Advertisement

80 ವರ್ಷಗಳ ಅನಂತರ ಸಿಕ್ಕ ಪಾಕೆಟ್‌ ವಾಚ್‌; 2ನೇ ವಿಶ್ವ ಯುದ್ಧದ ವೇಳೆ ಕಳೆದುಹೋಗಿದ್ದ ವಾಚ್‌

12:57 AM Apr 20, 2022 | Team Udayavani |

ಅಮಸ್ಟರ್‌ಡಂ: ಸುಮಾರು 80 ವರ್ಷಗಳ ಹಿಂದೆ ನಾಜಿ ಯೋಧರು ಕದ್ದಿದ್ದ ಪಾಕೆಟ್‌ ವಾಚ್‌ ಒಂದು ಇದೀಗ ಅದನ್ನು ನಿರ್ಮಿಸಿದವರ ಕುಟುಂಬಕ್ಕೆ ಸಿಕ್ಕಿದೆ! ಅಷ್ಟು ಮಾತ್ರವಲ್ಲದೆ ಅದು ಇನ್ನೂ ಸುಸ್ಥಿತಿಯಲ್ಲಿದೆ.

Advertisement

ನೆದರ್‌ಲ್ಯಾಂಡ್‌ನ‌ ರೋಟರ್‌ಡ್ಯಾಂ ಮೂಲದ ಆಲ್ಫ್ರೆಡ್ ಓವರ್‌ಸ್ಟ್ರಿಜಿದ್‌ ಹೆಸರಿನ ವ್ಯಕ್ತಿ 1910ರಲ್ಲಿ ತನ್ನ ಸಹೋದರ ಲುಯೀಸ್‌ಗೋಸ್ಕರ ಪಾಕೆಟ್‌ ವಾಚ್‌ ತಯಾರಿಸಿದ್ದ. ಆತನನ್ನು ನಾಜಿ ಯೋಧರು ಬಂಧಿಸಿದ್ದು, ಆ ವೇಳೆ ಅವನ ಬಳಿ ಇದ್ದ ವಾಚ್‌ ಅನ್ನು ತಾವೇ ಇಟ್ಟುಕೊಂಡಿದ್ದರು.

2ನೇ ವಿಶ್ವ ಯುದ್ಧದ ಸಮಯದಲ್ಲಿ ಬೆಲ್ಜಿಯಂ ಮತ್ತು ನೆದರ್‌ಲೆಂಡ್‌ನ‌ ಜನರು ನಾಜಿ ಯೋಧರಿಗೆ ವಾಸಕ್ಕೆ ಸ್ಥಳ ಕೊಟ್ಟಿದ್ದರು. ಅದೇ ಹಿನ್ನೆಲೆ ಬೆಲ್ಜಿಯಂನ ಗುಸ್ತಾವೆ ಜಾನ್ಸಿನ್ಸ್‌ ಹೆಸರಿನ ರೈತ ಮೂರು ಯೋಧರಿಗೆ ಸ್ಥಳ ಕೊಟ್ಟಿದ್ದ. ಅದರಲ್ಲಿ ಒಬ್ಬ ಯೋಧನ ಜೇಬಿನಲ್ಲಿದ್ದ ಆ ಪಾಕೆಟ್‌ ವಾಚು, ಅದೇ ಮನೆಯ ಹಿಂದಿನ ಜಾಗದಲ್ಲಿ ಬಿದ್ದಿದೆ.

ಇದನ್ನೂ ಓದಿ:ಪಕ್ಷ ಸಿದ್ದಾಂತ, ನಾಯಕತ್ವ ಇಲ್ಲದ ಕಾಂಗ್ರೆಸ್ ದೇಶವನ್ನೇ ಗೆಲ್ಲಲು ಹೊರಟಿದೆ : ಸಿಎಂ ವ್ಯಂಗ್ಯ

ವಾಚು ಗುಸ್ತಾವೆ ಕೈ ಸೇರಿದಾಗ ಆತ ಅದೇ ಜಾಗದಲ್ಲಿ ವಾಚನ್ನು ಬಚ್ಚಿಟ್ಟಿದ್ದಾನೆ. ಇತ್ತೀಚೆಗೆ ಗುಸ್ತಾವೆ ಮೊಮ್ಮಕ್ಕಳು ಆ ಜಾಗವನ್ನು ಮಾರಾಟ ಮಾಡಲು ಮುಂದಾದಾಗ ವಾಚು ಕೈಗೆ ಸಿಕ್ಕಿದೆ. ಅದರ ಹಿಂಬದಿಯಲ್ಲಿ ಬರೆಯಲಾಗಿದ್ದ ಮಾಹಿತಿ ಆಧರಿಸಿ, ಅದರ ತಯಾರಕರನ್ನು ಸಂಪರ್ಕಿಸಲು ಯತ್ನಿಸಲಾಗಿದೆ. ವಾಚ್‌ ತಯಾರಿಸಿದ್ದ ಆಲ್ಫ್ರೆಡ್ ಓವರ್‌ಸ್ಟ್ರಿಜಿದ್‌ನ ಮೊಮ್ಮಕ್ಕಳು ನೆದರ್ಲೆಂಡ್‌ನ‌ಲ್ಲಿ ಇರುವುದಾಗಿ ಗೊತ್ತಾಗಿದ್ದು, ಅವರಿಗೆ ವಾಚನ್ನು ಹಸ್ತಾಂತರಿಸಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next