Advertisement
ಸತತ ಬರದಿಂದ ಕಂಗೆಟ್ಟಿದ್ದ ರೈತರು ಉತ್ತಮ ಬೆಳೆ ಬೆಳೆಯಲಾರದೆ ಸಂಕಷ್ಟ ಎದುರಿಸುತ್ತಿದ್ದರು. ಕೆರೆಗಳಲ್ಲಿ ನೀರು ತುಂಬಿದರೆ ಸಮಸ್ಯೆ ಅರ್ಧದಷ್ಟು ಪರಿಹಾರ ವಾದಂತೆ ಎಂದುಕೊಂಡು ಇಲ್ಲಿನ ನೀರಿನ ಬವಣೆ ನೀಗಿಸಲು ಯೋಜನೆ ರೂಪಿಸಿದ ಶಾಸಕರು ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸಲು ಮುಂದಾಗಿದ್ದಾರೆ. ಈ ಯೋಜನೆಗೆ 670 ಕೋಟಿ ರೂ. ಸರ್ಕಾರದಿಂದ ಮಂಜೂರಾಗಿದ್ದು, ಜೂ.21ರಂದು ಆದೇಶ ಹೊರಡಿಸುವಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ ಯಶಸ್ವಿ ಯಾಗಿದ್ದಾರೆ.
Related Articles
ಜನರ ಬದುಕನ್ನೇ ಅಲುಗಾಡಿಸಿದ ಕೊರೊನಾ ಸೋಂಕನ್ನು ನಿಭಾಯಿಸುವಲ್ಲಿ ಕೂಡ್ಲಿಗಿ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರ ಕಾರ್ಯ ಶ್ಲಾಘನೀಯ. ತಾಲೂಕು ಆಡಳಿತದೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಎಲ್ಲಾ ಅಧಿಕಾರಿಗಳನ್ನೂ ಸೋಂಕು ನಿಯಂತ್ರಣಕ್ಕೆ ಅಣಿಗೊಳಿಸಿ ಸರಕಾರದ ಎಲ್ಲ ನಿಯಮಾವಳಿಗಳನ್ನು ಪಾಲಿಸಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ತಾಲೂಕಿನಲ್ಲಿ ಹೆಚ್ಚಿನ ಸಾವು-ನೋವು ಸಂಭವಿಸದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಅಧಿಕಾರಿಗಳ ಸಭೆ ಆಯೋಜಿಸುವುದರ ಜೊತೆಗೆ ನಿತ್ಯ ತಾಲೂಕಿನ ಸ್ಥಿತಿಗತಿ ಅವಲೋಕಿಸಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಅಲ್ಲದೆ, ಅಧಿಕಾರಿಗಳ ಕಾರ್ಯವೈಖರಿ ಮೆಚ್ಚುಗೆಯಾದರೆ ಭೇಷ್ ಎನ್ನುವುದು ಹಾಗೂ ನಿರ್ಲಕ್ಷéವಹಿಸುವ ಯಾರೇ ಅಧಿಕಾರಿಯಾದರೂ ಸಭೆಯಲ್ಲೇ ‘ನೀವು ಸರಿಯಾಗಿ ಕೆಲಸ ಮಾಡಬೇಕು. ಕೆಲಸ ಮಾಡುವವರಿಗಷ್ಟೇ ಇಲ್ಲಿ ಜಾಗ’ ಎನ್ನುವ ಎಚ್ಚರಿಕೆಯನ್ನು ನೀಡಿ
ಆಡಳಿತಕ್ಕೆ ಚುರುಕು ಮುಟ್ಟಿಸುತ್ತ ಬಂದಿದ್ದಾರೆ. ಅಧಿಕಾರಿಗಳ ವಲಯದಲ್ಲೂ ಶಾಸಕರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಎನ್.ವೈ.ಜಿ ಓರ್ವ ಉತ್ತಮ ಆಡಳಿತಗಾರರು ಎಂದು ಅಧಿಕಾರಿಗಳೂ ಪ್ರಶಂಸೆ ವ್ಯಕ್ತಪಡಿಸುತ್ತಾರೆ.
**
Advertisement
ಮಾನವೀಯತೆ ಮೆರೆದ ಕರುಣಾಮಯಿ ಶಾಸಕ
ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಕ್ಷೇತ್ರದ ಅಭಿವೃದ್ಧಿಯೊಂದಿಗೆ ಜನರ ಸಂಕಷ್ಟಕ್ಕೂ ಸ್ಪಂದಿಸುವ ಹೃದಯವಂತ ರಾಜಕಾರಣಿ. ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್ ಮಹಾಮಾರಿ ಕ್ಷೇತ್ರದಲ್ಲೂ ಅನೇಕ ಸಂಕಷ್ಟಗಳನ್ನು ತಂದೊಡ್ಡಿದೆ. ಈ ಸೋಂಕನ್ನು ನಿಯಂತ್ರಿಸುವಲ್ಲಿ ಹತ್ತು ಹಲವು ಕಾರ್ಯ ಕೈಗೊಂಡಿದ್ದಲ್ಲದೆ ಕೂಡ್ಲಿಗಿ ತಾಲೂಕಿನಲ್ಲಿ ಸೋಂಕಿನಿಂದ ಮೃತಪಟ್ಟ 74ಕ್ಕೂ ಅಧಿಕ ಕುಟುಂಬಗಳಿಗೆ ತಲಾ 20 ಸಾವಿರ ರೂ. ವೈಯಕ್ತಿಕ ಸಹಾಯ ಧನ ನೀಡಿ ಮಾನವೀಯತೆ ಮೆರೆದಿದ್ದಾರೆ. ಇದಲ್ಲದೆ, ಶಾಸಕ ಗೋಪಾಲಕೃಷ್ಣ ಅವರ ಬಳಿಗೆ ಬರುವ ಬಡವರು, ಅಸಹಾಯಕರು, ನಿರ್ಗತಿಕರ ಬಗ್ಗೆ ವಿಶೇಷ ಕಾಳಜಿ ವಹಿಸಿ, ಸರ್ಕಾರದಿಂದ ಸಿಗಬೇಕಾದ ಸೌಲಭ್ಯವನ್ನು ಕೊಡಿಸುವವರೆಗೂ ಅದರ ಬಗ್ಗೆ ಮುತುವರ್ಜಿ ವಹಿಸುವಂಥ ಕರುಣಾಮಯಿ ಶಾಸಕ
ಎಂಬುದನ್ನು ಕ್ಷೇತ್ರದ ಜನ ಒಪ್ಪಿಕೊಂಡ ಸತ್ಯ.
**
ಕೂಡ್ಲಿಗಿ ಪಟ್ಟಣದಲ್ಲಿ ಅಭಿವೃದ್ಧಿ ಪರ್ವ
ಕೂಡ್ಲಿಗಿ ಪಟ್ಟಣದ ಜೊತೆಗೆ ಇಡೀ ತಾಲೂಕಿನ ಕ್ಷೇತ್ರದ ಗ್ರಾಮೀಣಭಾಗದ ಶೋಭೆ ಹೆಚ್ಚಿಸುವ ನಿಟ್ಟಿನಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ ಚಿತ್ತ ಹರಿಸಿದ್ದಾರೆ. ಕೂಡ್ಲಿಗಿ ಪಟ್ಟಣದ ಹೃದಯ ಭಾಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಮಿನಿ ವಿಧಾನಸೌಧ ಕಟ್ಟಡ ನಿರ್ಮಿಸಲಾಗುತ್ತಿದೆ. ಈಗಾಗಲೇ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಶೇ.20 ರಷ್ಟು ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ, ಪಟ್ಟಣದಲ್ಲಿ ಮಹಾತ್ಮ ಗಾಂಧೀಜಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದ ಆವರಣ ಅಭಿವೃದ್ಧಿಗೆ 1.25 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಅದರಂತೆ, ಕೂಡ್ಲಿಗಿ ಪಟ್ಟಣ ಪಂಚಾಯಿತಿಯ 2020-21ನೇ ಸಾಲಿನ ಹಣಕಾಸು ವರ್ಷಕ್ಕೆ 143 ಕಾಮಗಾರಿಗೆ 3.16 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಅಲ್ಲದೆ, ಕೂಡ್ಲಿಗಿ ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ನೂತನ ಕಟ್ಟಡವನ್ನು 1.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಪ್ರಗತಿ ಹಂತದಲ್ಲಿದೆ. ಕೂಡ್ಲಿಗಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಹೆಚ್ಚುವರಿ ಕೊಠಡಿ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ 2.75 ಕೋಟಿ ರೂ. ವೆಚ್ಚ ಮಾಡಲಾಗಿದೆ.
**
ಎನ್.ವೈ. ಸಹೋದರರ ಕೊಡುಗೆ
ಕಳೆದ ಮೂರ್‍ನಾಲ್ಕು ದಶಕಗಳಿಂದ ರಾಜಕೀಯ ಜೀವನದಲ್ಲಿರುವ ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರ ಕುಟುಂಬವೇ ರಾಜಕೀಯವಾಗಿ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿದೆ. ಎನ್.ವೈ.ಗೋಪಾಲಕೃಷ್ಣ ಅವರ ತಂದೆ ಶಿಕ್ಷಕರಾಗಿದ್ದರೂ, ತಾಯಿ ಒಮ್ಮೆ ರಾಂಪುರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಜನಸೇವೆ ಮಾಡಿದವರು. ಇದು ಎನ್.ವೈ.ಗೋಪಾಲಕೃಷ್ಣ ಅವರು ರಾಜಕೀಯಕ್ಕೆ ಬರಲು ಪ್ರೇರಣೆ ನೀಡಿತು. ಅಲ್ಲದೇ, ಒರಿಸ್ಸಾ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಾಗಿದ್ದ ಇವರ ಹಿರಿಯಣ್ಣ ಎನ್.ವೈ. ಹನುಮಂತಪ್ಪ ಅವರು ಸಹ ಚಿತ್ರದುರ್ಗ ಜಿಲ್ಲೆಯ ಸಂಸದರಾಗಿ ಚಿತ್ರದುರ್ಗ ಜಿಲ್ಲೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಎನ್.ವೈ.ಹನುಮಂತಪ್ಪನವರು ಚಿತ್ರದುರ್ಗ ಸಂಸದರಾಗಿದ್ದಾಗ ಎನ್.ವೈ.ಗೋಪಾಲಕೃಷ್ಣ ಅವರು ಮೊಳಕಾಲ್ಮುರು ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದರು. ಈ ವೇಳೆ ಕೇಂದ್ರ ಸರ್ಕಾರದ ಡಿಫೆನ್ಸ್ ರಿಸರ್ಚ್ ಡೆವಲಪ್‌ಮೆಂಟ್ (ಡಿಆರ್‌ಡಿಒ) ಆರ್ಗನೈಜೇಷನ್ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಲು ಸ್ಥಳ ಹುಡುಕಾಡುತ್ತಿದ್ದರು. ಆಗ ಎನ್.ವೈ. ಸಹೋದರರಿಬ್ಬರೂ ಮುತುವರ್ಜಿ ವಹಿಸಿ ಸ್ಥಳ ಹುಡುಕಿಕೊಟ್ಟರು. ಮೊದಲು ಕೇಂದ್ರ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದ ಜನ ಇಂದು ಈ ಕೇಂದ್ರವನ್ನು ಜಿಲ್ಲೆಯ ಹೆಮ್ಮೆ ಎಂದು ಭಾವಿಸುತ್ತಿದ್ದಾರೆ. ಇದನ್ನು ಇಲ್ಲಿ ಸ್ಥಾಪಿಸಿದ ಖ್ಯಾತಿ ಎನ್.ವೈ. ಸಹೋದರರಿಗೆ ಸಲ್ಲಬೇಕು ಎಂದು ಜಿಲ್ಲೆ ಜನ ಮುಕ್ತ ಕಂಠದಿಂದ ಹೇಳುತ್ತಾರೆ.
**
ಹರಿದ ಅನುದಾನದ ಹೊಳೆ
ಕೂಡ್ಲಿಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧರಾದ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಅನುದಾನದ ಹೊಳೆಯನ್ನೇ ಹರಿಸಿದ್ದಾರೆ. ಈ ಅನುದಾನ ಬಳಕೆಯಿಂದ ಪಟ್ಟಣ, ಹೋಬಳಿ ಕೇಂದ್ರಗಳು ಸೇರಿ ಗ್ರಾಮೀಣ ಭಾಗದಲ್ಲೂ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಕೂಡ್ಲಿಗಿ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆ ಅಭಿವೃದ್ಧಿ ಸೇರಿ ಇತರೆ 248 ಕಾಮಗಾರಿಗಳಿಗೆ 254.00 ಕೋಟಿ ರೂ., ಸಣ್ಣ ನೀರಾವರಿ ಇಲಾಖೆಯಲ್ಲಿನ ಚೆಕ್ ಡ್ಯಾಂನ 36 ಕಾಮಗಾರಿಗಳಿಗೆ 22 ಕೋಟಿ ರೂ., ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 365 ಕಾಮಗಾರಿಗಳಿಗೆ 800 ಕೋಟಿ ರೂ., ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ 391 ಕಾಮಗಾರಿಗಳಿಗೆ 74 ಕೋಟಿ ರೂ., ಆರೋಗ್ಯ ಇಲಾಖೆಯ ಆಸ್ಪತ್ರೆಯಲ್ಲಿ ಹೆಚ್ಚುವರಿ ವಸತಿ ಗೃಹ, ರಸ್ತೆ ನಿರ್ಮಾಣ, ಕಾಂಪೌಂಡ್ ಸೇರಿ ಮೂಲ ಸೌಕರ್ಯಗಳಿಗೆ 6.05 ಕೋಟಿ ರೂ. ಅನುದಾನ ನೀಡಿ ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನು, ಕೂಡ್ಲಿಗಿ ಪಟ್ಟಣದ ಹೊರವಲಯದಲ್ಲಿ 10 ಕೋಟಿ ರೂ. ವೆಚ್ಚದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ಪೂರ್ಣಗೊಂಡಿದೆ. ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣ ಅಭಿವೃದ್ಧಿ 3.18 ಲಕ್ಷ ರೂ. ಮತ್ತು ಕಾಂಪೌಂಡ್ ನಿರ್ಮಾಣಕ್ಕೆ ರೂ. 39.00 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗದ ಕಟ್ಟಡ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಮುಗಿಯುವ ಹಂತದಲ್ಲಿದೆ. ಇನ್ನು, ಜಿಲ್ಲಾ ಖನಿಜ ನಿಧಿ(ಡಿ.ಎಂ.ಎಫ್) ಯೋಜನೆ (6ನೇ ಹಂತದಲ್ಲಿ ) ಅಡಿ ಒಟ್ಟು 12 ಕೋಟಿ ರೂ. ಕ್ಷೇತ್ರಕ್ಕೆ ದೊರೆತಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಇದು ಬಳಕೆಯಾಗಲಿದೆ.
**
ಸಹೋದರನ ಹಾದಿಯಲ್ಲಿ
ಸಹೋದರ ಎನ್.ವೈ. ಹನುಮಂತಪ್ಪ ಅವರು ಸಹ ಅತ್ಯಂತ ಸದ್ವಿನಯಿ ಗುಣವುಳ್ಳವರು. ಒರಿಸ್ಸಾ ಉತ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ಅವರು ರಾಜಕಾರಣದಲ್ಲೂ ಸೈ ಎನ್ನಿಸಿಕೊಂಡವರು. 2004 ರಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯ ಕಂಡ ಹನುಮಂತಪ್ಪನವರು ಜಿಲ್ಲೆಗೆ ಸ್ಮರಣೀಯ ಕೊಡುಗೆ ನೀಡಬೇಕೆಂಬ ಛಲದೊಂದಿಗೆ ಕೆಲಸಮಾಡಿದರು. ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ)ಯ ಒಂದು ಭಾಗ ಚಿತ್ರದುರ್ಗ ಜಿಲ್ಲೆಗೆ ಬರುವಂತೆ ಮಾಡುವಲ್ಲಿ ಶ್ರಮ ವಹಿಸಿದರು. ಇದರ ಫಲವಾಗಿಯೇ ಇಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಬಳಿ ಡಿಆರ್‌ಡಿಒ ತಲೆ ಎತ್ತಿದೆ. ಹೀಗೆ ತಮ್ಮನ್ನು ನಂಬಿದ ಜನಕ್ಕೆ ಏನಾದರೂ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ, ಒಳಿತಾಗುವುದನ್ನು ಮಾಡಬೇಕೆಂಬುದನ್ನು ಗೋಪಾಲಕೃಷ್ಣ ಅವರು ತಮ್ಮ ಸಹೋದರನಿಂದ ಕಲಿತು, ಈಗ ಸಾಕಾರ ಮಾಡಿದ್ದಾರೆ.
– ಪಿ.ಡಬ್ಲೂ$Â.ಡಿ ರಸ್ತೆಗಳು : ಒಟ್ಟು 248 ಕಾಮಗಾರಿಗಳಿಗೆ ರೂ. 254.00 ಕೋಟಿ.
– ಸಣ್ಣ ನೀರಾವರಿ ಇಲಾಖೆ : ಚೆಕ್ ಡ್ಯಾಂ 36 ಕಾಮಗಾರಿಗಳಿಗೆ 22 ಕೋಟಿ
– ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ : 365 ಕಾಮಗಾರಿಗಳಿಗೆ 800 ಕೋಟಿ
– ಪಂಚಾಯತ್ ರಾಜ್ ಇಂಜಿನಿಯರಿಂಗ್ : 391 ಕಾಮಗಾರಿಗಳಿಗೆ 74 ಕೋಟಿ.
– ಶಿಕ್ಷಣ ಇಲಾಖೆ: 239 -ಶಾಲಾ ಕೊಠಡಿ, 30-ಬಿಸಿಯೂಟದ ಕೊಠಡಿ, 21-ಶೌಚಗೃಹ ನಿರ್ಮಾಣ. 10-ಶುದ್ಧ ಕುಡಿಯುವ ನೀರಿನ ಘಟಕ, 09-ಶಾಲೆಗಳಿಗೆ ಪ್ರಯೋಗಾಲಯ ಮತ್ತು 2 ಶಾಲೆಗಳಿಗೆ ಆಟದ ಸಾಮಗ್ರಿಗಳ ವಿತರಣೆ ಒಟ್ಟು ಅನುದಾನ ರೂ. 25 ಕೋಟಿ 29 ಲಕ್ಷ ಮಂಜೂರು ಮಾಡಲಾಗಿದೆ ಹಾಗೂ ಎಲ್ಲ ಕಾಮಗಾರಿಗಳು ಪೂಣಗೊಂಡಿವೆ.
– ಆರೋಗ್ಯ ಇಲಾಖೆ: ಆಸ್ಪತ್ರೆಯಲ್ಲಿ ಹೆಚ್ಚುವರಿ ವಸತಿ ಗೃಹ, ರಸ್ತೆ ನಿರ್ಮಾಣ ಕಾಂಪೌಂಡ್,
– ಮೂಲಭೂತ ಸೌಕರ್ಯಗಳಿಗೆ : ರೂ. 6 ಕೋಟಿ 5 ಲಕ್ಷ
– ಮಿನಿ ವಿಧಾನಸೌಧಕ್ಕೆ 10 ಕೋಟಿ.
– ಕೂಡ್ಲಿಗಿ ಪಟ್ಟಣದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡಕ್ಕೆ ರೂ. 10.00 ಕೋಟಿ ಅನುದಾನ. ಕಾಮಗಾರಿ ಪೂರ್ಣಗೊಂಡಿದೆ.
– ಮಹದೇವ ಮೈಲಾರ ಕ್ರೀಡಾಂಗಣ ಅಭಿವೃದ್ಧಿ ಗೆ ಒಟ್ಟು ರೂ. 3.18 ಲಕ್ಷ ಮತ್ತು ಕಾಂಪೌಂಡ್ ನಿರ್ಮಾಣಕ್ಕೆ ರೂ. 39.00 ಲಕ್ಷ ಅನುದಾನ. ಕಾಮಗಾರಿ ಪ್ರಗತಿಯಲ್ಲಿದೆ.
– ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪ-ವಿಭಾಗ ಮತ್ತು ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಉಪ-ವಿಭಾಗ, ಕಟ್ಟಡಕ್ಕೆ ರೂ. 1.00 ಕೋಟಿ ಅನುದಾನ. ಕಾಮಗಾರಿ ಮುಗಿಯುವ ಹಂತದಲ್ಲಿದೆ.
– ಡಿ.ಎಂ.ಎಫ್. ಯೋಜನೆ (6ನೇ ಹಂತದಲ್ಲಿ )ಅಡಿ ಒಟ್ಟು ರೂ: 12.00 ಕೋಟಿ ಅನುದಾನ
– ಗಾಂಧೀ ಚಿತಾಭಸ್ಮ ಸ್ಮಾರಕ ಅಭಿವೃದ್ಧಿ 1.25 ಕೋಟಿ ಅನುದಾನ. ಕೆಲಸ ಪೂರ್ಣಗೊಂಡಿದೆ.
– ಕೂಡ್ಲಿಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಹೆಚ್ಚುವರಿ ಕೊಠಡಿ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ರೂ. 2.75 ಕೋಟಿ ಅನುದಾನ.
– ಹುರುಳಿಹಾಳ್ ಗ್ರಾಮದ ಹತ್ತಿರ ಪರಿಶಿಷ್ಠ ವರ್ಗಗಳ ಮೊರಾರ್ಜಿ ದೇಸಾಯಿ ಶಾಲೆಗೆ ರೂ. 25.00 ಕೋಟಿ ಅನುದಾನ.
– ಕೂಡ್ಲಿಗಿ ಪಟ್ಟಣದಲ್ಲಿ ನೂತನ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ 1 ಕೋಟಿ 80 ಲಕ್ಷ ಅನುದಾನ. ಕೆಲಸ ಪ್ರಗತಿಯಲ್ಲಿದೆ.
– ಹೊಸಹಳ್ಳಿ ಸಂಗಮೇಶ್ವರ ಬೆಟ್ಟದ ಹತ್ತಿರ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ ಮಾಡಲು 9.98 ಎಕರೆ ಜಮೀನು ಮಂಜೂರು.
– ಹಿರೇಹೆಗಾxಳು ಗ್ರಾಮದ ಹತ್ತಿರ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ನಿರ್ಮಾಣಕ್ಕೆ 8 ಎಕರೆ ಜಮೀನು ಮಂಜೂರು. 20 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶಿಘ್ರದಲ್ಲಿ ಶಂಕುಸ್ಥಾಪನೆ ನೆರವೇರಲಿದೆ.
– ಹೂಡೇಂ ಗ್ರಾಮದ ಹತ್ತಿರ ಏಕಲವ್ಯ ವಸತಿ ಶಾಲೆ ನಿರ್ಮಾಣ ಮಾಡಲು 15 ಎಕರೆ ಜಾಗ ಮಂಜೂರು.
– ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ: ಸರ್ವೇ ಕಾರ್ಯ ಪೂರ್ಣಗೋಂಡಿದ್ದು, ಡಿ.ಪಿ.ಆರ್. ಸಲ್ಲಿಸಿ ಬೋರ್ಡ್ ಅನುಮೋದನೆ ದೊರೆತು 670 ಕೋಟಿ ರೂ. ಮಂಜೂರಾಗಿದೆ. ಸಚಿವ ಸಂಪುಟದಲ್ಲಿ ಒಪ್ಪಿಗೆಯೂ ದೊರೆತಿದೆ.
– ಕೂಡ್ಲಿಗಿ ಪಟ್ಟಣ ಪಂಚಾಯಿತಿಗೆ 2020-21ನೇ ಸಾಲಿನ ಹಣಕಾಸು ವರ್ಷಕ್ಕೆ 143 ಕಾಮಗಾರಿಗೆ ರೂ. 3 ಕೋಟಿ 16 ಲಕ್ಷ ಅನುದಾನ.
– ಡಿ.ದೇವರಾಜು ಅರಸು ವಸತಿ ಯೋಜನೆಯಡಿ 14 ವಿಶೇಷ ವರ್ಗದಡಿ ಕ್ಷೇತ್ರದ ಅಲೆಮಾರಿ/ಅರೆ ಅಲೆಮಾರಿ ವರ್ಗದ ಗೊಲ್ಲ ಸಮುದಾಯದ 2300 ಫಲಾನುಭವಿಗಳಿಗೆ ವಸತಿ ಸೌಕರ್ಯ ಕಲ್ಪಿಸಲು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದಿಂದ ಅನುಮೋದನೆ ದೊರೆತಿದೆ.
– ಕೂಡ್ಲಿಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೋಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 869 ಮನೆಗಳು.
– ವಿವಿಧ ಸಾಮಾಜಿಕ ಭದ್ರತೆಯಡಿ ಗುಡೆಕೋಟೆ ಹೊಸಳ್ಳಿ ಹೋಬಳಿ ಹಾಗೂ ಕೂಡ್ಲಿಗಿ ಕಸಬಾ ಒಳಗೊಂಡಂತೆ ಸುಮಾರು 5863 ಜನರಿಗೆ ಹಕ್ಕು ಪತ್ರ ವಿತರಣೆ.