ಕೊಲ್ಹಾರ: ಮತದಾರ ಪ್ರಭುಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಪಟ್ಟಣ ಪಂಚಾಯತ್ ನೂತನ ಸದಸ್ಯೆ ರಾಜಮಾ ನದಾಫ್ ಹೇಳಿದರು.
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರವಿ ಶಿರಗುಪ್ಪಿ ಅವರೊಂದಿಗೆ ಗುರುವಾರ ಪಟ್ಟಣದಲ್ಲಿ ವಾರ್ಡ್‌ನ ಕುಂದುಕೊರತೆಗಳ ಕುರಿತು ಚರ್ಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಜೀವನಕ್ಕೆ ಮೂಲ ಸೌಕರ್ಯಗಳು ಅತ್ಯಗತ್ಯವಾಗಿವೆ. ನಾನು ಈ ಬಾರಿ ಜನರ ಆಶೀರ್ವಾದದಿಂದ ಆಯ್ಕೆಯಾಗಿದ್ದೇನೆ. ವಾರ್ಡ್‍ನ ಮತದಾರರ ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ನನ್ನ ಶಕ್ತಿ ಮೀರಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ವಾರ್ಡ್‌ನ ಕುಂದುಕೊರತೆಗಳನ್ನು ತ್ವರಿತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸಹಾಯ ಸಹಕಾರ ನೀಡಿ ಎಂದು ಪಪಂ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿದರು. ಪಪಂ ಸದಸ್ಯರ ಪ್ರತಿನಿಧಿ ಮಶಾಕ ಬಳಗಾರ, ರಿಯಾಜ್ ಕಂಕರಫಿರ, ಇಕ್ಬಾಲ್ ನದಾಫ್, ರಜಾಕ್ ರಬಿನಾಳ, ನಿಸಾರ್ ನದಾಫ್, ಮೈಬೂನ ನದಾಫ್ ಇತರರು ಇದ್ದರು.