Advertisement

ಬಹುವರ್ಷಗಳ ರಸ್ತೆ ಕನಸು ಈಡೇರಿಕೆ

07:12 PM Oct 19, 2021 | Team Udayavani |

ಬೆಳ್ತಂಗಡಿ: ಉಜಿರೆ -ಚಾರ್ಮಾಡಿ ರಸ್ತೆಯ ಕಲ್ಮಂಜ ಗ್ರಾಮದ ತಾಕೋಟೆ ಕಟ್ಟೆ ಸಮೀಪ ಗುರಿಪಳ್ಳ-ಕನ್ಯಾಡಿ- ಇಂದಬೆಟ್ಟು-ನಡ ಮೊದಲಾದ ಪ್ರದೇಶಗಳಿಗೆ ಬಹುಮುಖ್ಯ ಸಂಪರ್ಕ ರಸ್ತೆಯಾಗಿದ್ದರೂ ಆರಂಭದ 100 ಮೀಟರ್‌ ಖಾಸಗಿ ಭೂಮಿಯಾಗಿದ್ದರಿಂದ ಅಭಿವೃದ್ಧಿ ತೊಡಕಾಗಿತ್ತು. ಆದರೆ ಇದೀಗ ಶಾಸಕ ಹರೀಶ್‌ ಪೂಂಜ ಹಾಗೂ ಸ್ಥಳೀಯರ ಮುತುವರ್ಜಿಯಿಂದ ಕಾಂಕ್ರೀಟ್‌ ರಸ್ತೆ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ.

Advertisement

ಮುಖ್ಯರಸ್ತೆಯಿಂದ ಗುರಿಪಳ್ಳ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಶತಮಾನದ ಬೇಡಿಕೆಯಾಗಿತ್ತು. ರಸ್ತೆ ವ್ಯವಸ್ಥೆ ಇಲ್ಲದೆ ಈ ಭಾಗದ ಸಾವಿರಾರು ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದರು. ಈ ಕುರಿತು ಅನೇಕ ಶಾಸಕರು ರಸ್ತೆ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಪ್ರಯತ್ನಿಸಿದ್ದರು. ಆದರೆ ರಸ್ತೆಯ ಆರಂಭದ ಭಾಗ ಮುಂಡಾಜೆಯ ಗುಂಡಿ ಮನೆತನದ ಕಿರಣ್‌ ಖಾಡಿಲ್ಕರ್‌ ಅವರ ಪಟ್ಟಾ ಸ್ಥಳವಾಗಿತ್ತು. ಹೀಗಾಗಿ ಇತ್ತೀಚೆಗೆ ಶಾಸಕ ಹರೀಶ್‌ ಪೂಂಜ, ಬಿಜೆಪಿ ರೈತಮೋರ್ಚ ತಾಲೂಕು ಅಧ್ಯಕ್ಷ ಜಯಂತ ಗೌಡ ಗುರಿಪಳ್ಳ ಮತ್ತಿತರರು ಮಾತುಕತೆ ನಡೆಸಿದ್ದರು. ಇದರ ಫಲವಾಗಿ ಮಾಲಕರು ಕೆಲ ಷರತ್ತಿನ ಮೇರೆಗೆ ಅಭಿವೃದ್ಧಿಗೆ ಒಪ್ಪಿಗೆ ಸೂಚಿಸಿದ್ದರು.

ಇದನ್ನೂ ಓದಿ:ಭಾರತೀಯರ ಪ್ರಾಣದ ಜೊತೆ ಪಾಕ್ T-20 ಆಡುತ್ತಿದೆ : ಕೇಂದ್ರದ ವಿರುದ್ಧ ಓವೈಸಿ ವಾಗ್ದಾಳಿ  

ಅ.2ರಂದು ರಸ್ತೆಗೆ ಶಾಸಕ ಹರೀಶ್‌ ಪೂಂಜ, ಜಾಗದ ಮಾಲಕ ಕಿರಣ್‌ ಖಾಡಿಲ್ಕರ್‌ ಶಿಲಾನ್ಯಾಸ ನೆರವೇರಿಸಿ ಕಾಮಗಾರಿ ಆರಂಭವಾಗಿತ್ತು. ಹತ್ತು ದಿನಗಳೊಳಗೆ ಕಾಮಗಾರಿ ಪೂರ್ಣಗೊಂಡಿದೆ. ಶತಮಾನದ ಕನಸಾಗಿದ್ದ ರಸ್ತೆ ಕಾಮಗಾರಿಗೆ ಊರವರು ಹೆಚ್ಚಿನ ಉತ್ಸಾಹ ತೋರಿದ್ದರಲ್ಲದೆ ಶಿಲಾನ್ಯಾಸಕ್ಕೆ ನೂರಾರು ಜನ ಭಾಗವಹಿಸಿದ್ದರು. ಸ್ಥಳೀಯರು, ಜನಪ್ರತಿನಿಧಿಗಳು ಕಾಮಗಾರಿ ಸಂಪೂರ್ಣ ಸಹಕಾರ ನೀಡಿದ್ದಾರೆ.

ಅ.31ರಂದು ಉದ್ಘಾಟನೆ
ಗ್ರಾಮಸ್ಥರ ಅನೇಕ ದಶಕಗಳ ಕನಸು ಜಾಗದ ಮಾಲಕ ಕಿರಣ್‌ ಖಾಡಿಲ್ಕರ್‌ ಸಹಕಾರದಲ್ಲಿ ಸಾಕಾರಗೊಂಡಿದೆ. 12 ಅಡಿ ಅಗಲದ 140 ಮೀಟರ್‌ ಉದ್ದದ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದೆ. ಸುಸಜ್ಜಿತ ರಸ್ತೆಯಿಂದ ಇಂದಬೆಟ್ಟು, ಗುರಿಪಳ್ಳ, ಕನ್ಯಾಡಿ ಸುತ್ತಮುತ್ತ ಮಂದಿಗೆ ಅನುಕೂಲ ಕಲ್ಪಿಸಿದಂತಾಗಿದೆ.
-ಹರೀಶ್‌ ಪೂಂಜ, ಶಾಸಕರು

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next