ಆಧುನಿಕ ಜೀವನದಲ್ಲಿ ಹಲವಾರು ಉಪಯುಕ್ತ ಜೀವನಾವಶ್ಯಕ ವಸ್ತುಗಳ ಜೊತೆಗೆ ಕಂಪ್ಯೂಟರ್, ಟ್ಯಾಬ್ಲೆಟ್, ಮೊಬೈಲ್, ಲ್ಯಾಪ್ ಟಾಪ್ ಗಳು ಅತ್ಯಾವಶಕ ವಸ್ತುಗಳ ಸಾಲಿನಲ್ಲಿ ಸೇರಿ ಕೆಲವು ವರ್ಷಗಳೇ ಕಳೆದವು. ಅವುಗಳ ಸೌಲಭ್ಯಗಳು ಹೊಸದಾಗಿ ಬರುವ ಪ್ರತಿ ಮಾಡೆಲ್ ಗಳಲ್ಲಿಯೂ ಹೆಚ್ಚುತ್ತಿವೆ.
ಹೌದು, ಇಲ್ಲೊಂದು ಕಂಪೆನಿ ಬಹಳ ವಿಶೇಷವಾದ ಲ್ಯಾಪ್ ಟಾಪ್ ವೊಂದನ್ನು ತಯಾರಿಸಿದೆ. ಏನಿದರ ವಿಶೇಷ ಎಂಬ ಕುತೂಹಲ ನಿಮಗಿದ್ದರೇ, ಆ ಇಂಟ್ರೆಸ್ಟಿಂಗ್ ಡಿಟೇಲ್ಸ್ ನಾವು ನಿಮಗೆ ನೀಡುತ್ತೇವೆ.
ಓದಿ : ಇನ್ಮುಂದೆ “ಕೂ”ಮಯ : ಮೂಲೆಗೆ ಸರಿಯುತ್ತಾ ಟ್ವೀಟರ್ ?
ಇದು ಎಲ್ಲಾ ಲ್ಯಾಪ್ ಟಾಪ್ ನಂತೆ ಅಲ್ಲ. ಇದನ್ನು ನೋಡಿದರೇ, ನೀವು ಖಂಡಿತ ಲ್ಯಾಪ್ ಟಾಪ್ ಎಂದು ಹೇಳಲು ಸಾಧ್ಯವಿಲ್ಲ. ಆದರೇ, ಇದು ನಿಜಕ್ಕೂ ಲ್ಯಾಪ್ ಟಾಪ್ ಎಂದು ನೀವು ಒಪ್ಪಿಕೊಳ್ಳಲೇಬೇಕು.
Related Articles
ಅಂತದ್ದೇನಿದೆ ಆ ಲ್ಯಾಪ್ ಟಾಪ್ ನಲ್ಲಿ ಎನ್ನುವ ಪ್ರಶ್ನೆಗೆ ಈ ಲೇಖನ ಸಂಪೂರ್ಣವಾಗಿ ಉತ್ತರಿಸುತ್ತದೆ.
ಯುನೈಟೆಡ್ ಕಿಂಗ್ಡಮ್ (ಯುಕೆ) ಮೂಲದ ಎಕ್ಸ್ ಪಾನ್ಸ್ಕೇಪ್ ಎಂಬ ಕಂಪೆನಿ “Aurora 7” ಎಂಬ ವಿನೂತನ ಲ್ಯಾಪ್ ಟಾಪ್ ನ್ನು ತಯಾರಿಸಿದೆ. ಇದು, ಒಂದಲ್ಲ,ಎರಡಲ್ಲ ಏಳು ಸ್ಕ್ರೀನ್ ಗಳನ್ನು ಹೊಂದಿದೆ ಎಂದರೇ ನೀವು ನಂಬಲೇಬೇಕು.
ಇದು ಪ್ರೋಟೋಟೈಪ್ ಲ್ಯಾಂಡ್ ಸ್ಕೇಪ್ ಪರದೆಯನ್ನು ಹೊಂದಿದ್ದು ಅದು ಮುಖ್ಯ ಸ್ಕ್ರೀನ್ ನ ಮೇಲೆ ಮಡಚಿಕೊಳ್ಳುವಂತೆ ತಯಾರಿಸಲಾಗಿದೆ. ಮುಖ್ಯ ಸ್ಕ್ರೀನ್ ನ ಎರಡೂ ಬದಿಗಳಲ್ಲಿ ಪೋರ್ಟೈಟ್ ಮಾದರಿಯ ಎರಡು ಸ್ಕ್ರೀನ್ ಗಳು, ಹಾಗೂ ಈ ಎರಡೂ ಬದಿಗಳಲ್ಲಿ ಪಾಪ್ ಅಪ್ ಆಗುವ ಸಣ್ಣ ಎರಡು ಸ್ಕ್ರೀನ್ ಗಳನ್ನೊಳಗೊಂಡು ಬಲ ಮೂಲೆಯಲ್ಲಿ ಒಂದು ಸ್ಕ್ರೀನ್ ಸೇರಿ ಒಟ್ಟು ಏಳು ಸ್ಕ್ರೀನ್ ಗಳನ್ನು ಹೊಂದಿದೆ ಈ ವಿಶಿಷ್ಟ ಲ್ಯಾಪ್ ಟಾಪ್.
ಓದಿ : ಶಿವಾನಂದ ಮೇಲ್ಸೇತುವೆಯ ಡೆಡ್ ಲೈನ್‌ಗೆ ಲೆಕ್ಕವೇ ಇಲ್ಲ!
3 ಇಂಚಿನ 4k ಮುಖ್ಯ ಡಿಸ್ ಪ್ಲೇ ನಲ್ಲಿ, ದ್ವಿಮುಖ ಸಂವಹನದಲ್ಲಿ ಫ್ರೇಮ್ ಸ್ವೀಕರಿಸಿದಾಗೆಲ್ಲಾ, ರಿಸಿವರ್ ಕಾಯುತ್ತದೆ. ಸ್ವೀಕೃತಿಯನ್ನು ತಾತ್ಕಾಲಿಕವಾಗಿ ವಿಳಂಬಗೊಳಿಸುವ ಪಿಗ್ಗಿ ಬ್ಯಾಕಿಂಗ್ (Piggybacking) ತಂತ್ರಾಶವನ್ನು ಒಳಗೊಂಡಿದೆ ಈ ಸ್ಕ್ರೀನ್ ಅಥವಾ ಡಿಸ್ ಪ್ಲೇ. ಉಳಿದ ಮೂರು ಸ್ಕ್ರೀನ್ ಗಳು ಒಂದೇ ಗಾತ್ರ ಮತ್ತು ರೆಸಲ್ಯೂಶನ್ ಹೊಂದಿವೆ. ಎಡ ಮತ್ತು ಬಲ ಭಾಗದಲ್ಲಿ ಮೇಲೆ ತೆರೆದುಕೊಳ್ಳುವ ಸ್ಕ್ರೀನ್ ಗಳು 7 ಇಂಚು 1200ಪಿ ಮಾನಿಟರ್ ಹೊಂದಿವೆ. ಬಲ ಭಾಗದ ಮೇಲೆ ಇರುವ ಏಳು ಇಂಚಿನ ಸ್ಕ್ರೀನ್ 1200ಪಿ ಟಚ್ ಸ್ಕೀನ್ ತಂತ್ರಾಶವನ್ನು ಒಳಗೊಂಡಿದೆ.
I9 9900o CPU ಇಂಟಲ್ ಕೋರ್ ನೊಂದಿಗೆ ಎನ್ ಡಿಯ ಜಿಫೋರ್ಸ್, ಜಿಟಿ ಎಕ್ಸ್ 1060 ಜಿಪಿಯು, 64 ಜಿಬಿ RAM, 2.5 ಟಿ ಬಿ ಎಸ್ ಎಸ್ ಡಿ ಸ್ಟೋರೆಜ್ ಹಾಗೂ 2 ಟಿ ಬಿ ಎಚ್ ಡಿ ಡಿ ಸ್ಟೋರೇಜ್ ನ್ನು ಹೊಂದಿದೆ.
ಈ ಪ್ರೋಟೋಟೈಪ್ “Aurora 7” ಸುಮಾರು 26 ಪೌಂಡ್ಸ್ (11.7934 KG) ತೂಕದೊಂದಿಗೆ 4.3 ಇಂಚಿನಷ್ಟು ದಪ್ಪವಾಗಿ ವಿಶೇಷಾಗಿದೆ.
ಬರಹ : ಶ್ರೀರಾಜ್ ವಕ್ವಾಡಿ