Advertisement

ದಾಹ ತಣಿಸಲು ಕುರುಗೋಡು ಕೆರೆ ಸಿದ್ಧ

08:46 AM Mar 18, 2019 | |

ಕುರುಗೋಡು: ಬೇಸಿಗೆಯಲ್ಲಿ ಜನರ ದಾಹ ತಣಿಸಲು 24 ಎಕರೆ ವಿಸ್ತೀರ್ಣದ 450 ಮಿಲಿಯನ್‌ ಲೀಟರ್‌ ಸಾಮರ್ಥ್ಯದ ಕೆರೆಗೆ ಎಚ್‌ಎಲ್‌ಸಿ ಕಾಲುವೆಯಿಂದ ಪುರಸಭೆ ನೀರು ತುಂಬಿಸಿದೆ. ಕಳೆದ 13ವರ್ಷಗಳ ಹಿಂದೆ ಕುರುಗೋಡು ಪಟ್ಟಣದ ಜನತೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿತ್ತು. ಇದರಿಂದ ಬೇಸತ್ತ ಜನತೆ ಸ್ಥಳೀಯ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಿರಂತರ
ಹೋರಾಟ ನಡೆಸಿದ್ದರು. ಇದರ ಪರಿಣಾಮ ಸಿಂದಿಗೇರಿ ರಸ್ತೆಗೆ ಹೊಂದಿಕೊಂಡಿರುವ 24 ಎಕರೆ ಭೂಮಿಯಲ್ಲಿ 2005ರಲ್ಲಿ ಸುಮಾರು 11ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಕೆರೆ ನಿರ್ಮಿಸಲಾಯಿತು.

Advertisement

ಪಟ್ಟಣದಲ್ಲಿ 23ವಾರ್ಡ್‌ಗಳಿದ್ದು, 21 ಸಾವಿರ ಜನಸಂಖ್ಯೆ ಇದೆ.
ನೀರು ಸೋರಿಕೆ: ಕುಡಿಯುವ ನೀರಿಗಾಗಿ ಕೈಗೊಂಡ ಕೆರೆ ನಿರ್ಮಾಣ ಜನೋಪಯೋಗಿ ಆಗಿದ್ದರೂ ನೀರಿನ ಸೋರಿಕೆ, ಅಕ್ರಮ ನೀರಿನ ಬಳ ತಡೆಗಟ್ಟುವುದೇ ದೊಡ್ಡ ಸವಾಲಾಗಿದೆ. ಪ್ರತಿದಿನ ಸುಮಾರು ಮೂರ್‍ನಾಲ್ಕು ಅಡಿಯಷ್ಟು ಕೆರೆಯ ನೀರು ಯಥಾಸ್ಥಿತಿಯಲ್ಲಿ ಸೋರಿಕೆಯಾಗುತ್ತಿದೆ. ಕೆಲ ಖಾಸಗಿ ರೈತರು ಅಕ್ರಮವಾಗಿ ಕೆರೆ ನೀರನ್ನು ಬಳಸಿಕೊಳ್ಳುತ್ತಿದ್ದಾರೆ.

ಭದ್ರತೆ ಮಾಯ: ಕೆರೆಯ ಸುತ್ತಮುತ್ತ ಯಾವುದೇ ರೀತಿಯ ಭದ್ರತೆ ಇಲ್ಲವಾಗಿದೆ. ಇದರ ಪರಿಣಾಮ ಕಳೆದ 2015-16ನೇ
ಸಾಲಿನಲ್ಲಿ ವ್ಯಕ್ತಿಯೊಬ್ಬ ಮೀನು ಹಿಡಿಯಲು ಹೋಗಿ ಅಸು ನೀಗಿದ್ದ. ಇಷ್ಟಾದರೂ ಪುರಸಭೆ ಎಚ್ಚುತ್ತುಕೊಂಡಂತೆ ಕಾಣುತ್ತಿಲ್ಲ. ಕೂಡಲೇ ಅಧಿಕಾರಿಗಳು ಕೆರೆಯ ಸುತ್ತಮುತ್ತ ರಕ್ಷಣೆಗೆ ಮುಂದಾಗಬೇಕಿದೆ.

ಮೇವಿನ ಕೊರತೆ: ಬೇಸಿಗೆ ಅಭಾವ ಹೆಚ್ಚಾಗಿದ್ದು, ಕೆರೆಯಿಂದ ಪೋಲಾಗುವ ನೀರನ್ನು ತಡೆಗಟ್ಟಿ ಜನ ಜಾನುವಾರುಗಳಿಗೆ ನೆರವಾಗಲು ಮೇವು ಬೆಳೆಯಲು ನೀರೊದಗಿಸಬೇಕು. ಬೇಸಿಗೆಯಲ್ಲಿ ನೀರಿನ ಅಭಾವದಿಂದ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೇವಿನ ಕೊರತೆ ಬಾಧಿಸುತ್ತಿದೆ. ಜಿಲ್ಲಾಡಳಿತ ಜಾನುವಾರುಗಳಿಗೆ ಮೇವು ಬೆಳೆಯಲು ಅನುಕೂಲ ಕಲ್ಪಿಸುವ ಜರೂರು ಇದೆ. 

ತಂತಿ ಬೇಲಿ ನಿರ್ಮಾಣ  ಬೇಸಿಗೆ ಹಂಗಾಮಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೆರೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಲಾಗಿದೆ. ಈ ಬಗ್ಗೆ ಯಾವುದೇ ದೂರು ಬಂದಿಲ್ಲ. ಆದರೆ, ಕುಡಿಯುವ ನೀರಿನ ಸೋರಿಕೆ ಅಕ್ರಮ ಬಳಕೆ ಬಗ್ಗೆ ಮಾಹಿತಿ ಇದೆ. ಚುನಾವಣೆ ಮುಗಿದ ನಂತರ ಸೂಕ್ತ ಕ್ರಮ ಕೈಗೊಂಡು ತಂತಿ ಬೇಲಿ ನಿರ್ಮಿಸಲಾಗುತ್ತದೆ. 
 ಎಚ್‌. ಫಿರೋಜ್‌ ಖಾನ್‌, ಪುರಸಭೆ ಮುಖ್ಯಾಧಿಕಾರಿ, ಕುರುಗೋಡು

Advertisement

ನೀರಿನ ಅಕ್ರಮ ತಡೆಯಲಿ ಪುರಸಭೆ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಿದ್ದಾರೆ. ಆದರೆ ಕೆರೆಯಿಂದ ನೀರು ಪೋಲಾಗುವುದು, ಖಾಸಗಿಯವರು ನೀರನ್ನು ಅಕ್ರಮವಾಗಿ ಬಳಸಿಕೊಳ್ಳುವುದನ್ನು ತಡೆಗಟ್ಟಬೇಕಿದೆ. ಕೆರೆಗೆ ಸೂಕ್ತ ಭದ್ರತೆ ಇಲ್ಲದ ಕಾರಣ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.  ದಿನವರೆಗೂ ಸಹ ಸತ್ತ ವ್ಯಕ್ತಿ ಕುಟುಂಬಕ್ಕೆ ಪುರಸಭೆಯಾಡಳಿತ ಬಿಡಿಗಾಸನ್ನೂ ಕೊಟ್ಟಿಲ್ಲ. ಇದ್ಯಾವ ನ್ಯಾಯ?. 
 ಎಚ್‌.ಎಂ. ವಿಶ್ವನಾಥಸ್ವಾಮಿ. ಬೀದಿಬದಿ ವ್ಯಾಪಾರಸ್ಥರ ಸಂಘದ ಜಿಲ್ಲಾ ಕಾರ್ಯದರ್ಶಿ.

ಈಗೀಗ ನೀರು ಬಿಡಾಕತ್ಯಾರ ಪುರಸಭೇವ್ರು ಈಗೀಗ ನೀರ್‌ ಬೇಷ್‌ ಬಿಡಾಕತ್ಯಾರ. ಜಾತ್ರಿ ಬ್ಯಾರೆ ಐತಂತ ನೀರ್‌ ಬಿಡಾಕತ್ಯಾರೇನು ತಿಳಿದ್ಹಂಗೆ ಹಾಗೈತಿ. ಮುಂದೇನ್‌ ಮಾಡ್ತಾರೋ ಗೊತ್ತಿಲ್ರಿ  ಸುಮಲತಾ, ಕುರುಗೋಡು ಪಟ್ಟಣ ನಿವಾಸಿ. 

Advertisement

Udayavani is now on Telegram. Click here to join our channel and stay updated with the latest news.

Next