Advertisement

Kalempang: 3 ದಿನದಿಂದ ಕಾಣೆಯಾಗಿದ್ದ ಮಹಿಳೆ ಶವವಾಗಿ ಸಿಕ್ಕಿದ್ದು ಹೆಬ್ಬಾವಿನ ಹೊಟ್ಟೆಯಲ್ಲಿ!

08:50 AM Jun 09, 2024 | Team Udayavani |

ಇಂಡೋನೇಷ್ಯಾ: ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯೊಬ್ಬರು ಹೆಬ್ಬಾವಿನ ಹೊಟ್ಟೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. 16 ಅಡಿಯ ಹೆಬ್ಬಾವು ಆಕೆಯನ್ನು ಪೂರ್ತಿಯಾಗಿ ನುಂಗಿತ್ತು!

Advertisement

45 ವರ್ಷದ ಫರೀದಾ ಅವರ ಪತಿ ಮತ್ತು ದಕ್ಷಿಣ ಸುಲವೆಸಿ ಪ್ರಾಂತ್ಯದ ಕಲೆಂಪಂಗ್ ಗ್ರಾಮದ ನಿವಾಸಿಗಳು ಶುಕ್ರವಾರ ಐದು ಮೀಟರ್ (16 ಅಡಿ) ಅಳತೆಯ ರೆಟಿಕ್ಯುಲೇಟೆಡ್ ಹೆಬ್ಬಾವಿನೊಳಗೆ ಮಹಿಳೆಯನ್ನು ಪತ್ತೆ ಮಾಡಿದ್ದಾರೆ.

ನಾಲ್ಕು ಮಕ್ಕಳ ತಾಯಿ ಗುರುವಾರ ರಾತ್ರಿ ನಾಪತ್ತೆಯಾಗಿದ್ದರು, ಹುಡುಕಾಟ ಪ್ರಯತ್ನ ನಡೆಸಲಾಗಿತ್ತು ಎಂದು ಗ್ರಾಮದ ಮುಖ್ಯಸ್ಥ ಸುರ್ದಿ ರೋಸಿ ಎಎಫ್‌ಪಿಗೆ ತಿಳಿಸಿದ್ದಾರೆ.

ಸ್ಥಳದಲ್ಲಿ ಆಕೆಗೆ ಸಂಬಂಧಿಸಿದ ವಸ್ತುಗಳು ಕಂಡುಬಂದಾಗ ಪತಿಗೆ ಅನುಮಾನವ ಉಂಟುಮಾಡಿತು. ನಂತರ ಗ್ರಾಮಸ್ಥರು ಆ ಪ್ರದೇಶವನ್ನು ಹುಡುಕಿದರು. ಆಗ ಅವರಿಗೆ ದೊಡ್ಡ ಹೊಟ್ಟೆಯ ಹೆಬ್ಬಾವು ಕಾಣ ಸಿಕ್ಕಿತು ಎಂದು ಸುರ್ದಿ ಹೇಳಿದರು.

ಬಳಿಕ ಸ್ಥಳೀಯರು ಹೆಬ್ಬಾವಿನ ಹೊಟ್ಟೆಯನ್ನು ಸಿಗಿದರು, ಈ ವೇಳೆ ಫರೀದಾ ಅವರ ತಲೆ ಗೋಚರಿಸಿತು.

Advertisement

ಇಂತಹ ಘಟನೆಗಳನ್ನು ಅತ್ಯಂತ ಅಪರೂಪವೆಂದು ಪರಿಗಣಿಸಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂಡೋನೇಷ್ಯಾದಲ್ಲಿ ಹೆಬ್ಬಾವುಗಳು ನುಂಗಿದ ಘಟನೆಯಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next