Advertisement

ಎ ಪಟ್ಟಿಯ 911 ಫ‌ಲಾನುಭವಿಗಳಿಗೆ ನಿವೇಶನ: ಸಚಿವ ಪ್ರಮೋದ್‌ ಮಧ್ವರಾಜ್‌

02:58 PM Apr 14, 2017 | |

ಉಡುಪಿ: ನಿವೇಶನ ರಹಿತರಿಗೆ ನಿವೇಶನ ನೀಡುವ ಯೋಜನೆಗೆ ಚುರುಕು ಮುಟ್ಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಇನ್ನು 20 ದಿನಗಳೊಳಗೆ ಎ ಪಟ್ಟಿಯಲ್ಲಿ ಬರುವ 911 ಫ‌ಲಾನುಭವಿಗಳಿಗೆ ನಿವೇಶನ ನೀಡುವ ಬಗ್ಗೆ ಪತ್ರಗಳು ಸಿದ್ಧವಾಗಬೇಕೆಂದು ಆದೇಶಿಸಿದರು.

Advertisement

ಅವರು ಎ. 13ರಂದು ಉಡುಪಿ ತಾ.ಪಂ. ಸಭೆಯಲ್ಲಿ ಪಿಡಿಒ ಗಳೊಂದಿಗೆ ಜರಗಿದ ಸಭೆಯಲ್ಲಿ ಮಾತನಾಡಿ, ನಗರಸಭೆಯಲ್ಲಿ 595 ಮತ್ತು ಉಳಿದೆಡೆ 316 ಸಂತ್ರಸ್ತರು ನಿವೇಶನ ರಹಿತರೆಂದು ಗುರುತಿಸಲಾಗಿದೆ. ಈ ಬಗ್ಗೆ ಸಹಕಾರಿ ಸಂಘಗಳ ನಯನಾ ಅವರು ನೋಡೆಲ್‌ ಅಧಿಕಾರಿಯಾಗಿ ನೇಮಕಗೊಡಿರುತ್ತಾರೆ. ಮುಂದಿನ 20 ದಿನಗಳೊಳಗೆ ಸರಿಯಾದ ಸಂತ್ರಸ್ತರ ಪಟ್ಟಿಯನ್ನು ಹಾಗೂ ನಿವೇಶನದ ಬಗ್ಗೆ ಅಂತಿಮ ವರದಿ ನೀಡಲಿದ್ದಾರೆ. ಈ ಪ್ರಕ್ರಿಯೆಯಲ್ಲಿ ಲಾಟರಿ ಮೂಲಕ ನಿವೇಶನಗಳನ್ನು ಹಂಚುವಂತೆ ಸಚಿವರು ಸೂಚಿಸಿದರು.

ಗ್ರಾಮಾಂತರ  ಪ್ರದೇಶದವರಿಗೆ 30-40 ಹಾಗೂ ನಗರ ಪ್ರದೇಶದಲ್ಲಿರು ವವರಿಗೆ 20-30 ಅಳತೆಯ ನಿವೇ ಶನವನ್ನು ನೀಡಲಾಗುವುದು. ಈ ನಿವೇಶನಗಳು ಸರಕಾರದ ಎಲ್ಲ ಇಲಾಖೆಗಳಿಂದಲೂ ದೋಷಮುಕ್ತವೆಂದು ತಿಳಿದ ಬಳಿಕವಷ್ಟೇ ಅವರಿಗೆ ವಿತರಿಸಬೇಕೆಂದು ಸಚಿವರು ಮಾಹಿತಿ ನೀಡಿದರು.

ಗ್ರಾಮಾಂತರ ಪ್ರದೇಶದಲ್ಲಿಯೂ ಕುಡಿಯುವ ನೀರನ್ನು ಟ್ಯಾಂಕರ್‌ ಮೂಲಕ ವಿತರಿಸುವ ಕಾರ್ಯ ಭರದಿಂದ ಸಾಗಿದೆ. ನೀರಿಗಾಗಿ ಬೇಡಿಕೆ ಬಂದಂತೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಸಂಬಂಧಕ ಪಟ್ಟ ಪಿಡಿಒಗಳ ಸಭೆಗೆ ಮಾಹಿತಿ ನೀಡಿದರು.

ನೀರು ಸರಬರಾಜು ಮಾಡುವ ಗುತ್ತಿಗೆದಾರರ ಬಿಲ್‌ ಅನ್ನು ಬಾಕಿ ಇಡಬಾರದೆಂದು ತಿಳಿಸಿದ ಸಚಿವರು ವಾರದೊಳಗೆ ಎಲ್ಲ ಬಿಲ್‌ಗ‌ಳು ಕ್ಲಿಯರ್‌ ಆಗಬೇಕೆಂದು ಆದೇಶಿಸಿದರು. 

Advertisement

ಉಡುಪಿ ನಗರದಲ್ಲಿ  ಪ್ರಸ್ತುತ 45 ರಿಂದ 50 ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಇದೇ ರೀತಿ ಮೇ 30 ವರೆಗೂ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಸಾಧ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು.

ಆಧಾರ್‌ ಲಿಂಕ್‌ ಮಾಡಿ: ಡಿಸಿ
ಕೇಂದ್ರ ಮತ್ತು ರಾಜ್ಯ ನಿವೃತ್ತ ನೌಕರರಿಗೆ ಪಿಂಚಣಿ ನೀಡುವ ಬಗ್ಗೆ ಆಧಾರ್‌ ಲಿಂಕ್‌ ಬಾಕಿ ಇದೆ. ಈ ಕಾರ್ಯವನ್ನು ಅತಿ ತುರ್ತಾಗಿ ಮಾಡಬೇಕು. ಇಲ್ಲವಾದಲ್ಲಿ ಅವರು ಪಿಂಚಣಿ ಪಡೆಯುವಲ್ಲಿ ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹೇಳಿದರು. ಕುಂದಾಪುರ ಸಹಾಯಕ ಕಮಿಷನರ್‌ ಶಿಲ್ಪಾ ನಾಗ್‌, ಉಡುಪಿ ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಸಿಇಓ ಶೇಷಪ್ಪ, ಉಡುಪಿ ತಹಶೀಲ್ದಾರ ಮಹೇಶ್ಚಂದ್ರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next