Advertisement

ಅಬಕಾರಿ ಅಕ್ರಮ ತಡೆಗೆ ಆಗ್ರಹಿಸಿ ಸಿಎಂಗೆ ರಕ್ತದಲ್ಲಿ ಪತ್ರ

05:56 PM Aug 13, 2022 | Shwetha M |

ಮುದ್ದೇಬಿಹಾಳ: ಅಬಕಾರಿ ಇಲಾಖೆ ನಿಯಮಗಳನ್ನು ಮದ್ಯದ ಅಂಗಡಿಗಳು ಉಲ್ಲಂಘಿಸುತ್ತಿದ್ದರೂ ಮೌನವಾಗಿರುವ ಅಬಕಾರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾಮಾಜಿಕ ಹೋರಾಟಗಾರ ಮಂಜುನಾಥಸ್ವಾಮಿ ಕುಂದರಗಿ ಸಿಎಂಗೆ, ವಿಜಯಪುರ ಜಿಲ್ಲಾಧಿಕಾರಿಗೆ ತಮ್ಮ ರಕ್ತದಲ್ಲಿ ಬರೆದ ಪತ್ರವನ್ನು ಶುಕ್ರವಾರ ತಹಶೀಲ್ದಾರ್‌ ಬಿ.ಎಸ್‌. ಕಡಕಭಾವಿ ಅವರಿಗೆ ಸಲ್ಲಿಸಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿ ಬಳಿ ತಮ್ಮ ಕೈಯಿಂದ ತೆಗೆದ ರಕ್ತದಲ್ಲಿ ಗಂಟೆಗೂ ಹೆಚ್ಚು ಕಾಲ ಪತ್ರ ಬರೆದ ಅವರು, ಅಬಕಾರಿ ಇಲಾಖೆ ನಿಯಮಗಳಡಿ ಮದ್ಯದಂಗಡಿಗಳು ನಡೆಯುತ್ತಿಲ್ಲ. ದಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ ಯಥೇತ್ಛವಾಗಿ ನಡೆಯುತ್ತಿದೆ. ಕ್ರಮ ಕೈಗೊಳ್ಳಬೇಕಿದ್ದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ಧರಣಿ ಹೋರಾಟದ ಸಮಯದಲ್ಲಿ ಕೊಟ್ಟಿದ್ದ ಉತ್ತರಗಳಿಗೆ ಕಾಟಾಚಾರಕ್ಕೆ ಎರಡು ದಿನ ಕೆಲವು ನಿಯಮಗಳನ್ನು ಪಾಲನೆ ಮಾಡಿದಂತೆ ಮಾಡಿ ಮತ್ತೆ ತಮ್ಮ ಮೊದಲಿನ ಚಾಳಿ ಶುರು ಮಾಡಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಪತ್ರದ ಮೂಲಕ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next