Advertisement

ಭಾರತಕ್ಕೆ ಜಾಗತಿಕ ವ್ಯವಸ್ಥೆಯಲ್ಲಿ ಪ್ರಮುಖ ಸ್ಥಾನ: ರಾಬರ್ಟ್‌ ಇವಾನ್‌

05:33 PM Feb 02, 2023 | Team Udayavani |

ಮಂಗಳಗಂಗೋತ್ರಿ: ಭಾರತ ಮತ್ತು ಯುರೋಪಿಯನ್‌ ಒಕ್ಕೂಟವು ತಂತ್ರಗಾರಿಕೆ ಪಾಲು ದಾರರಾಗಿದ್ದು ಸಾಮಾನ್ಯ ವಿಶ್ವ ದೃಷ್ಟಿಕೋನಗಳನ್ನು ಬೆಂಬಲಿಸಿವೆ. ಇವುಗಳು ಬಹುದ್ರುವೀಯ, ಉದಾರ ಮತ್ತು ಜಾಗತಿಕ ವಿಶ್ವಕ್ರಮವನ್ನು ಪ್ರೋತ್ಸಾಹಿಸಿವೆ.

Advertisement

ಯುರೋಪಿಯನ್‌ ಒಕ್ಕೂಟವು ಜಾಗತಿಕ ಮಟ್ಟದಲ್ಲಿ ಬಲಿಷ್ಠವಾದ ಅರ್ಥಿಕ ವ್ಯವಸ್ಥೆಯನ್ನು ಹೊಂದಿದ್ದು ಭಾರತದ ಮುಖ್ಯವಾದ ವ್ಯಾಪಾರ ಪಾಲುದಾರ ಸಂಘಟನೆಯಾಗಿದೆ. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದ್ದು ಜಾಗತಿಕ ವ್ಯವಸ್ಥೆಯಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆದುಕೊಂಡಿದೆ ಎಂದು ಯುರೋಪಿಯನ್‌ ಸಂಸತ್ತು ಮಾಜಿ ಸದಸ್ಯ ರಾಬರ್ಟ್‌ ಇವಾನ್ಸ್‌ ಅಭಿಪ್ರಾಯಪಟ್ಟರು.

ಅವರು ಮಂಗಳೂರು ವಿ.ವಿ., ರಾಜ್ಯಶಾಸ್ತ್ರ ವಿಭಾಗ ಮತ್ತು ಯುರೋಪಿಯನ್‌ ಅಧ್ಯಯನ ಕೇಂದ್ರ, ಮಾಹೆ, ಯುರೋಪಿಯನ್‌ ಸಂಸತ್ತಿನ ವಿಶ್ರಾಂತ ಸದಸ್ಯರ ಸಂಘದ ಸಹಯೋಗದೊಂದಿಗೆ ಮಂಗಳೂರು ವಿ.ವಿ.ಯಲ್ಲಿ ನಡೆದ ಬ್ರೆಕ್ಸಿಟ್‌ ಅನಂತರದ ಜಗತ್ತಿನಲ್ಲಿ ಭಾರತ- ಯುರೋಪಿಯನ್‌ ಯೂನಿಯನ್‌ ಸಂಬಂಧಗಳ ಕುರಿತು ವಿಶೇಷ ಉಪನ್ಯಾಸ ನೀಡ ಮಾತನಾಡಿದರು. ಮಾಹೆ ಯುರೋಪಿ ಯನ್‌ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ| ನೀತಾ ಇನಾಂದಾರ್‌
ಮಾತನಾಡಿ, ಯುರೋಪಿ ಯನ್‌ ಒಕ್ಕೂಟವು ಜಾಗತಿಕ ಮಟ್ಟದಲ್ಲಿ ಪ್ರಮುಖ ಸಂಘಟನೆಯಾಗಿದ್ದು ಭಾರತದ ಜತೆಗೆ ಸಂಬಂಧ ವೃದ್ಧಿಸಲು ಒಕ್ಕೂಟವು ಒಲವನ್ನು ತೋರಿದ್ದು, ಈ ನಿಟ್ಟಿನಲ್ಲಿ ಭಾರತವು ಬ್ರಿಟನ್‌ ಯುರೋಪಿಯನ್‌ ಒಕ್ಕೂಟದಿಂದ ಹೊರ ನಡೆದ ಅನಂತ ರದಲ್ಲಾಗುತ್ತಿರುವ ಬೆಳವಣಿಗೆ ಮತ್ತು ಸವಾಲುಗಳನ್ನು ಅವಲೋಕಿಸುವುದು ಸೂಕ್ತವೆನಿಸುತ್ತದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರೊ| ಜಯರಾಜ್‌ ಅಮೀನ್‌, ಯುರೋಪಿಯನ್‌ ಒಕ್ಕೂಟವು ಇಂದು ಜಾಗತಿಕ ಮಟ್ಟದಲ್ಲಿ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊಂದಿರುವ ಸಂಘಟನೆಯಾಗಿದ್ದು ರಾಜಕೀಯ ಕ್ಷೇತ್ರಗಳಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದೆ ಎಂದರು.

ವಿಭಾಗದ ಸಹ ಪ್ರಾಧ್ಯಾಪಕ ಡಾ| ದಯಾನಂದ ನಾಯ್ಕ, ಡಾ| ರಾಜ್‌ ಪ್ರವೀಣ್‌ ಸಿ.ಎಂ., ಇಂಗ್ಲಿಷ್‌ ವಿಭಾಗದ ಪ್ರಾಧ್ಯಾಪಕ ಪ್ರೊ| ಕಿಶೋರಿ ನಾಯಕ್‌, ಸಮಾಜಶಾಸ್ತ್ರ ವಿಭಾಗದ ಡಾ| ಸಬಿತಾ, ಮಣಿಪಾಲ ವಿಶ್ವವಿದ್ಯಾನಿಲಯದ ಅಧ್ಯಾಪಕ, ವಿದ್ಯಾರ್ಥಿಗಳು, ಮಂಗಳೂರು ವಿ.ವಿ. ಸಂವಹನ ವಿಭಾಗ, ಅರ್ಥಶಾಸ್ತ್ರ ವಿಭಾಗ ಮತ್ತು ರಾಜ್ಯಶಾಸ್ತ್ರ ವಿಭಾಗದ ಅಧ್ಯಾಪಕರು ಸ್ನಾತಕೋತ್ತರ, ಸಂಶೋಧನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭೂಮಿಕಾ ನಿರೂಪಿಸಿದರು. ಡಾ| ಸಿ.ಎಂ. ರಾಜ್‌, ಪ್ರವೀಣ್‌ ವಂದಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next