Advertisement

IPL ನಲ್ಲೊಂದು ಮೈಲುಗಲ್ಲು: 200 ಪಂದ್ಯಗಳಲ್ಲಿ ಧೋನಿ ನಾಯಕತ್ವ

10:38 PM Apr 12, 2023 | Team Udayavani |

ಚೆನ್ನೈ: ಟೀಮ್‌ ಇಂಡಿಯಾದ ಯಶಸ್ವಿ ನಾಯಕರಲ್ಲೊಬ್ಬರಾದ ಮಹೇಂದ್ರ ಸಿಂಗ್‌ ಧೋನಿ ಐಪಿಎಲ್‌ನ ಸ್ಟಾರ್‌ ಸಾರಥಿಯೂ ಹೌದು. ಚೆನ್ನೈ ಸೂಪರ್‌ ಕಿಂಗ್ಸ್‌ಗೆ 4 ಸಲ ಟ್ರೋಫಿಯನ್ನು ತಂದಿತ್ತ ಹಿರಿಮೆ ಇವರದು. ಧೋನಿ ಇಲ್ಲದಿದ್ದರೆ ಚೆನ್ನೈ ತಂಡವಿಲ್ಲ ಎಂಬಷ್ಟರ ಮಟ್ಟಿಗೆ ಈ ನಂಟು ಬೆಸೆದಿದೆ. ಒಮ್ಮೆ ರವೀಂದ್ರ ಜಡೇಜಾಗೆ ನಾಯಕತ್ವ ವಹಿಸಿ ಅವರು ವಿಫ‌ಲರಾದ ಬಳಿಕ ಮತ್ತೆ ಧೋನಿಯೇ ತಂಡದ ಚುಕ್ಕಾಣಿ ಹಿಡಿದದ್ದು ಇದಕ್ಕೆ ಸಾಕ್ಷಿ.

Advertisement

ಹೀಗೆ ಚೆನ್ನೈ ತಂಡದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಧೋನಿ ಬುಧವಾರ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಸಂಜು ಸ್ಯಾಮ್ಸನ್‌ ಜತೆ ಟಾಸ್‌ಗೆ ತೆರಳುವ ವೇಳೆ ನೂತನ ಇತಿಹಾಸವೊಂದನ್ನು ಬರೆದರು. ಐಪಿಎಲ್‌ನಲ್ಲಿ ತಂಡವೊಂದನ್ನು 200 ಪಂದ್ಯಗಳಲ್ಲಿ ಮುನ್ನಡೆಸಿದ ಮೊದಲ ನಾಯಕನೆಂಬ ಹಿರಿಮೆಗೆ ಪಾತ್ರರಾದರು.

ರೋಹಿತ್‌ ದ್ವಿತೀಯ
ಬೇರೆ ನಾಯಕರ್ಯಾರೂ 150ರ ಗಡಿಯನ್ನೂ ಮುಟ್ಟಿಲ್ಲ ಎಂಬುದು “ಮಹಿ” ಮಹಿಮೆಗೆ ಸಾಕ್ಷಿ. ಮುಂಬೈಯನ್ನು ದಾಖಲೆ 5 ಸಲ ಪಟ್ಟಕ್ಕೇರಿಸಿದ ರೋಹಿತ್‌ ಶರ್ಮ 146 ಪಂದ್ಯಗಳಲ್ಲಷ್ಟೇ ನಾಯಕತ್ವ ವಹಿಸಿದ್ದು, ದ್ವಿತೀಯ ಸ್ಥಾನದಲ್ಲಿದ್ದಾರೆ. ಹೀಗಾಗಿ ಧೋನಿ ದಾಖಲೆ ಮುಂದಿನ ಕೆಲವು ವರ್ಷಗಳ ಕಾಲ ಐಪಿಎಲ್‌ ನಾಯಕರಿಗೆಲ್ಲ ಸವಾಲಾಗಿಯೇ ಉಳಿಯಲಿದೆ.

ಧೋನಿ ಒಟ್ಟು 213 ಐಪಿಎಲ್‌ ಪಂದ್ಯ ಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಉಳಿದ 13 ಪಂದ್ಯಗಳಲ್ಲಿ ಅವರು ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ತಂಡದ ನಾಯಕರಾಗಿ ದ್ದರು. 2018ರಲ್ಲಿ ಮರಳಿ ಚೆನ್ನೈ ತಂಡದ ನಾಯಕರಾದರು.

ಧೋನಿ ತಮ್ಮ 200ನೇ ನಾಯಕತ್ವದ ಪಂದ್ಯವನ್ನು ತವರಿನಂಗಳದಲ್ಲೇ ಆಡುವ ಅವಕಾಶ ಪಡೆದದ್ದು ಚೆನ್ನೈ ಅಭಿಮಾನಿಗಳ ಪಾಲಿಗೆ ಖುಷಿಯ ಸಂಗತಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next