಅಭಿವೃದ್ಧಿಯ ಹೊಸ ಯುಗ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದಸರಾ ಮಹೋತ್ಸವ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಬೇಕು ಎನ್ನುವ ವಿಚಾರವನ್ನು ಉದ್ಘಾಟಕರು ಕೂಡ ತಿಳಿಸಿದರು. ಖಂಡಿತವಾಗಿ ವಿಶ್ವದಲ್ಲಿ ಬೇರೆ ಬೇರೆ ಹಬ್ಬಗಳನ್ನು ಆಚರಣೆ ಮಾಡಲು ಟೂರಿಸಂ ಸರ್ಕಿಟ್ ಮಾಡಿ ಪ್ರಚಾರ ಕೊಟ್ಟು, ಜನರನ್ನು ಆಕರ್ಷಣೆ ಮಾಡುತ್ತಾರೆ. ಅದೇ ಮಾದರಿಯಲ್ಲಿ ಅಂತಾರಾಷ್ಟ್ರೀಯ ಸರ್ಕಿಟ್ ಮಾಡಲಾಗುವುದು. ಸಂಬಂಧಿಸಿದ ಸಚಿವರುಗಳು ಜೊತೆ ಚರ್ಚಿಸಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಜಲಸಂಪನ್ಮೂಲ ಸಚಿವನಾಗಿದ್ದಾಗ ನೀರಾವರಿಯ ಕೆಲಸ ಕಾರ್ಯ ವೀಕ್ಷಿಸಲು ಬಂದಿದ್ದೆ. ಗೇಟ್ಸ್ ನೋಡಿದೆ ರಂಧ್ರ ಬಿದ್ದು ನೀರು ಹರಿದುಹೋಗುತ್ತಿತ್ತು. ಗೇಟ್ ಗಳು 40 ವರ್ಷಕ್ಕೂ ಹೆಚ್ಚಿನ ಸೇವೆ ಮಾಡಿದ್ದು ಗೋಣಿಚೀಲ ನೀರು ತಡೆಯಲು ಇಟ್ಟಿದ್ದರು. ಈಗ ಯಾವುದೇ ಚರ್ಚೆ ಇಲ್ಲ ಏನಿದ್ದರೂ ನಿರ್ಧಾರ ಮಾತ್ರ.   ತುಂಗಭದ್ರಾ ಸ್ಟೀಲ್ ಕಂಪನಿಯ ಇಂಜಿನಿಯರ್ ಕರೆತಂದು 16 ಗೇಟ್ ಗಳನ್ನು ಹೊಸದಾಗಿ ಹಾಕಿದ್ದವು. ಐದಕ್ಕೂ ಮಂಜೂರು ಮಾಡಿದ್ದೇವೆ. 14 ಮಹಾರಾಜರ ಅಣೆಕಟ್ಟುಗಳಿವೆ. ಶಿಥಿಲಗೊಂಡಿವೆ. 90 ಸಾವಿರ ಎಕ್ರೆ ನೀರಾವರಿ ಆಗುತ್ತಿತ್ತು. 11 ಅಣೆಕಟ್ಟುಗಳ ನಾಲೆಗಳನ್ನು ಸಂಪೂರ್ಣ ಆಧುನೀಕರಣ ಮಾಡಿದ್ದೇನೆ. ವಿಸಿ ನಾಲೆ ಡಿಸ್ಟ್ರಿಬ್ಯೂಷನ್ ಆಗಿರಲಿಲ್ಲ, ಡಿಸ್ಟ್ರಿಬ್ಯೂಟ್ ಕೆಲಸ ಮಾಡಿದ್ದೇವೆ. ವರುಣಾ ನಾಲೆ 100 ಕಿಮಿ ಆಗಿದೆ. ಮುಂದಿನದನ್ನು ಮಾಡುತ್ತೇವೆ. ಸೇವೆ ಮಾಡುವ ಅವಕಾಶ ಸಿಕ್ಕಿದ್ದು ಸಣ್ಣ ಸಂತೃಪ್ತಿ. ಇವತ್ತಿನ ಸವಾಲುಗಳು. ಆರ್ಥಿಕ ಹಿಂಜರಿಕೆ ಇತರ ರಾಜ್ಯಗಳ ಜೊತೆಗೆ ನಾವು ಕೂಡ ಅಭಿವೃದ್ಧಿ ಹೊಂದಬೇಕೆನ್ನುವ ಚಿಂತನೆ ಇದೆ. ಹಲವಾರು ಬದಲಾವಣೆ ಮಾಡಿ ಆರ್ಥಿಕ ಬದಲಾವಣೆ ತಂದು ನಾಡಿನ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಮೈಸೂರು ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅವಶ್ಯಕತೆ ಇದೆ. ಎಲ್ಲ ರೀತಿಯ ವಿಸ್ತರಣೆಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ನಮ್ಮೆಲ್ಲರ ಬದುಕಿನಲ್ಲಿ ಸಂತೋಷ ಸಂಭ್ರಮವನ್ನು ತರಲಿ. ದುಃಖ ದುಮ್ಮಾನ ದೂರ ಮಾಡಲಿ ಎಷ್ಟೇ ಕಷ್ಟವಿದ್ದರೂ ಎದುರಿಸಲು ಶಕ್ತಿ ನೀಡಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ಇದನ್ನೂ ಓದಿ:ಮೈಸೂರು: ನಾಡಹಬ್ಬಕ್ಕೆ ಚಾಲನೆ ನೀಡಿದ ಮಾಜಿ ಸಿಎಂ ಎಸ್.ಎಂ.ಕೃಷ್ಣ

Advertisement

ನಾನು ಒಬ್ಬನೇ ಮಾಡುತ್ತೇನೆ ಎಂದರೆ ಮೂರ್ಖತನ. ನಾವೆಲ್ಲರೂ ಸೇರಿ ಮಾಡುತ್ತೇವೆ ಎಂದರೆ ಅದಕ್ಕೊಂದು ಅರ್ಥ. ನಮ್ಮದು ಟೀಮ್ ವರ್ಕ್, ಆರ್ಥಿಕ ಪ್ರಗತಿ ಮಾಡಿ ಜನಮೆಚ್ಚುವ ಕೆಲಸ ಮಾಡುತ್ತೇವೆ. ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಕೆಲಸ ಮಾಡಿದ್ದೇವೆ. ವಿಶೇಷ ಸ್ವಚ್ಛ, ದಕ್ಷ ಜನಪರ ಆಡಳಿತ ನೀಡಲು ಕಂಕಣ ಬದ್ಧರಾಗಿದ್ದೇವೆ ಎಂದು ಪ್ರಮಾಣ ಮಾಡಿದರು. ಸಿಎಂ ಡ್ಯಾಶ ಬೋರ್ಡ್ ಮಾಡಿದ್ದು ಎಲ್ಲ ಯೋಜನೆಗಳು ನಮ್ಮ ಕಣ್ಣಮುಂದಿರಬೇಕು. ಇದರಿಂದ ಹಲವಾರು ನಿರ್ದೇಶನಗಳನ್ನು ಕಾಲಕಾಲಕ್ಕೆ ನೀಡಲು ಸಾಧ್ಯವಾಗಲಿದೆ. ಕರ್ನಾಟಕದಲ್ಲಿ ಹೊಸ ಅಭಿವೃದ್ಧಿಯ ಯುಗ ಆರಂಭವಾಗಲಿದೆ. ಶುಭ ಹಸ್ತದಲ್ಲಿ ಉದ್ಘಾಟನೆ ಆಗಿದ್ದು, ನಮಗೆಲ್ಲರಿಗೂ ಶುಭ ತರಲಿದೆ ಎಂದರು.

ನನ್ನ ಪೂರ್ವಜನ್ಮದ ಪುಣ್ಯ. ನಾಡದೇವತೆಯ ಸೇವೆ ಮಾಡುವಂತಹ ಸದವಕಾಶ ಬಂದಿದೆ. ಈ ನಾಡದೇವತೆಯ ಆಶೀರ್ವಾದದೊಂದಿಗೆ ಈ ನಾಡನ್ನು ಸುಭೀಕ್ಷವಾಗಿರುವಂತಹ ಕನ್ನಡ ನಾಡಿನಲ್ಲಿರುವಂತಹ ಪ್ರತಿಯೊಬ್ಬ ಕನ್ನಡಿಗನ ಬಾಳನ್ನು ಹಸನು ಮಾಡುವ ಅವಕಾಶ. ಎಲ್ಲರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುವ ಪಣ, ಈ ಎಲ್ಲ ಅವಕಾಶ ಮಾಡಿಕೊಟ್ಟಿದ್ದಾಳೆ. ಕೋಟಿ ಕೋಟಿ ನಮನ ಎಂದರು.

ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಕಳೆಗುಂದಿದೆ. ತಾಯಿ ಆಶಿರ್ವಾದದೊಂದಿಗೆ ಮುಂದಿನ ವರ್ಷ ಅತ್ಯಂತ ವೈಭವಪೂರಿತವಾಗಿ ಭಕ್ತಿಭಾವದಿಂದ ಆಚರಿಸಲು ಅವಕಾಶ ಮಾಡಿಕೊಡುವಂತೆ ಪ್ರಾರ್ಥಿಸಿದ್ದೇವೆ. ಅವಕಾಶ ಕೊಟ್ಟರೆ ವೈಭವಯುತವಾಗಿ ಮಾಡುತ್ತೇವೆ. ಈ ನಾಡಹಬ್ಬ ಜನರಲ್ಲಿ ಉತ್ಸಾಹ ತುಂಬುವ ಕೆಲಸ ವಾಗಬೇಕು. ಮಳೆ ಬೆಳೆ ಸರಿಯಾಗಿ ಬಂದು ರೈತ ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಕ್ಕಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು. ಈ ನಾಡು ಸಂಪದ್ಭರಿತವಾಗಬೇಕು. ಈ ನಾಡಿಜನ ಜನತೆ ಸುಖದ ಬದುಕನ್ನು ನಡೆಸಿದಾಗ ಮಾತ್ರ ಸಂಭ್ರಮದ ದಸರಾ ಆಗತ್ತೆ ಎಂದು ತಿಳಿಸಿದರು.

ನನ್ನ ಜನತೆಗೆ ದುಃಖ ನೀಡದೆ ಕೊವಿಡ್ ಮಾರಿ ತೊಲಗಿಸಿ ನಾಡಿನ ಜನತೆ ಸಂಕಷ್ಟಕ್ಕೆ ಈಡಾಗದಂತೆ ಕಾಪಾಡಿ ಏನಾದರೂ ಕಷ್ಟವಿದ್ದರೆ ನನಗೇ ಕೊಡು. ಕಷ್ಟಸಹಿಸುವ ಶಕ್ತಿಯನ್ನೂ ನೀಡಲಿ ಎಂದು ಪ್ರಾರ್ಥಿಸಿದ್ದಾಗಿ ತಿಳಿಸಿದರು. ನಾಡಹಬ್ಬ ಉದ್ಘಾಟನೆ ಮಾಡಿದರೆಲ್ಲ ಬದುಕನ್ನು ಆದರ್ಶಪ್ರಾಯ ವಾಗಿಸಿಕೊಂಡವರು. ಹಲವಾರು ಮೌಲ್ಯ ಬಿಟ್ಟ ಹೋದವರು. ಅಪಾರ ಕೊಡುಗೆ ನೀಡಿದವರು. ಅದೇ ರೀತಿ ಎಸ್.ಎಂ.ಕೃಷ್ಣ ಅವರೂ ಕೂಡ ಧೀಮಂತ ನಾಯಕರು ಎಂದು ಬಣ್ಣಿಸಿದರು.

ಸಾರ್ವಜನಿಕ ಜೀವನದಲ್ಲಿ ಬದುಕಿನಲ್ಲಿ ಬದಲಾವಣೆಯಾಗುವ ನಿರ್ಧಾರ ತೆಗೆದುಕೊಂಡು ಅನುಷ್ಠಾನ ಮಾಡಿದ ಧೀಮಂತ ನಾಯಕರಿದ್ದಾರೆ. ಈ ಬದಲಾವಣೆ ನಾನು ಮಾಡಬೇಕು. ಯಾರು ಯಾವೆಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಅವರೆಲ್ಲರನ್ನೂ ಗುರುತಿಸುವ ಕೆಲಸವಾಗಬೇಕು. ಸಜ್ಜನ ಪ್ರಾಮಾಣಿಕ, ಜನಸೇವೆ ಮಾಡಿದ ಎಸ್.ಎಂ.ಕೃಷ್ಣ ಅವರನ್ನು ಆಯ್ಕೆ ಮಾಡಿದರೆ ಎಲ್ಲರೂ ಸ್ವಾಗತಿಸುತ್ತಾರೆಂಬ ನಂಬಿಕೆಯಿತ್ತು. ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ಒಪ್ಪಿಕೊಂಡಿದ್ದಾರೆ. ಜನರ ಒಪ್ಪಿಗೆಯ ಮುದ್ರೆ ಸಿಕ್ಕಿದೆ. ನಮ್ಮ ಹೆಗ್ಗಳಿಕೆಯಲ್ಲ, ಅವರ ಸಾಧನೆಯ ಹೆಗ್ಗಳಿಕೆ. ಮನುಷ್ಯನಿಗೆ ಅವಕಾಶಗಳು ಸಿಕ್ಕಾಗ ಅವನ ಚಿತ್ತ ಚಿಂತನೆ ಏನಿದು ಎನ್ನುವುದು ಗೊತ್ತಾಗತ್ತೆ. ಸಿಎಂ ಆದಾಗ ಅವರು ತೆಗೆದುಕೊಂಡ   ನಿರ್ಣಯಗಳನ್ನು ಜನತೆ ಇಂದಿಗೂ ಸ್ಮರಿಸುತ್ತಾರೆ ಎಂದರು.

ಮುಂದಿನ ದಿನಗಳಲ್ಲಿ ಇನ್ನೂ ವಿವಿಧ ಸಾಧಕರನ್ನು ಗುರುತಿಸಿ ಉದ್ಘಾಟನೆ ಮಾಡಿಸಲಾಗುವುದು. ಕೆಲಸ ಮಾಡುವುದು ಸಹಜ. ನಾಡಿಗಾಗಿ ನಾಡ ಜನತೆಗಾಗಿ ಬದುಕನ್ನು ಮುಡಿಪಿಡುವವರು ವಿರಳ ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next